ಬೆಂಗಳೂರು ಹೊಸ ವರ್ಷಾಚರಣೆ: ಪಿಜಿಗಳಿಗೆ ತಾಕೀತು

137
Share

 ಬೆಂಗಳೂರು 29- ಮುಂಬರುವ ಹೊಸ ವರ್ಷದ ಮೊದಲನೇ ದಿನದ ಆಚರಣೆಯ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಬೆಂಗಳೂರು ನಗರದ ಪಿಜಿ ಹಾಸ್ಟೆಲ್ ಗಳಿಗೆ ಪೊಲೀಸರು ಹೊಸ ನಿಯಮಾವಳಿಗಳನ್ನು ಹೊರಡಿಸಿದ್ದಾರೆ. ಯಾವುದೇ ಅಹಿತಕರ ಘಟನೆಗಳಿಗೆ ಮಾಲೀಕರು ಆಸ್ಪದ ನೀಡದಂತೆ ಸ್ಥಳದಲ್ಲೇ 31 ರಿಂದ ಆಯಾ ಹಾಸ್ಟಲ್ ಗಳಲ್ಲಿ ಹಾಜರಿದ್ದು ಯಾವುದೇ ಹಾಸ್ಟೆಲ್ ನಿವಾಸಿಗಳು ಹೊರಗೆ ಹೋಗುವುದರ ಬಗ್ಗೆ ಹಾಗೂ ಹೊಸಬರು ಒಳಗೆ ಬರುವುದರ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿರಬೇಕು, ಯಾವುದೇ ಮೋಜು ಮಸ್ತಿಗಳಿಂದಾಗಬಹುದಾದ ತೊಂದರೆಗಳಿಗೆ ಮಾಲೀಕರು ಅಥವಾ ವಾರ್ಡನ್ ಗಳನ್ನೇ ಹೊಣೆಗಾರರನ್ನಾಗಿಸಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು, ಎಂದು, ನಗರದ ಎಲ್ಲಾ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಈ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಪೊಲೀಸ್ ಇಲಾಖೆ ತೀರ್ಮಾನಿಸಿದೆ . ಚಿತ್ರ ಕೃಪೆ ವಿಜಯ ಕರ್ನಾಟಕ


Share