MP : ಅಡಿಗೆ ಮನೆ – ಯುಗಾದಿ ವಿಶೇಷ ಬಾಳೆಹಣ್ಣಿನ ಹಲ್ವ

296
Share

ಬಾಳೆ ಹಣ್ಣಿನ ಹಲ್ವಾ
ಮಾಡಲು ಬೇಕಾಗುವ ಸಾಮಗ್ರಿಗಳು
ಪಚ್ಚ ಬಾಳೆಹಣ್ಣು – 8
ತುಪ್ಪ – 250 ಗ್ರಾಂ
ಸಕ್ಕರೆ – 1/2 ಕೆಜಿ
ಕೋವ 125 ಗ್ರಾಂ
ಗೋಡಂಬಿ
ಮಾಡುವ ವಿಧಾನ – ಚೆನ್ನಾಗಿ ಕಳಿತಿರುವ ಬಾಳೆ ಹಣ್ಣನ್ನು ಸಿಪ್ಪೆ ಬಿಡಿಸಿ ಹಿಟ್ಟಿನ ಹದಕ್ಕೆ ಕಿವುಚಬೇಕು. ಸಣ್ಣ ಸಣ್ಣ ಉಂಡೆಗಳು ಇಲ್ಲದಂತೆ ನೋಡಿಕೊಳ್ಳಬೇಕು. ಬಾಣಲೆಯನ್ನು ಒಲೆಯ ಮೇಲಿಟ್ಟು ನೂರು ಗ್ರಾಂ ತುಪ್ಪ ಹಾಕಬೇಕು . ಅದು ಕರಗಿದ ನಂತರ ಕಿವಿಗಿಟ್ಟುಕೊಂಡ ಬಾಳೆಯ ಹಣ್ಣನ್ನು ಸೇರಿಸಬೇಕು. ಅದರ ಬಣ್ಣ ಬದಲಾಗುವ ತನಕ ಹದವಾಗಿ ಮಾಡಿಸುತ್ತಿರಬೇಕು . ನಂತರ ಅರ್ಧ ಕೆಜಿ ಸಕ್ಕರೆಯನ್ನು ಬಾಣಲೆಯಲ್ಲಿರುವ ಮಿಶ್ರಣಕ್ಕೆ ಸೇರಿಸಬೇಕು. ಸ್ವಲ್ಪ ಸಮಯದ ನಂತರ ಓರ್ವ ಬೆರೆಸಬೇಕು . ಅದು ಹಲ್ವದ ಹದ ಬರುವ ತನಕ ಬಾಡಿಸಿ ಗೋಡಂಬಿಯನ್ನು ತುಪ್ಪದಲ್ಲಿ ಹುರಿದು ಸೇರಿಸಿದರೆ ಬಾಯಿಗಿಟ್ಟರೆ ಕರಗುವ ರುಚಿಯಾದ  ಬಾಳೆಯ ಹಣ್ಣಿನ ಹಲ್ವಾ ತಯಾರು .

– ಶ್ರೀಮತಿ . ಶೀಲ ಕಶ್ಯಪ್


Share