ಮೈಸೂರು-24ರ೦ದು ಕೆಲವೆಡೆ ವಿದ್ಯುತ್ ವ್ಯತ್ಯಯ

645
Share

ವಿದ್ಯುತ್ ವ್ಯತ್ಯಯ*

ಮೈಸೂರು,ಮಾ.22:- ಮಾ.24 ರಂದು ಬೆಳಿಗ್ಗೆ 10 ರಿಂದ ಸಂಜೆ 5:30 ಗಂಟೆಯವರೆಗೆ ದೊಡ್ಡಕೆರೆ ಮೈದಾನ ವಿದ್ಯುತ್ ವಿತರಣಾ ಕೇಂದ್ರದಲ್ಲಿ 4ನೇ ತ್ರೈಮಾಸಿಕ ಅವಧಿಯ ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದೆ.ಹಾಗಾಗಿ ರಾಮಾನುಜ ರಸ್ತೆ 01 ರಿಂದ 09ನೇ ಕ್ರಾಸ್ ವರೆಗೆ, ಹೊಸಬಂಡಿಕೇರಿ, ಜೆ.ಎಸ್.ಎಸ್. ಆಸ್ಪತ್ರೆ, ಅಗ್ರಹಾರ, ಬಸವೇಶ್ವರ ರಸ್ತೆ, ಚಾಮುಂಡಿಪುರoನ ಹಲವು ಭಾಗಗಳು, ತ್ಯಾಗರಾಜ ರಸ್ತೆ, ಚಾಮುಂಡಿಬೆಟ್ಟ ಮತ್ತು ಪಾದ, ಗುಂಡುರಾವ್ ನಗರ, ದತ್ತನಗರ, ಮುನೇಶ್ವರನಗರ, ಗೌರಿಶಂಕರನಗರ, ನಂಜನಗೂಡು ಟೋಲ್ ಗೇಟ್, ತಾವರೆಕೆರೆ, ಜಾಕಿ ಜಾಕಿ ಕ್ವಾಟರ್ಸ್, ರೇಸ್ ಕೋರ್ಸ್ ಹಿಂಭಾಗ, ಸಬರ್ಬ್ ಬಸ್ ನಿಲ್ದಾಣ, ನಜರ್‌ಬಾದ್, ಇಟ್ಟಿಗೆಗೂಡು, ಮೃಗಾಲಯದ ಸುತ್ತ-ಮುತ್ತ, ಸರ್ಕಾರಿ ಅಥಿತಿ ಗೃಹ ಮತ್ತು ಸುತ್ತ-ಮುತ್ತಲಿನ ಪ್ರದೇಶಗಳು, ತಾಲ್ಲೂಕು ಕಛೇರಿ, ಡಿ. ದೇವರಾಜ ಅರಸು ರಸ್ತೆ, ಬಿ.ಎನ್. ರಸ್ತೆ, ಚಾಮುಂಡಿಬೆಟ್ಟ, ಸಿದ್ದಾರ್ಥನಗರ, ಕುರುಬಾರಹಳ್ಳಿ, ಜೆ.ಸಿ. ನಗರ, ಕೆ.ಸಿ ನಗರ, ಜೆ.ಎಸ್.ಎಸ್ ಆಯುರ್ವೇದಿಕ್ ಸುತ್ತ-ಮುತ್ತ, ಅರಮನೆ ಸುತ್ತ-ಮುತ್ತಲಿನ ಪ್ರದೇಶಗಳು, ಶ್ರೀ ಹರ್ಷ ರಸ್ತೆ, ಸಯ್ಯಾಜೀರಾವ್ ರಸ್ತೆ, ಇರ್ವಿನ್ ರಸ್ತೆ ಸುತ್ತ-ಮುತ್ತಲಿನ ಪ್ರದೇಶಗಳು, ಧನ್ವಂತರಿ ರಸ್ತೆ ಹಾಗೂ ಶಿವರಾಂಪೇಟೆ ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ಅನಿಯಮಿತ ನಿಲುಗಡೆಯಾಗಲಿದ್ದು, ಸಾರ್ವಜನಿಕರು ಹಾಗೂ ಕೈಗಾರಿಕೋಧ್ಯಮಿಗಳು ಸಹಕರಿಸಬೇಕೆಂದು ಚಾ.ವಿ.ಸ.ನಿ.ನಿ.ಯ ಕಾರ್ಯ ಮತ್ತು ಪಾಲನೆ, ನ.ರಾ.ಮೊಹಲ್ಲಾ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್(ವಿ) ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 


Share