ಶ್ರೀ ಆಂಜನೇಯ ಚರಿತ್ರೆ ಭಾಗ 1 : ಪುಟ – 108

160
Share

ಶ್ರೀ ಆಂಜನೇಯ ಚರಿತ್ರೆ ಭಾಗ – 1 : ಪುಟ 108
ಓಂ ನಮೋ ಹನುಮತೇ ನಮಃ

ಶತಕಂಠನ ತಲೆ ಮತ್ತೆ ಮತ್ತೆ ಹುಟ್ಟಿದ್ದು
ಕೊನೆಗೆ ಶ್ರೀರಾಮನು ತನ್ನ ಬಾಣಗಳಿಂದ ಶತಕಂಠನ ತಲೆಗಳನ್ನು ಕತ್ತರಿಸುತ್ತಾ ಬಂದನು. ಆದರೆ ಆ ತಲೆಗಳು ಮತ್ತೆ ಮತ್ತೆ ಹುಟ್ಟುತ್ತಿದ್ದವು. ಈ ಮಧ್ಯೆ ತಲೆ ಕತ್ತರಿಸಿದಾಗಲೆಲ್ಲ ರಕ್ತದ ಬಿಂದುಗಳು ಬಿದ್ದ ಕಡೆಗಳೆಲ್ಲೆಲ್ಲ ಒಬ್ಬೊಬ್ಬ ಹೊಸ ಶತಕಂಠ ಹುಟ್ಟಿಕೊಳ್ಳುತ್ತಿದ್ದ. ಅವರು ಸಹ ಘೋರವಾಗಿ ಯುದ್ಧ ಮಾಡುತ್ತಿದ್ದಾರೆ. ಪರಿಸ್ಥಿತಿ ಕ್ಷಣ ಕ್ಷಣಕ್ಕೂ ವಿಷಮಿಸುತ್ತಿದೆ. ಹೀಗೆ ಸಾವಿರಾರು ಮಂದಿ ಶತಕಂಠರು ಹುಟ್ಟಿ ರಾಮ ಲಕ್ಷ್ಮಣ ಭರತ ಶತ್ರುಜ್ಞರನ್ನು ಸುತ್ತುವರೆದು ಬಾಣಗಳಿಂದ ಮುಚ್ಚ ತೊಡಗಿದರು. ರಾಮ ಸೋದರರು ಧೈರ್ಯವಾಗಿ ಯುದ್ಧ ಮಾಡುತ್ತಿದ್ದರು. ಆದರೆ ಒಬ್ಬೊಬ್ಬರಾಗಿ ಮೂರ್ಚೆ ಹೋಗುತ್ತಿದ್ದರು. ಕೊನೆಗೆ ಶ್ರೀ ರಾಮನು ಮೂರ್ಛೆ ಹೋಗಿ ಕೂಡಲೇ ಸಾವರಿಸಿಕೊಂಡು ಎದ್ದು ಯುದ್ಧ ಮಾಡಿದ. ಹೀಗೆ ಅನೇಕ ಬಾರಿ ನಡೆಯಿತು. ಎಂದೂ ಯುದ್ಧಕ್ಕೆ ಬರದ ಸೀತಾದೇವಿ ಈ ಯುದ್ಧಕ್ಕೆ ಬಂದು ರಾಮನನ್ನು ನೋಡಿ ಹೆದರಿದಳು. ಈಗ ಏನು ಮಾಡುವುದು ಎಂದು ಚಿಂತೆಯಲ್ಲಿ ಮುಳುಗಿಹೋದಳು. ಅಷ್ಟರಲ್ಲಿ ಗರ್ಗ ಮುನಿಯು ಅಲ್ಲಿಗೆ ಬಂದು ಸೀತಮ್ಮನಿಗೆ ಧೈರ್ಯ ಹೇಳಿ, ದ್ವಾದಶಾಕ್ಷರ ಹನುಮಂತನ ಮಂತ್ರವನ್ನು ಉಪದೇಶಿಸಿದ. ಅವಳು ಹನುಮಂತನನ್ನು ಹೀಗೆ ಸ್ತುತಿಸಿದಳು .

( ಮುಂದುವರೆಯುವುದು )

* ರಚನೆ : ಪೂಜ್ಯ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ

* ಸಂಗ್ರಹ
ಭಾಲರಾ
ಬೆಂಗಳೂರು


Share