ಯಾವ ಕಾಮಗಾರಿ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚನೆ

147
Share

 

ಮೈಸೂರು, ವಿಧಾನ ಸಬಾ ಕ್ಷೇತ್ರದ ಶಾಸಕರಾದ ಶ್ರೀ ಎಲ್.ನಾಗೇಂದ್ರರವರು, ಮೈಸೂರು ಮಹಾನಗರ ಪಾಲಿಕೆಯ ಪೂಜ್ಯ ಮೇಯರ್ ಶ್ರೀಮತಿ ಸುನಂದ ಪಾಲನೇತ್ರರವರೊಂದಿಗೆ*, ಮಹಾನಗರಪಾಲಿಕೆ ಉಪ ಆಯುಕ್ತರು (ಅಭಿವೃದ್ದಿ) ಶ್ರೀ ಮಹೇಶ್, ವಲಯ ಕಚೇರಿ ಅಭಿವೃದ್ದಿ ಅಧಿಕಾರಿಗಳು, ಇಂಜಿನಿಯರುಗಳೊಂದಿಗೆ *ಕರ್ನಾಟಕ ಕೊಳಗೇರಿ ಅಭಿವೃದ್ದಿ ಮಂಡಳಿಯಿಂದ ನಿರ್ಮಿಸಲಾದ ನರ್ಮ್ ಮನೆಗಳಲ್ಲಿ ಮೂಲಭೂತ ಸೌಕರ್ಯಗಳಾದ ತಾರಸಿ ಸೋರುವುದು, ಯುಜಿಡಿ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ, ವಿದ್ಯುತ್ ಸಮಸ್ಯೆ, ಚರಂಡಿ ನಿರ್ಮಾಣ, ರಸ್ತೆ ಅಭಿವೃದ್ದಿ ಕಾಮಗಾರಿಗಳನ್ನು* ನಿರ್ವಹಿಸಲು ಕೊಳಗೇರಿ ಅಭಿವೃದ್ದಿ ಮಂಡಳಿಯಲ್ಲಿ ಅನುದಾನದ ಕೊರತೆಯಿದ್ದರಿಂದ ಇಲ್ಲಿ ವಾಸಿಸುತ್ತಿರುವ ಬಡ ಕುಟುಂಬದ ಸಾರ್ವಜನಿಕರ ಬಹಳ ದಿವಸಗಳ ಬೇಡಿಕೆಯನ್ನು ಪರಿಗಣಿಸಿ, ರಾಜ್ಯ ಸರ್ಕಾರದಿಂದ ಈ ಎಲ್ಲಾ ನರ್ಮ್ ಕೊಳಗೇರಿ ಅಭಿವೃದ್ದಿ ಮಂಡಳಿ ಮನೆಗಳ ದುರಸ್ತಿ ಹಾಗೂ *ಮೂಲ ಭೂತ ಸೌಕರ್ಯ ಕಲ್ಪಿಸುವ ಕಾಮಗಾರಿಗೆ ಶಾಸಕರು ರೂ.4.50 ಕೋಟಿ ಅನುದಾನ ಬಿಡುಗಡೆ ಮಾಡಿಸಿದ್ದು, ಈ ಅನುದಾನದಲ್ಲಿ ಕೈಗೊಳ್ಳಬೇಕಾದ ಕಾಮಗಾರಿಗಳನ್ನು ಪರಿವೀಕ್ಷಣೆ ಮಾಡಲು ಗೋಕುಲಂ ಬಡಾವಣೆಯ ನಂದಗೋಕುಲ, ಬಿ.ಎಂ.ಶ್ರೀನಗರದ, ಅಂಬೇಡ್ಕರ್ ಜ್ಞಾನಲೋಕ, ಪಿ.ಕೆ.ಸ್ಯಾನಿಟೋರಿಯಂ, ಮೇದರ್ ಬ್ಲಾಕ್ ನಲ್ಲಿರುವ 96 ಮನೆಗಳ ಸಂಕೀರ್ಣಗಳಿಗೆ ಖುದ್ದು ಭೇಟಿ ನೀಡಿ* ಯಾವ ಕಾಮಗಾರಿಗಳನ್ನು ಕೈಗೊಳ್ಳಬೇಕೆಂದು ಅಧಿಕಾರಿಗಳಿ & ಇಂಜಿನಿಯರುಗಳಿಗೆ ಸೂಚನೆ ನೀಡಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ ಇವರು ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸಲು ಕ್ರಮಕೈಗೊಳ್ಳುವಂತೆ ಸ್ಥಳದಲ್ಲೇ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಮಯದಲ್ಲಿ ಮಹಾನಗರಪಾಲಿಕೆ ಸದಸ್ಯರಾದ ಶ್ರೀ ರವೀಂದ್ರ, ಮಾಜಿ ಸದಸ್ಯರ ಶ್ರೀ ದೇವರಾಜು, ಭಾಜಪ ಚಾಮರಾಜ ಅಧ್ಯಕ್ಷರಾದ ಶ್ರೀ ಸೋಮಶೇಖರರಾಜು, ಬಿ.ಎಲ್.ಎ-1 ದಿನೇಶ್ ಗೌಡ, ಪ್ರಧಾನ ಕಾರ್ಯದರ್ಶಿ ಪುನೀತ್, ರಾಜ್ಯ ಪರಿಷತ್ ಸದಸ್ಯ ನಂಜಪ್ಪ, ಮುಖಂಡರುಗಳಾದ ಭರತ್, ರವೀಂದ್ರ, ಷಣ್ಮುಗಂ, ಜಯಣ್ಣ, ಅಶೋಕ, ಶ್ರೀನಿವಾಸ, ಮುರುಗೇಶ್, ಹನುಮಂತು, ನರಸಿಂಹಮೂರ್ತಿ, ರವಿ, ಶ್ರೀಮತಿ ರುಕ್ಮಿಣಿ, ರೂಪ ಮುಂತಾದವರು ಹಾಜರಿದ್ದರು.

Share