2023,ರರ ದಸರಾ – ಪೂಜಾ ಸಮಯ ಫಿಕ್ಸ್

22
Share

ದಸರಾ ಪೂಜಾ ಕೈಂಕರ್ಯಗಳ ಮುಹೂರ್ತ ವಿವರಗಳು*
ಮೈಸೂರು.ಸೆ.15 – ಅಕ್ಟೋಬರ್ 15 ರಂದು ಶರನ್ನವರಾತ್ರಿ ಪ್ರಾರಂಭ, ಶೈಲಾವೃತ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ಪೂಜೆ ಯನ್ನು ಬೆಳಿಗ್ಗೆ 10.15 ರಿಂದ 10.36 ರ ಶುಭ ವೃಶ್ಚಿಕ ಲಗ್ನದಲ್ಲಿ ಹಮ್ಮಿಕೊಳ್ಳಲಾಗುವುದು. ಸಾಯಂಕಾಲ 6:30 ರಿಂದ 7:15ರ ಶುಭ ಮೇಷ ಲಗ್ನದಲ್ಲಿ ಅರಮನೆ ಪೂಜೆ ನಡೆಯುವುದು.

ಅಕ್ಟೋಬರ್ 16 ರಂದು ಬ್ರಹ್ಮಚಾರಿಣಿ, 17 ರಂದು ಚಂದ್ರಘoಟ, 18 ರಂದು ಕೂಷ್ಮಾಂಡ, 19 ರಂದು ಸ್ಕಂದಮಾತ, 20 ರಂದು ಕಾತ್ಯಾಯಿನಿ (ಸರಸ್ವತಿ ಪೂಜೆ ಮೂಲ ನಕ್ಷತ್ರದಲ್ಲಿ ಸರಸ್ವತಿ ಪೂಜೆ ಪ್ರಾರಂಭ ಮಾಡಿ ಶ್ರವಣ ನಕ್ಷತ್ರದ ದಿನ ಅಂದರೆ ಅ. 24 ರಂದು ವಿಸರ್ಜನೆ ಮಾಡಲಾಗುವುದು), 21 ರಂದು ಕಾಳರಾತ್ರಿ – ಮಹಿಶಾಸುರ ಸಂಹಾರ, 22 ರಂದು ದುರ್ಗಾಷ್ಟಮಿ – ಸಿದ್ದಿಧಾತ್ರಿ, 23 ರಂದು ಮಹಾನವಮಿ ಆಯುಧ ಪೂಜೆ ಗಜಶ್ವಾದಿ ಪೂಜೆ, ಮಧ್ಯಾಹ್ನ 4:40 ರಿಂದ 5 ರ ಶುಭಮೀನ ಲಗ್ನದಲ್ಲಿ ಮಾನ್ಯ ಮುಖ್ಯಮಂತ್ರಿವರಿoದ ಮತ್ತು ಗಣ್ಯಾತಿಗಣ್ಯದಿಂದ ಪುಷ್ಪಾರ್ಚನೆ ನಂತರ ಜಂಬೂ ಸವಾರಿ ಪ್ರಾರಂಭವಾಗುವುದು.

ಅ. 26ರಂದು ಬೆಟ್ಟದಲ್ಲಿ ಶ್ರೀ ಚಾಮುಂಡೇಶ್ವರಿ ರಥೋತ್ಸವ ಜರುಗಲಿದ್ದು, ಬೆಳಗ್ಗೆ 10:40 ರಿಂದ 11 ಗಂಟೆಯ ಧನುರ್ ಲಗ್ನದಲ್ಲಿ ಮೈಸೂರು ಅರಮನೆಯಿಂದ ವೀರನ ಹೊಸಹಳ್ಳಿಗೆ ಗಜ ಪೂಜಾ ಪೂರ್ವಕ ಮರು ಪ್ರಯಾಣ ಜರುಗುವುದು ಎಂದು ಪ್ರಕಟಣೆ ತಿಳಿಸಿದೆ.


Share