4 ದಶಕಗಳ ನಂತರ ಭಾರತದಲ್ಲಿ ಒಲಿಂಪಿಕ್ಸ್ ಸಭೆ

418
Share

ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ( ಐಒಸಿ ) ಶನಿವಾರ 2023 ರಲ್ಲಿ ತನ್ನ ಸಭೆಯನ್ನು ಆಯೋಜಿಸಲು ಮುಂಬೈಗೆ ಆತಿಥ್ಯ ಹಕ್ಕು ನೀಡಿದೆ . ಒಲಿಂಪಿಕ್ಸ್‌ಗೆ ಆತಿಥ್ಯ ವಹಿಸಬೇಕು ಎನ್ನುವ ಭಾರತದ ಮಹದಾಸೆಗೆ ಇದು ಮೊದಲ ಹೆಜ್ಜೆ ಎಂದೇ ಹೇಳಲಾಗುತ್ತಿದೆ . 1983 ರಲ್ಲಿ ಭಾರತ ಐಒಸಿ ಸಭೆಯನ್ನು ಆಯೋಜಿಸಿತ್ತು . ಒಲಿಂಪಿಕ್ಸ್‌ನ ನಿಯಮಗಳಲ್ಲಿ ಆಗಬೇಕಿರುವ ಬದಲಾವಣೆ , ಐಒಸಿ ಸದಸ್ಯರ ಆಯ್ಕೆ , ಒಲಿಂಪಿಕ್ ಕ್ರೀಡಾಕೂಟಕ್ಕೆ ಆತಿಥ್ಯ ವಹಿಸುವ ನಗರಗಳ ಆಯ್ಕೆಯನ್ನು ಈ ಸಭೆಯಲ್ಲಿ ನಡೆಸಲಾಗುತ್ತದೆ . ಸಭೆಯಲ್ಲಿ ಪಾಲ್ಗೊಳ್ಳಲಿರುವ 76 ಆಹ್ವಾನಿತರ ಪೈಕಿ 75 ಮಂದಿ ಭಾರತದಲ್ಲಿ ಸಭೆ ನಡೆಸಲು ಮತ ಚಲಾಯಿಸಿದರು ಎಂದು ವರದಿಯಾಗಿದೆ .


Share