2, ಲಕ್ಷ ಲಾಡು ವಿತರಣೆ- ಹೊಸ ವರ್ಷಕ್ಕೆ ಯೋಗಾ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ

234
Share

 

 

 

ಮೈಸೂರು, ಕಳೆದ ಹಲವಾರು ವರ್ಷಗಳಿಂದ ಅನೂಚಾನವಾಗಿ ನಡೆಸಿಕೊಂಡು ಬರುತ್ತಿರುವಂತೆ ಈ ವರ್ಷವೂ ಸಹ ನೂತನ ಕ್ರೈಸ್ತ ವರ್ಷಾರಂಭದ ಅಂಗವಾಗಿ ದಿನಾಂಕ : 01.01.2023 ( ಭಾನುವಾರ ) ದಂದು ಬೆಳಗ್ಗೆ 04.00 ಗಂಟೆಯಿಂದ ಪ್ರಾರಂಭಿಸಿ ಶ್ರೀ ಯೋಗಾನರಸಿಂಹಸ್ವಾಮಿಯವರಿಗೆ ವಿಶೇಷ ಮತ್ತು ಶ್ರೀರಂಗಂಕ್ಷೇತ್ರ ” “ ಮಧುರ ಕ್ಷೇತ್ರಗಳಿಂದ ತರಿಸಿರುವ “ ತೋಮಾಲೆ ” ಮತ್ತು “ ಸ್ವರ್ಣಪುಷ್ಪದಿಂದ ಶ್ರೀಸ್ವಾಮಿಗೆ “ ಸಹಸ್ರನಾಮರ್ಚನೆ ” ಮತ್ತು ದೇವಾಲಯದ ಉತ್ಸವ ಮೂರ್ತಿಯಾದ ಶ್ರೀಮಲಯಪ್ಪನ್ ಸ್ವಾಮಿ , ಪದ್ಮಾವತಿ ಮತ್ತು ಮಹಾಲಕ್ಷ್ಮಿ ದೇವರಿಗೆ ದೇವಾಲಯದ ಆವರಣದಲ್ಲಿ “ ಏಕಾದಶ ಪ್ರಾಕಾರೋತ್ಸವ ” ಹಾಗೂ “ ಇಪ್ಪತ್ತು ಕ್ವಿಂಟಾಲ್ ಪುಳಿಯೋಗರೆ ನಿವೇದನೆ ” ಮತ್ತು ದೇವಾಲಯಕ್ಕೆ ಆಗಮಿಸುವ ಎಲ್ಲಾ ಭಕ್ತಾದಿಗಳಿಗೆ ಈ ಎರಡು ಲಕ್ಷ ತಿರುಪತಿ ಮಾದರಿಯ ಲಡ್ಡು ವಿತರಣಾ ಕಾರ್ಯಕ್ರಮವನ್ನು ಪರಮ ಪೂಜ್ಯ ಪ್ರೋ : ಭಾಷ್ಯಂ ಸ್ವಾಮೀಜಿಯವರ ದಿವ್ಯ ನೇತೃತ್ವದಲ್ಲಿ ಏರ್ಪಡಿಸಲಾಗಿದೆ . ಪ್ರಾರಂಭದಲ್ಲಿ ಅ ೦ ದರೆ 1994 ನೇ ಇಸವಿಯಲ್ಲಿ ಅಂದಾಜು ಒಂದು ಸಾವಿರ ಲಡ್ಡು ವಿತರಣೆಯಿಂದ ಪ್ರಾರಂಭಿಸಿ ಕಳೆದ ಹಲವಾರು ವರ್ಷಗಳಿಂದ ಪ್ರತಿ ವರ್ಷ ಒಂದು ಲಕ್ಷ ಮತ್ತು ಎರಡು ಲಕ್ಷ ಲಡ್ಡು ಪ್ರಸಾದವನ್ನು ಭಕ್ತಾದಿಗಳಿಗೆ ವಿತರಣೆ ಮಾಡಲಾಗುತ್ತಿದೆ . ಈ ವರ್ಷವೂ ಸಹ ಇನ್ನೂ ಹೆಚ್ಚು ಅಂದರೆ ಎರಡು ಲಕ್ಷ ಲಡ್ಡುವನ್ನು ವಿತರಣೆ ಮಾಡಲು ದೇವಸ್ಥಾನದ ವತಿಯಿಂದ ತಯಾರಿ ನಡೆಯುತ್ತಿದೆ . ಈ ವರ್ಷ ಅಂದಾಜು ( 2,000 ) ಗ್ರಾಂ ತೂಕದ ( 10,000 ) ಲಡ್ಡುಗಳು ಹಾಗೂ ( 150 ) ಗ್ರಾಂ ತೂಕದ ( 2 ಲಕ್ಷ ) ಲಡ್ಡುಗಳನ್ನು ದೇವಾಲಯಕ್ಕೆ ಬರುವ ಎಲ್ಲಾ ಭಕ್ತಾದಿಗಳಿಗೆ ಯಾವುದೇ ಜಾತಿ , ಮತ ಮತ್ತು ಭೇದವಿಲ್ಲದೆ ಉಚಿತವಾಗಿ ವಿತರಿಸಲಾಗುವುದು . ಲಡ್ಡು ಪ್ರಸಾದವನ್ನು ವಿಶೇಷವಾಗಿ 60 ಮಂದಿ ನುರಿತ ಬಾಣಸಿಗರಿಂದ ತಯಾರಿಸಲಾಗಿದ್ದು , ದಿನಾಂಕ : 21.12.2022 ರಿಂದ ಪ್ರಾರಂಭಿಸಿ 31.12.2022 ರವರೆಗೂ ಲಡ್ಡು ತಯಾರಿ ಕಾರ್ಯ ನಡೆಯುತ್ತದೆ . ಲಡ್ಡು ತಯಾರಿಕೆಗೆ ಹಾಕಿರುವ ಸಾಮಗ್ರಿಗಳು : 75 ಕ್ವಿಂಟಾಲ್ ಕಡ್ಲೆಹಿಟ್ಟು , 200 ಕ್ವಿಂಟಾಲ್ ಸಕ್ಕರೆ , 6,000 ಲೀಟರ್ ಖಾದ್ಯ ತೈಲ , 200 ಕೆ.ಜಿ. ಗೋಡಂಬಿ , 200 ಕೆ.ಜಿ. ಒಣದ್ರಾಕ್ಷಿ , 100 ಕೆ.ಜಿ. ಬಾದಮಿ , 500 ಕೆ.ಜಿ. ಂಡ್ ಸಕ್ಕರೆ , 1,000 ಕೆ.ಜಿ. ಬೂರಾ ಸಕ್ಕರೆ , 20 ಕೆ.ಜಿ. ಪಿಸ್ಸಾ , 50 ಕೆ.ಜಿ. ಏಲಕ್ಕಿ , 40 ಕೆ.ಜಿ. ಯಾತ್ರ , 10 ಕೆ.ಜಿ. ಪಚ್ಚೆ ಕರ್ಪೂರ , 100 ಕೆ.ಜಿ. ಲವಂಗಗಳನ್ನು ಬಳಸಿ ತಯಾರಿಸಲಾಗಿದೆ . 

 

. ಉದ್ದೇಶ : ಲೋಕ ಕಲ್ಯಾಣಾರ್ಥವಾಗಿ ಯಾವುದೇ ಜಾತಿ , ಮತಗಳ ಭೇದವಿಲ್ಲದೆ ಪ್ರಪಂಚದ ಎಲ್ಲೆಡೆ ಆಚರಿಸುವ ಕ್ರೈಸ್ತ ವರ್ಷಾರಂಭದ ಹಿನ್ನೆಲೆಯಲ್ಲಿ ವಿಶ್ವಶಾಂತಿ , ಭ್ರಾತೃತ್ವ ಮತ್ತು ಸರ್ವಧರ್ಮ ಸಮನ್ವಯತೆಗಾಗಿ ಮತ್ತು ನಾಡಿನ ಎಲ್ಲಾ ಜನರ ಒಳಿತಿಗಾಗಿ ಪ್ರಾರ್ಥಿಸಿ ಈ ಲಡ್ಡು ಪ್ರಸಾದ ನಿವೇದನೆ ಮತ್ತು ಭಕ್ತಾದಿಗಳಿಗೆ ವಿನಿಯೋಗ ಕಾರ್ಯಕ್ರಮವನ್ನು ದೇವಾಲಯದ ಸಂಸ್ಥಾಪಕರಾದ ಪ್ರೋ ಭಾಷ್ಯಂ ಸ್ವಾಮೀಜಿಯವರ ದಿವ್ಯ ಸಾನಿಧ್ಯ ಮತ್ತು ನೇತೃತ್ವದಲ್ಲಿ ಹಾಗೂ ಎಲ್ಲಾ ಭಕ್ತಾದಿಗಳ ನೆರವಿನಿಂದ ಮತ್ತು ಸಂಪೂರ್ಣ ಸಹಕಾರದಿಂದ ಈ ಮಹತ್ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ . ಲೋಕಕಲ್ಯಾಣಾರ್ಥಕ್ಕೋಸ್ಕರ ಮತ್ತು ದೇಶದ ಎಲ್ಲಾ ಜನರ ಒಳಿತಿಗಾಗಿ , ಸಮಸ್ತ ಜನರಿಗೆ ಸುಖ ಶಾಂತಿ ನೆಮ್ಮದಿ ದೊರೆಯಿಲಿ ಎಂದು ಪ್ರಾರ್ಥಿಸುವ ಮತ್ತು ಎಲ್ಲಾ ಭಕ್ತಾದಿಗಳು ಒಂದೇ ಎಂದು ಸಾರುವ ಏಕೈಕ ದೃಷ್ಟಿಯಿಂದ ಈ ಎಲ್ಲಾ ಕಾರ್ಯಕ್ರಮಗಳು ” ಪರಮ ಪೂಜ್ಯ ಪ್ರೊ . ಭಾಷ್ಯಂಸ್ವಾಮೀಜಿಯವರ ” ದಿವ್ಯನೇತೃತ್ವದಲ್ಲಿ ವಿಶೇಷ ಪ್ರಾರ್ಥನೆಯಿಂದ ನೆರವೇರಲಿದೆ . ಆಸ್ತಿಕ ಭಕ್ತಾದಿಗಳು ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಭಗವಂತನ ಕೃಪಾಶೀರ್ವಾದಕ್ಕೆ ಪಾತ್ರರಾಗಬೇಕೆಂದು ಈ ಪತ್ರಿಕಾ ಪ್ರಕಟಣೆಯ ಮೂಲಕ   ಯೋಗ ನರಸಿಂಹಸ್ವಾಮಿ ದೇವಸ್ಥಾನದ ಆಡಳಿತ ಅಧಿಕಾರಿ ಶ್ರೀನಿವಾಸನ್ ಅವರು ಮನವಿ ಮಾಡಿದ್ದಾರೆ
ಎಲ್ಲಾ ಸದ್ಭಕ್ತರು   ದಿನಾಂಕ : 01.01.2023 ( ಭಾನುವಾರ ) ದಂದು ಭಾಗವಹಿಸಿ ಶ್ರೀ ಯೋಗಾನರಸಿಂಹಸ್ವಾಮಿಯವರ ಆಶೀರ್ವಾದ ನಿರಂತರವಾಗಿ ಇರಲಿ ಎಂದು ಹಾಗೂ ಸಮಸ್ತ ನಾಡಿನ ಜನತೆಗೆ ಒಳಿತನ್ನು ಆಶಿಸುತ್ತಾ ಹೊಸ ವರ್ಷದ ಶುಭಾಶಯವನ್ನು ಶ್ರೀನಿವಾಸನ್ ಅವರು ತಿಳಿಸಿದರು . ಈಗಾಗಲೇ ಕೊರೋನ ನಾಲ್ಕನೇ ಅಲೆ ದೇಶದಲ್ಲಿ ಆರಂಭಗೊಂಡಿದ್ದು , ಕೇಂದ್ರ ಮತ್ತು ರಾಜ್ಯ ಸರ್ಕಾರದವರು ಯಾವುದೇ ಆತಂಕವನ್ನು ಪಡುವ ಅಗತ್ಯವಿಲ್ಲವೆಂದು ಮಾರ್ಗಸೂಚಿಯನ್ನು ನೀಡಿ ಸಾರ್ವಜನಿಕರಿಗೆ ಧೈರ್ಯವನ್ನು ನೀಡಿರುತ್ತಾರೆ . ಆದರೂ ಸಾರ್ವಜನಿಕರು ಹಾಗೂ ದೇವಸ್ಥಾನಕ್ಕೆ ಆಗಮಿಸುವ ಭಕ್ತಾದಿಗಳು ತಮ್ಮ ಆರೋಗ್ಯವನ್ನು ಕಾಪಾಡಿಕ್ಕೊಳ್ಳುವ ದೃಷ್ಟಿಯಿಂದ ನಾನು ಈ ಪತ್ರಿಕಾ ಸಂದರ್ಶನದ ಮೂಲಕ ಪ್ರಾರ್ಥಿಸಿಕ್ಕೊಳ್ಳುವುದೇನೆಂದರ ದಯವಿಟ್ಟು ಮಾಸ್ಕ್ ಬಳಸಿ , ಸ್ಯಾನಿಟೈಸರ್ ಉಪಯೋಗಿಸಿ ಮತ್ತು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಿ ಎಂದು ಕೇಳಿಕೊಳ್ಳುತ್ತೇನೆ . ಹಾಗೂ ದೇವಸ್ಥಾನಕ್ಕೆ ಆಗಮಿಸುವ ಭಕ್ತಾದಿಗಳು ದಯವಿಟ್ಟು ಮಾಸ್ಕ್ ಧರಿಸಿ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಿ ಎಂದು ಶ್ರೀನಿವಾಸ ಭಕ್ತರಲ್ಲಿ ಮನವಿ ಮಾಡಿದ್ದಾರೆ.

Share