MP ಅಡಿಗೆ ಮನೆ : ವೆರಿ ವೆರಿ ಸಿಂಪಲ್ – ಕೊಲ್ಹಾಪುರಿ ಚಟ್ನಿ

319
Share

 

ಬೇಕಾಗುವ ಸಾಮಗ್ರಿ :
ಕಡ್ಲೆಕಾಯಿ ಬೀಜ – 1 ಕಪ್
ಒಣ ಮೆಣಸಿನ ಕಾಯಿ – 12 ರಿಂದ 15
ಎಣ್ಣೆ – 1/2 ಕಪ್ ಗಿಂತ ಸ್ವಲ್ಪ ಕಮ್ಮಿ
ಮಾಡುವ ವಿಧಾನ :
ಕಡ್ಲೆಕಾಯಿ ಬೀಜವನ್ನು ಕೆಂಪಗೆ ಹುರಿದಿಟ್ಟುಕೊಳ್ಳಿ. ಕೆಂಪು ಮೆಣಸಿನ ಕಾಯಿಯಯನ್ನು ಸ್ವಲ್ಪ ಮೆತ್ತಗಾಗುವ ತನಕ ಬಿಸಿ ನೀರಿನಲ್ಲಿ ಕುದಿಸಿಕೊಳ್ಳಿ. ತಣ್ಣಗಾದ ಮೇಲೆ ಉಪ್ಪು ಬೆರಸಿ ತಿರುವಿಕೊಳ್ಳಿ. ನಂತರ ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಇಟ್ಟು ತಿರುವಿರುವ ಮಿಶ್ರಣವನ್ನು ಸೇರಿಸಿ ಕಡಿಮೆ ಉರಿಯಲ್ಲಿ ಬಾಡಿಸಿದರೆ ರೊಟ್ಟಿ, ಚಪಾತಿ , ದೋಸೆ ಅನ್ನದೊಂದಿಗೆ ತಿನ್ನಲು ರುಚಿಯಾದ ಕೊಲ್ಹಾಪುರಿ ಚಟ್ನಿ ರೆಡಿ !!
ಅಡಿಗೆ ರುಚಿ – ಶ್ರೀಮತಿ . ಶೀಲಾ ಕಶ್ಯಪ್


Share