ಶ್ರೀ ಆಂಜನೇಯ ಚರಿತ್ರೆ ಭಾಗ 1 : ಪುಟ 110

191
Share

ಶ್ರೀ ಆಂಜನೇಯ ಚರಿತ್ರೆ ಭಾಗ 1 : ಪುಟ 110
ಓಂ ನಮೋ ಹನುಮತೇ ನಮಃ

ಇಂತಹ ಈ ಅಪೂರ್ವ ಸ್ವರೂಪವನ್ನು ಸೀತಾದೇವಿಗೆ ತೋರಿಸಿ ಹನುಮಂತನು ಕೂಡಲೇ ತನ್ನ ಆಕಾರವನ್ನು ಹೆಚ್ಚಿಸಿ ಒಬ್ಬೊಬ್ಬ ಶತಕಂಠನಿಗೂ ಒಂದೊಂದು ರೂಪದಂತೆ ಅಷ್ಟು ಸಾವಿರ ಪಂಚಮುಖ ಹನುಮಂತನಾಗಿ ಅವರೊಡನೆ ಭೀಕರವಾಗಿ ಯುದ್ಧ ಮಾಡಿದನು.
ಸೀತಾದೇವಿ ಕಾಳಿಯಾಗಿ ಯುದ್ಧ ಮಾಡಿದ್ದು
ಹನುಮಂತನು ತನ್ನ ವಿಶ್ವರೂಪವನ್ನು ತೋರಿಸಿದಾಗ ಸೀತಾದೇವಿಯು ಸಹ ಕಾಳಿಯಾಗಿ ರೂಪ ಧರಿಸಿ ಕೈಯಲ್ಲಿ ಧನಸ್ಸನ್ನು ಹಿಡಿದು ಸಿಂಹನಾದ ಮಾಡಿದಳು. ಅವಳ ಎದುರು ಸಾಕ್ಷಾತ್ಕರಿಸಿದ ಹನುಮಂತನು ಅವಳನ್ನು ತನ್ನ ಭುಜದ ಮೇಲೆ ಕೂರಿಸಿಕೊಂಡು ಶತಕಂಠ ರಾಕ್ಷಸರ ಮುಂದೆ ಬಂದನು. ಕಾಳಿಕಾ ರೂಪದಲ್ಲಿದ್ದ ಸೀತಾದೇವಿ ಕೂಡ ವಿವಿಧ ಆಯುಧಗಳನ್ನು ಧರಿಸಿ ಬಾಣಗಳ ಮಳೆ ಸುರಿಸುತ್ತ ಅಷ್ಟು ಸಾವಿರ ಮಂದಿ ಶತಕಂಠರನ್ನು ಕಲ್ಲೋಲಪಡಿಸಿದಳು.
ಆದರೆ ಅವರ ರಕ್ತ ನೆಲದ ಮೇಲೆ ಬೀಳುತಲೆ ಕೆಲವು ಲಕ್ಷ ಮಂದಿ ಶತಕಂಠರು ಹುಟ್ಟುತ್ತಿದ್ದಾರೆ. ಹೀಗಾಗಿ ಕಾಳಿಕಾ ರೂಪದಲ್ಲಿದ್ದ ಸೀತಾದೇವಿಗೂ ಯುದ್ಧ ಮಾಡುವುದು ಕಷ್ಟವಾಯಿತು. ಕೆಳಗೆ ಕುಳಿತು ರಾಮಜಪ ಮಾಡುತ್ತಿದ್ದ ಹನುಮಂತನು ಇದನ್ನು ಗಮನಿಸಿ ತನ್ನ ಬಾಲವನ್ನು ಇನ್ನಷ್ಟು ಹೆಚ್ಚಿಸಿ ಎಲ್ಲಿಯೂ ಸಂಧಿ ಇಲ್ಲದಂತೆ ಹರಡಿ ಬಿಟ್ಟ. ಹಾಗೆ ಮಾಡಿದಾಗಿನಿಂದ ಶತಕಂಠರುಗಳ ರಕ್ತ ನೆಲಕ್ಕೆ ಬೀಳಲಿಲ್ಲವಾದ್ದರಿಂದ ಹೊಸ ಸಂಸತಿ ಹುಟ್ಟಲಿಲ್ಲ. ಆಗ ಕಾಳಿಕಾದೇವಿ ವಿಜೃಂಭಿಸಿ ಅವರೆಲ್ಲರ ತಲೆಗಳನ್ನು ಕತ್ತರಿಸಿ ಹಾಕಿದಳು. ಹನುಮಂತನು ಬೇರೆ ಬೇರೆ ರೂಪಗಳಲ್ಲಿ ಇತರ ರಾಕ್ಷಸರನ್ನು ಧೂಳಿಪಟ ಮಾಡಿದನು. ಕೊನೆಗೆ ರಾಕ್ಷಸರೆಲ್ಲ ಮರಣಿಸಿದರು. ನಿಜವಾದ ಶತಕಂಠ ಮಾತ್ರ ಉಳಿದಿದ್ದ. ಸೀತದೇವಿ ಅವನೋಡನೆ ಯುದ್ಧ ಮಾಡುತ್ತಿದ್ದಳು. ಆದ್ದರಿಂದ ಹನುಮಂತ ತನ್ನ ರೂಪಗಳನ್ನು ಉಪಸಂಹರಿಸಿಕೊಂಡನು. ಸೀತಾದೇವಿಯನ್ನು ಹೊತ್ತಿದ್ದ ರೂಪವೊಂದನ್ನೇ ಉಳಿಸಿಕೊಂಡ .
( ಮುಂದುವರೆಯುವುದು )

* ರಚನೆ : ಪೂಜ್ಯ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ

* ಸಂಗ್ರಹ
ಭಾಲರಾ
ಬೆಂಗಳೂರು


Share