MP : ಆಧ್ಯಾತ್ಮಿಕ ಅಂಗಳ : ಶ್ರೀಪಾದವಲ್ಲಭರ ಚರಿತ್ರೆ ಪುಟ 276

384
Share

ಶೀವಾದ ಶ್ರೀವಲ್ಲಭರ ದಿವ್ಯಚರಿತಾಮೃತ –
ಅಧ್ಯಾಯ 51
ಪುಟ – 276

ಶ್ರೀಪಾದರ ಅಂತರ್ಧಾನ

ಮೂರು ವರ್ಷಗಳ ನಂತರ ಬರುವ ಆಶ್ವಯಜ ಕೃಷ್ಣ ದ್ವಾದಶಿ ದಿನ ನೀನು ರಚಿಸಿದ ಶ್ರೀಪಾದ ಶ್ರೀವಲ್ಲಭ ಚರಿತಾಮೃತವನ್ನು ನನ್ನ ಪಾದುಕೆಗಳ ಹತ್ತಿರ ಪಠಿಸು . ಆದಿನ ನನ್ನ ದರ್ಶನಕ್ಕಾಗಿ ಬರುವವರೆಲ್ಲರೂ ಧನ್ಯರು . ಅವರೆಲ್ಲರಿಗೂ ಮಂಗಳಮಯ ಆಶೀರ್ವಾದಗಳು .
ಶ್ರೀಪಾದ ಶ್ರೀವಲ್ಲಭ ಮಹಾಪ್ರಭುಗಳು ಈ ರೀತಿಯಾಗಿ ಹೇಳಿ ಕೃಷ್ಣಾನದಿಯೊಳಕ್ಕೆ ಇಳಿದು ಅದೃಶ್ಯರಾದರು .
ಅವರ ಮರದ ಪಾದುಕೆಗಳನ್ನು ನಾನು ಎದೆಗೆ ಒತ್ತಿಕೊಂಡು ತಾಯಿಯನ್ನು ಕಳೆದುಕೊಂಡ ಹಸುಮಗುವಿನಂತೆ ಬಿಕ್ಕಿ ಬಿಕ್ಕಿ ಅತ್ತೆನು . ಆ ತರುವಾಯ ಮೂರ್ಛ ಹೋದೆನು . ಎದ್ದಾಗ ಕೃಷ್ಣಾ ನದಿಯಲ್ಲಿ ಸ್ನಾನ ಮಾಡಿ ಬಂದು ಧ್ಯಾನಸ್ಥನಾದೆನು . ನನ್ನ ಮನೋ ನೇತ್ರಗಳಿಗೆ ಶ್ರೀಪಾದ ಶ್ರೀವಲ್ಲಭರು ತಮ್ಮ ತೇಜೋಮಯ ರೂಪದಿಂದ ದರ್ಶನ ಕೊಟ್ಟರು .
|| ಶ್ರೀಪಾದ ಶ್ರೀವಲ್ಲಭರಿಗೆ ಜಯವಾಗಲಿ ಜಯವಾಗಲಿ॥

ಶ್ರೀಪಾದ ಶ್ರೀವಲ್ಲಭರ ದಿವ್ಯಚರಿತಾಮೃತ –
ಅಧ್ಯಾಯ 52

॥ ಶ್ರೀಪಾದರಾಜಂ ಶರಣಂ ಪ್ರಪದ್ಯೆ ॥
॥ ಜಯವಾಗಲಿ ಜಯವಾಗಲಿ ಶ್ರೀಪಾದ ಶ್ರೀವಲ್ಲಭರಿಗೆ ಜಯವಾಗಲಿ ॥

ಶಂಕರಭಟ್ಟನ ಯೋಗಾನುಭವ ನಿರೂಪಣೆ

ಶ್ರೀಪಾದರ ದಿವ್ಯದರ್ಶನ

ನಾನು ಮೂರು ವರ್ಷಗಳ ಕಾಲ ಪ್ರತಿದಿನವೂ ಅರ್ಧರಾತ್ರಿ ಸಮಯದಲ್ಲಿ ಶ್ರೀಪಾದ ಶ್ರೀವಲ್ಲಭರ ದಿವ್ಯ ತೇಜೋಮಯ ದರ್ಶನವನ್ನು ಪಡೆಯುತ್ತಿದ್ದೆನು . ನಾನು ನನ್ನ ಯೋಗಾನುಭವಗಳನ್ನು ಒಂದು ಪುಸ್ತಕವಾಗಿ ಬರೆದಿದ್ದೆನು . ಅದನ್ನು ಹಿಮಾಲಯದಲ್ಲಿರುವ ಯೋಗಿಯೊಬ್ಬನು ತೆಗೆದುಕೊಂಡು ಹೋದನು . ಶ್ರೀಪಾದರ ಆಜ್ಞೆಗನುಸಾರವಾಗಿಯೇ ಈ ರೀತಿ ನಡೆಯಿತು .
|| ಶ್ರೀಪಾದ ಶ್ರೀವಲ್ಲಭರಿಗೆ ಜಯವಾಗಲಿ ಜಯವಾಗಲಿ ||

ಶ್ರೀಪಾದ ಶ್ರೀವಲ್ಲಭರ ದಿವ್ಯಚರಿತಾಮೃತ –
ಅಧ್ಯಾಯ 53

॥ ಶ್ರೀಪಾದರಾಜಂ ಶರಣಂ ಪ್ರಪದ್ಧೇ ॥
॥ ಜಯವಾಗಲಿ ಜಯವಾಗಲಿ ಶ್ರೀಪಾದ ಶ್ರೀವಲ್ಲಭರಿಗೆ ಜಯವಾಗಲಿ ||

ಅಧ್ಯಾಯ – 53

ಶ್ರೀಪಾದ ಶ್ರೀವಲ್ಲಭರ ಚರಿತಾಮೃತವು ಪೀಠಿಕಾಪುರವನ್ನು ಸೇರುವ ವಿಧಾನ

ಶ್ರೀಪಾದ ಶ್ರೀವಲ್ಲಭರ ಚರಿತಾಮೃತ ವಿಶೇಷಗಳು

ನಾನು ರಚಿಸಿದ ಶ್ರೀಪಾದ ಶ್ರೀವಲ್ಲಭರ ಚರಿತಾಮೃತವು ಶ್ರೀಪಾದರ ಸೋದರಮಾವನವರ ವಂಶದವರ ಹತ್ತಿರ ಸ್ವಲ್ಪ ಕಾಲವಿರುತ್ತದೆ . ಆ ತರುವಾಯ ಇದನ್ನು ತೆಲುಗಿಗೆ ಅನುವಾದ ಮಾಡಬೇಕು . ತೆಲುಗು ಅನುವಾದವು ಪೂರ್ತಿಯಾದ ಮೇಲೆ ನನ್ನ ಸಂಸ್ಕೃತ ಪ್ರತಿ ಅದೃಶ್ಯವಾಗುತ್ತದೆ . ಗಂಧರ್ವರು ಇದನ್ನು ತೆಗೆದುಕೊಂಡು ಹೋಗಿ ಶ್ರೀಪಾದರ ಜನ್ಮ ಸ್ಥಳದಲ್ಲಿ ಕೆಲವು ಆಳೆತ್ತರದ ಕೆಳಗೆ ಇಡುತ್ತಾರೆ . ಅಲ್ಲಿ ಅದನ್ನು ಸಿದ್ದ ಯೋಗಿಗಳು ಪಾರಾಯಣ ಮಾಡುತ್ತಾರೆ .
ನಾನು ರಚಿಸಿದ ಚರಿತಾಮೃತವನ್ನು ಶ್ರೀಪಾದರ ದಿವ್ಯ ಪಾದುಕೆಗಳ ಹತ್ತಿರ ಪಾರಾಯಣ ಮಾಡಿದೆ . ಬಂದವರು ಐದು ಜನ ಅವರು ಮಹದಾನಂದವನ್ನು ಹೊಂದಿದರು .
ನಾನು ಪಂಡಿತನಲ್ಲ , ಆದ್ದರಿಂದ ಯಾವ ಅಧ್ಯಾಯವನ್ನು ಓದಿದರೆ ಯಾವ ವಿಧವಾದ ಫಲ ಲಭಿಸುತ್ತದೆಯೆಂದು ಹೇಳಲಾರೆ . ಶ್ರೀ ಬಾಪನಾರ್ಯರ 33 ನೆಯ ತಲೆಮಾರಿನಲ್ಲಿ ಈ ಗ್ರಂಥದ ತೆಲುಗು ಪ್ರತಿ ಬೆಳಕಿಗೆ ಬರುತ್ತದೆ . ಈ ತೆಲುಗು ಪ್ರತಿಯನ್ನು ಬೆಳಕಿಗೆ ತರುವುದಕ್ಕೆ ಮುಂಚೆ , ಅದನ್ನು ಬೆಳಕಿಗೆ ತರಲು ಶ್ರೀಪಾದರು ಯಾರನ್ನು ನಿಯಮಿಸುತ್ತಾರೋ ಅವರು , ಮೂಲ ತೆಲುಗು ಪ್ರತಿಯನ್ನು ವಿಜಯವಾಡ ಮಹಾಕ್ಷೇತ್ರದ ಕೃಷ್ಣಾ ನದಿಯಲ್ಲಿ ನಿಮಜ್ಜನ ಮಾಡಬೇಕು .
ಬೆಳಕಿಗೆ ತರಲಿರುವ ಅದೃಷ್ಟವಂತನಾದ ವ್ಯಕ್ತಿಯು ಪೀಠಿಕಾಪುರದಲ್ಲಿ ಶ್ರೀಪಾದವಲ್ಲಭರ ಮಹಾಸಂಸ್ಥಾನವಿರುವ ಪವಿತ್ರಸ್ಥಳದಲ್ಲಿ ಶ್ರೀಪಾದಶ್ರೀವಲ್ಲಭ ಚರಿತಾಮೃತದ ತೆಲುಗು ಪ್ರತಿಯನ್ನು ಪಾರಾಯಣಮಾಡಿ ಅವರ ಶ್ರೀಚರಣಗಳಿಗೆ ಸಮರ್ಪಿಸಬೇಕು . ಪಾರಾಯಣದ ಮಧ್ಯದಲ್ಲಿ ಆ ಅದೃಷ್ಟವಂತನಾದ ವ್ಯಕ್ತಿಗೆ ಗಾಣಗಾಪುರದಿಂದ ಪ್ರಸಾದವು ಅಯಾಚಿತವಾಗಿ ಪ್ರಾಪ್ತವಾಗುತ್ತದೆ . ಆ ವ್ಯಕ್ತಿಯು ಬಾಪನಾರ್ಯರ ವಂಶದ 33 ನೆಯ ತಲೆಮಾರಿಗೆ ಸೇರಿದ ವ್ಯಕ್ತಿಯಾಗಿರುತ್ತಾನೆ . ಇದು ತೇಜೋಮಯ ರೂಪದಲ್ಲಿ ದರ್ಶನ ಕೊಟ್ಟ ಶ್ರೀಪಾದ ಶ್ರೀವಲ್ಲಭರ ದಿವ್ಯವಚನ .

॥ ಶ್ರೀಪಾದ ಶ್ರೀವಲ್ಲಭರಿಗೆ ಜಯವಾಗಲಿ ಜಯವಾಗಲಿ ॥

ಕೃಪೆ : ಶ್ರೀ ಕನ್ನೇಶ್ವರ ಪ್ರಕಾಶನ

ಚುಟುಕು ಸಪ್ತಶತಿ : 277

ಗಯೆಗೆ ಹೋದವ ತನಗೆ
ಇಷ್ಟವಾದದ್ದೇನಾದರೂ ಬಿಡಬೇಕು, ನಿಯಮ.
ಕೆಲವರು ಬಲು ಜಾಣರು, ತಮಗೆ ಬೇಡದ್ದನ್ನೋ,
ಬಯಸಿ ಪಡೆಯದ್ದನ್ನೋ ಬಿಟ್ಟು ಬರುವರು ಅವರು.
ಕೋಪವನ್ನೆಂದಾದರು ಬಿಡುವರುಂಟೆ ?
ಬಿಡ ಬಲ್ಲರೇ ಅದನು ?
– ಸಚ್ಚಿದಾನಂದ ಶ್ರೀ ಸ್ವಾಮೀಜಿ

( ಸಂಗ್ರಹ )
* ಭಾಲರಾ
ಬೆಂಗಳೂರು

ಜೈಗುರುದತ್ತ


Share