MP-ಅಡುಗೆಮನೆ-ಕ್ಯಾಬೇಜ್ ಮತ್ತು ಕ್ಯಾರಟ್ ಪರಾಠ… ಭಾರ್ಗವಿ ಜೈಶಂಕರ್

527
Share

 

 

ಇಂದು ಒಂದು ವಿಶೇಷ ಗುಟ್ಟಿನ ವೀಡಿಯೋ ನೋಡಲು ಮರೆಯಬೇಡಿ.

ಕ್ಯಾಬೇಜ್ ಮತ್ತು ಕ್ಯಾರಟ್ ಪರಾಠ…
ಭಾರ್ಗವಿ ಜೈಶಂಕರ್

ಬೇಕಾಗುವ ಸಾಮಗ್ರಿಗಳು..
ಗೋದಿ ಹಿಟ್ಟು – ಒಂದು ಕಪ್ಪು,
ತುಪ್ಪ – ಮೂರು ಚಿಕ್ಕ ಚಮಚ,
ರುಚಿಗೆ ಉಪ್ಪು.
ಸಣ್ಣಗೆ ತುರಿದ ಎಲೆ ಕೋಸು – ಒಂದು ಕಪ್ಪು,
ಕ್ಯಾರಟ್- ಮೂರು ಕ್ಯಾರೆಟ್ ತುರಿ,
ಸಣ್ಣಗೆ ಹಚ್ಚಿದ ಹಸಿ ಮೆಣಸಿನ ಕಾಯಿ ರುಚಿಗೆ ತಕ್ಕಷ್ಟು,
ತರಿಯಾದ ಖಾರದ ಪುಡಿ – ಅರ್ಧ ಚಮಚ,
ಸಣ್ಣಗೆ ಹೆಚ್ಚಿದ ಧನಿಯ,
ತುರಿದ ಶುಂಠಿ – ಅರ್ಧ ಚಮಚ..

ಮಾಡುವ ವಿಧಾನ – ಗೋದಿಹಿಟ್ಟನ್ನು ಚಪಾತಿ ಹಿಟ್ಟಿನ ಹದಕ್ಕೆ ಕಲೆಸಿಕೊಳ್ಳಬೇಕು. 15 ನಿಮಿಷ ನೆನೆಯಬೇಕು.
ಉಳಿದ ಎಲ್ಲಾ ಸಾಮಗ್ರಿಗಳನ್ನು ಹಾಕಿ ಕಲೆಸಿಟ್ಟಕೊಳ್ಳ ಬೇಕು. ಚಪಾತಿ ಹಿಟ್ಟನ್ನು ಉಂಡೆ ಮಾಡಿ ಕೊಂಡು ಲಟಿಸಬೇಕು. ಮದ್ಯದಲ್ಲಿ ತ್ರಿಕೋನಾಕಾರದಲ್ಲಿ ತರಕಾರಿ ಮಿಶ್ರಣವನ್ನು ಹರಡಿ ಮೂರು ಮೂಲೆಯನ್ನು ಮಡಿಸಬೇಕು. ನಂತರ ಹದವಾಗಿ ಅದೇ ಆಕಾರದಲ್ಲಿ ನಮಗೆ ಎಷ್ಟು ದಪ್ಪ ಬೇಕೋ ಅಷ್ಟು ದಪ್ಪಗೆ ಲಟಿಸಿ ತವಾ ಮೇಲೆ ಎರೆಡೂ ಕಡೆ ಬೇಯಿಸಬೇಕು. ನಂತರ ತುಪ್ಪ ಸವರಿದರೆ ತಿನ್ನಲು ಸಿದ್ಧ ಆರೋಗ್ಯಕರ ಕ್ಯಾಬೇಜ್ ಕ್ಯಾರೆಟ್ ಪರಾಟ ರೆಡಿ.

 


Share