M.P: ಕವನಸಂಗ್ರಹ-ನಮ್ಮ ಸ್ವಾತಂತ್ರ್ಯ…… ಮೈಸೂರುರಾಮ್

62
Share

 

*ನಮ್ಮ ಸ್ವಾತಂತ್ರ್ಯ…….!*

ತಂತ್ರ ಕುತಂತ್ರ ಪ್ರತಿತಂತ್ರವ ಪವಡಿಸಿ,
ತ್ಯಾಗ ಬಲಿದಾನವ ಅಡಿಪಾಯವಾಗಿಸಿ,
ಸಮಾನತೆಯ ಸ್ಥಂಭವ ಸ್ಥಾಪಿಸಿ,
ಭಾವೈಕ್ಯತೆಯ ಕೇಸರಿ ಬಿಳಿ ಹಸಿರು ಬಣ್ಣದ ಬಾವುಟವ ಹಾರಿಸಿ,
ಶಾಂತಿಯ ಅಶೋಕ ಚಕ್ರವನ್ನಿರಿಸಿ
ಪಡೆದ ಸ್ವಾತಂತ್ರ್ಯವಿದು…….!

ಗಾಂಧಿಜೀಯ ಶಾಂತಿಯಿಂದ,
ಭಗತಸಿಂಗ್ ಸುಭಾಷರ ಕ್ರಾಂತಿಯಿಂದ,
ಕಿತ್ತೂರು ರಾಣಿ ಚೆನ್ನಮ್ಮ, ಅಬ್ಬಕ್ಕ, ರಾಯಣ್ಣರ ಹೋರಾಟದಿಂದ,
ಸ್ವಾತಂತ್ರ್ಯ ಹೋರಾಟಗಾರರ ಕಿಚ್ಚಿನಿಂದ
ಪಡೆದ ಸ್ವಾತಂತ್ರ್ಯವಿದು…….!

ಬ್ರಿಟಿಷರ ದಬ್ಬಾಳಿಕೆಯ ದಮನಗೊಳಿಸಿ,
ಅಧಿಕಾರಿಶಾಹಿಗಳ ಮಣಿಸಿ,
ಗುಲಾಮಗಿರಿಯ ವಿರೋಧಿಸಿ,
ದೇಶದ ಜನರ ಒಗ್ಗೂಡಿಸಿ,
ಪಡೆದ ಸ್ವಾತಂತ್ರ್ಯವಿದು.

ತ್ಯಾಗ ಬಲಿದಾನದ ಸಂಕೇತವಿದು,
ಸತ್ಯ ಅಹಿಂಸೆಯ ಸಂದೇಶವಿದು,
ಭಾವೈಕತೆಯ ಬಂಧವಿದು,
ನಮ್ಮ ಹೆಮ್ಮೆಯ ಪ್ರತೀಕವಿದು……..!

*ಖುಷಿಯಾಗಿರಿ – ಹೃದಯವಂತರಾಗಿರಿ*

*ರಾಮ್ ಮೈಸೂರು*


Share