31ರ ರಾತ್ರಿ 2 ಗಂಟೆವರೆಗೆ ಮೆಟ್ರೋ, ಬಿಎಂಟಿಸಿ ಸಂಚಾರ.

174
Share

ಡಿಸೆಂಬರ್ 31 ಮಧ್ಯರಾತ್ರಿ 2023 ಜನವರಿ ಮೊದಲನೇ ದಿನವನ್ನು ಆಹ್ವಾನಿಸುವ ಸಂಭ್ರಮ ದಿನಾಚರಣೆಗೆ ಪೂರಕವಾಗಿ ಬೆಂಗಳೂರು ಮೆಟ್ರೋ ಹಾಗೂ ಬಿಎಂಟಿಸಿ ಬಸ್ ರಾತ್ರಿ 2 ಗಂಟೆಯವರೆಗೆ ಚಾಲನೆಯಲ್ಲಿ ಇರಲಿದೆ. ಪೊಲೀಸ್ ಇಲಾಖೆಯು ದ್ವಿಚಕ್ರ ವಾಹನ ನಾಲ್ಕು ಚಕ್ರವಾಹನಗಳ ಓಡಾಟಕ್ಕೆ ಹಲವಾರು ಎತ್ತರದ ರಸ್ತೆ ಫ್ಲೈ ಓವರ್ ಗಳ ಮೇಲೆ ನಿರ್ಬಂಧ ಹೇರಲಾಗಿದ್ದು ರಾತ್ರಿ 9:00ಗೆ ವಾಹನಗಳ ಓಡಾಟ ಸಂಪೂರ್ಣ ಬಂದ್ ಮಾಡಲಾಗಿದೆ. ಗಮನದಲ್ಲಿಟ್ಟುಕೊ ಗ ಪೊಲೀಸ್ ಆಯುಕ್ತರಾದ ಪ್ರತಾಪರೆಡ್ಡಿ ಇಂದು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ್ದು ಮಧ್ಯರಾತ್ರಿ ಒಂದು ಗಂಟೆಯವರೆಗೆ ಮಾತ್ರ ಸಂಭ್ರಮಾಚರಣೆಗೆ ಅವಕಾಶ ಮಾಡಲಾಗಿದೆ, 4 ಸಾವಿರ ಕ್ಯಾಮರಗಳ ಕಣ್ಗಾವಲನ್ನು ಹಾಕಲಾಗಿದ್ದು ಶಬ್ದ ಮಾಲಿನ್ಯ ನಿಯಂತ್ರಣಕ್ಕೆ ಎಸಿಬಿ ಮಟ್ಟದ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. 8500 ಅಧಿಕಾರಿಗಳನ್ನು ನಿಗಾ ಚಟುವಟಿಕೆಗಳಿಗೆ ವಹಿಸಲಾಗಿದ್ದು ಮಹಿಳೆಯರಿಗೆ ಐಲ್ಯಾಂಡ್ ಗಳು ಟವರ್ ವಾಚುಗಳು ನಿರ್ಮಿಸಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಕ್ರಮ ಕೈಗೊಳ್ಳಲಾಗಿದೆ, ಎಂದು ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ. ಕುಡಿದು ವಾಹನ ಚಲಿಸುವವರ ಮೇಲೆ ಸಂಪೂರ್ಣ ನಿಗ ವಹಿಸಿದ್ದು. ಮುನ್ನೆಚ್ಚರಿಕೆಯ ಕ್ರಮವಾಗಿ ಹತ್ತಿರದ ಆಸ್ಪತ್ರೆಗಳಲ್ಲಿ ಚಿಕಿತ್ಸಾ ಹಾಸಿಗೆಗಳನ್ನು ಔಷಧಿ, ಸಿಬ್ಬಂದಿಗಳನ್ನು ಕಾಯ್ದಿರಿಸಲಾಗಿರುತ್ತದೆಹಾಗೂ ಆಂಬುಲೆನ್ಸ್ ಗಳನ್ನು ಸಹ ಸಜ್ಜುಗೊಳಿಸಲಾಗಿದೆ ಎಂದು ರೆಡ್ಡಿ ತಿಳಿಸಿದರು.


Share