ಶ್ರೀ ಆಂಜನೇಯ ಚರಿತ್ರೆ – ಭಾಗ – 1 : ಪುಟ – 31

224
Share

ಶ್ರೀ ಆಂಜನೇಯ ಚರಿತ್ರೆ – ಭಾಗ – 1 : ಪುಟ – 31
ಓಂ ನಮೋ ಹನುಮತೇ ನಮಃ

ಸುಗ್ರೀವಾದಿಗಳಿಗೆ ಸೀತಾ ದರ್ಶನ
277) ಹೀಗಿರುವಾಗ ಒಂದುದಿನ ಮಟಮಟ ಮಧ್ಯಾಹ್ನದ ಸಮಯ. ಹನುಮಂತನ ಸೂಕ್ಷ್ಮವಾದ ಕಿವಿಗೆ ದೂರದಲ್ಲಿ ಎಲ್ಲೋ ಹೆಂಗಸು ಅಳುತ್ತಿರುವ ಶಬ್ದ ಕೇಳಿಸಿದಂತೆ ಆಯಿತು.
278) ಕೂಡಲೇ ಅವನು ಕಿವಿಯನ್ನು ನಿಮಿರಿಸಿ ಸುತ್ತಮುತ್ತಲೂ ಪರಿಶೀಲಿಸಿದ.
279) ಇದನ್ನು ಗಮನಿಸಿದ ಉಳಿದ ನಾಲ್ಕು ವಾನರರು ಮರಗಳನ್ನು ಏರಿ ಸುತ್ತಲೂ ನೋಡಲಾರಂಭಿಸಿದರು.
280) ಕ್ರಮೇಣ ಆ ಅಳುವಿನ ದನಿ ಹತ್ತಿರವಾಯಿತು. ಅದು ಭೂಮಿಯ ಮೇಲಿಂದ ಅಲ್ಲದೇ ಆಕಾಶದಿಂದ ಬರುತ್ತಿದೆ. ಇದೇನು! ಅಂದುಕೊಳ್ಳುತ್ತಿರುವಾಗಲೇ ಆಕಾಶದಲ್ಲಿ ದೂರದಲ್ಲಿ ರಾಕ್ಷಸ ಚಿಹ್ನೆಗಳಿರುವ ರಥ ಕಾಣಿಸಿತು.
281) ಇದು ವಾಲಿಯ ಕುತಂತ್ರ ವಿರಬಹುದು ಎಂದು ಭಾವಿಸಿ ಐವರೂ ಒಂದು ಕಡೆ ಸೇರಿ, ಅಗತ್ಯ ಬಿದ್ದರೆ ಎಂದುರಿಸಲು ಸಿದ್ಧರಾದರು.
282) ಅಳುವಿನ ದನಿ ಇನ್ನೂ ಹತ್ತಿರವಾಯಿತು. ಅಳುವಿನ ಮಧ್ಯೆ ರಾಮಾ ಲಕ್ಷ್ಮಣಾ ಅನ್ನುವಂತೆ ಕೇಳಿಸುತ್ತಿದೆ. ಇದು ಯಾರ ಹೆಸರಪ್ಪಾ! ಅಂದುಕೊಳ್ಳುತ್ತಲೇ ಮೇಲಿನಿಂದ ಒಂದು ಚಿಕ್ಕ ಮೂಟೆ ಇವರ ನಡುವೆ ಬಿತ್ತು.
283) ಅವರು ಆ ಮೂಟೆಯನ್ನೂ, ಆಕಾಶದಲ್ಲಿ ಹೋಗುತ್ತಿದ್ದ ರಥವನ್ನೂ ನೋಡುವಷ್ಟರಲ್ಲಿ ಆ ರಥವು ಮಿಂಚಿನಂತೆ ದಕ್ಷಿಣ ದಿಕ್ಕಿಗೆ ಹಾರುತ್ತಾ ಕಣ್ಮರೆಯಾಯಿತು.
284) ಕ್ಷಣಾರ್ಧ ನೋಡಿದ್ದರಲ್ಲಿ,
ಆ ರಥದಲ್ಲಿ ಇದ್ದುದು ರಾವಣಾಸುರನಂತೆ ಇತ್ತು. ಅವನು ಯಾರೋ ಮಾನವ ಯುವತಿಯನ್ನು ಬಲಾತ್ಕಾರವಾಗಿ ರಥದಲ್ಲಿ ಹಾಕಿಕೊಂಡು ಹಾರಿಸಿಕೊಂಡು ಹೋಗುತ್ತಿದ್ದಂತೆ ಇತ್ತು. ಬಳಬಳನೆ ಅಳುತ್ತಲೇ ಅವಳು ತನ್ನ ಮೈಮೇಲಿನ ಆಭರಣಗಳನ್ನು ತೆಗೆದು, ತಲೆಯ ಮೇಲೆ ಹೊದ್ದಿದ್ದ ಉತ್ತರೀಯದಲ್ಲಿ ಹುಷಾರಾಗಿ ಮೂಟೆ ಕಟ್ಟಿ ಕೆಳಕ್ಕೆ ಎಸೆದಿದ್ದಳು. ಎಸೆದಿದ್ದ ಪರಿಯನ್ನು ನೋಡಿದರೆ, ಬೇಕೆಂದೇ ಎಸೆದಂತೆ ಇತ್ತು.
285) ಆಭರಣಗಳು, ಸೀರೆ ಅಂಚು ಇವುಗಳನ್ನು ನೋಡಿ, ತನ್ನವರು ತಾನು ಹೋದ ದಿಕ್ಕನ್ನು ಪತ್ತೆಹಚ್ಚುತ್ತಾರೆ ಎಂದು ಅವಳ ಉದ್ದೇಶವಿದ್ದಂತೆ ತೋರಿತು.
286) ಆದರೂ ಈ ರಾವಣಾಸುರನಿಗೆ
ಈ ವಯಸ್ಸಿನಲ್ಲಿ ಇದೇನು ಬುದ್ಧಿ? ಅಂದುಕೊಳ್ಳುತ್ತಲೇ ಸುಗ್ರೀವ, ಹನುಮಂತರು ಆ ಬಟ್ಟೆ ಗಂಟನ್ನು ಹುಷಾರಾಗಿ ಪರಿಶೀಲಿಸಿದರು. ಅದನ್ನು ಬಿಚ್ಚಿ ನೋಡೋಣ ಎಂದು ಹೊಳೆಯಲಿಲ್ಲ. ಏನೂ ಅರ್ಥವಾಗಲಿಲ್ಲ.
( ಮುಂದುವರೆಯುವುದು )

* ರಚನೆ : ಪೂಜ್ಯ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ

* ಸಂಗ್ರಹ :
ಭಾಲರಾ
ಬೆಂಗಳೂರು


Share