MP : ಆಧ್ಯಾತ್ಮಿಕ ಅಂಗಳ : ಶ್ರೀ ಗಣೇಶ ಸಹಸ್ರನಾಮಾವಳಿಯ ಅರ್ಥ( ಭಾಷ್ಯ ) : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ – ಪುಟ – 16

532
Share

 

ಶ್ರೀ ಗಣೇಶ ಸಹಸ್ರನಾಮ ಭಾಷ್ಯ : ಪುಟ – 16

ಸಂಸ್ಕೃತದಿಂದ ಕನ್ನಡಾನುವಾದ :
ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ ,
ಅವಧೂತ ದತ್ತ ಪೀಠಂ,
ಮೈಸೂರು .

ಶ್ರೀ ಗಣೇಶ ಸಹಸ್ರ ನಾಮಾವಳಿಯ ಅರ್ಥವನ್ನು MP ( ಮೈಸೂರು ಪತ್ರಿಕೆ ) -ಆಧ್ಯಾತ್ಮಿಕ ಅಂಗಳದ ಅಂಕಣದಲ್ಲಿ ಪ್ರಕಟಿಸುವ ಪ್ರಯತ್ನವನ್ನು ಮಾಡಲು ಮುಂದಾಗಿದೆ ಎಂದು ತಿಳಿಸಲು ಹರ್ಷಿಸುತ್ತದೆ . ಗಣೇಶನ ಸಹಸ್ರನಾಮಾದ ಅರ್ಥ ಓದುವುದರ ಮೂಲಕ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನಡೆಯಲಿ ಎಂದು ಆಶಿಸುತ್ತೇವೆ . ( ಸಂಪಾದಕ )

ಇಂದಿನ ನಾಮಾವಳಿಗಳು :

81. ಓಂ ಸೂರ್ಯಮಂಡಲಮಧ್ಯಗಾಯ ನಮಃ
82. ಓಂ ಕರಾಹತಿಧ್ವಸ್ತಸಿಂಧು ಸಲಿಲಾಯ ನಮಃ
83. ಓಂ ಪೂಷದಂತಭಿದೇ ನಮಃ
84. ಓಂ ಉಮಾಂಕಕೇಲಿತುಕಿನೇ ನಮಃ
85. ಓಂ ಮುಕ್ತಿದಾಯ ನಮಃ

81. ಓಂ ಸೂರ್ಯಮಂಡಲಮಧ್ಯಗಃ : –
ಭಾಷ್ಯ :
ಧ್ಯೇಯತ್ವಾದಂತರಾದಿತ್ಯೇ ಸೂರ್ಯಮಂಡಲಮಧ್ಯಗಃ |

‘ ಆಸಾವಾದಿತ್ಯೋ ಬ್ರಹ್ಮ ‘ ಎಂದು ಆದಿತ್ಯ ಮಂಡಲದ ಮಧ್ಯದಲ್ಲಿ ಧ್ಯಾನಿಸಲ್ಪಡಬೇಕಾದವನು . ಆದ್ದರಿಂದ ಸೂರ್ಯಮಂಡಲಮಧ್ಯಗನು .
ಓಂ ಸೂರ್ಯಮಂಡಲಮಧ್ಯಗಾಯ ನಮಃ
ಕರಾಹತಿ ಧ್ವಸ್ತ ಸಿಂಧು ಸಲಿಲಃ ಪೂಷದಂತಭಿತ್ |
ಉಮಾಂಕ ಕೇಲಿ ಕುತುಕೀ ಮುಕ್ತಿದಃ ಕುಲಪಾಲನಃ ||

82 . ಓಂ ಕರಾಹತಿಧ್ಯಸ್ಥಸಿಂಧು ಸಲಿಲಃ : –
ಭಾಷ್ಯ :
ಶುಂಡಾ ದಂಡಾಭಿಘಾತೇನ ರಿಕ್ತಮಬ್ಧಿಂ ಚಕಾರ ಯಃ !
ಕರಾಹತಿಧ್ವಸ್ಥ ಸಿಂಧು ಸಲಿಲಃ ಸ ತತೋ ಮತಃ ॥

ಸೊಂಡಿಲೆಂಬ ದಂಡದಿಂದ ಸಮುದ್ರವನ್ನು ಪ್ರಹಾರಮಾಡಿ ಒಣಗಿಹೋಗುವಂತೆ ಮಾಡಿದ್ದರಿಂದ ಕರಾಹತಿಧ್ವಸ್ತ ಸಿಂಧು ಸಲಿಲನು .
ಓಂ ಕರಾಹತಿಧ್ವಸ್ತಸಿಂಧುಸಲಿಲಾಯನಮಃ

83 . ಓಂ ಪೂಷದಂತಭಿದೇಃ : –
ಭಾಷ್ಯ :
ವೀರಭದ್ರೋ ದಕ್ಷಮಖೇ ಪೂಷ್ಣೋ ದಂತಾನಪಾತಯತ್ |
ತದ್ರೂಪತ್ವಾದಸೌ ದೇವಃ ಕಥ್ಯತೇ ಪೂಷದಂತಭಿತ್ ||

ವೀರಭದ್ರನು ದಕ್ಷಯಜ್ಞದಲ್ಲಿ ಪೂಷನ ( ಸೂರ್ಯನ ) ಹಲ್ಲುಗಳನ್ನು ಉದುರಿಸಿದನು . ಗಣೇಶನು ವೀರಭದ್ರ ಸ್ವರೂಪವೇ ಆದ್ದರಿಂದ ಪೂಷದಂತಭಿತ್ ಎಂದು ಹೇಳಲ್ಪಡುತ್ತಾನೆ .
ಓಂ ಪೂಷದಂತಭಿದೇ ನಮಃ

84 . ಓಂ ಉಮಾಂಕ ಕೇಲಿ ಕುತುಕೀ –
ಭಾಷ್ಯ :
ಗೌರ್ಯುತ್ಸಂಗೇ ಕೃತಕ್ರೀಡೋ ನ ಬಾಲ್ಯಾತ್ಕಿಂತು ಕೌತುಕಾತ್ |
ಅತ ಏವೋಮಾಂಕಕೇಲಿಕುತುಕೀ ವಿಬುಧೈಃ ಸ್ಮೃತಃ ॥

ಬಾಲ್ಯ ಸಹಜವಾದ ಬುದ್ಧಿಯಿಂದಲ್ಲದೇ ಕುತೂಹಲದಿಂದ ಗೌರೀದೇವಿಯ ಮಡಿಲಲ್ಲಿ ಆಟವಾಡಿದ್ದರಿಂದ ಉಮಾಂಕಕೇಲಿಕುತುಕಿ ಎಂದು ಪಂಡಿತರಿಂದ ಸ್ಮರಿಸಲ್ಪಟ್ಟಿದ್ದಾನೆ .
ಓಂ ಉಮಾಂಕಕೇಲಿಕುತುಕಿನೇ ನಮಃ
85 . ಓಂ ಮುಕ್ತಿದಃ : –
ಭಾಷ್ಯ : ನಿಗಡೋನ್ಮೋಚನಾನ್ಮೋಕ್ಷದಾನಾದ್ವಾ ಮುಕ್ಕಿದೋ ಮತಃ |

ಬಂಧಗಳೆಂಬ ಸಂಕೋಲೆಗಳನ್ನು ಬಿಡಿಸುವುದರಿಂದ ಮುಕ್ತಿದನು . ಮೋಕ್ಷವನ್ನು ಕೊಡುವುದರಿಂದಲೂ ಗಣೇಶನು ‘ ಮುಕ್ತಿದನು .
ಓಂ ಮುಕ್ತಿದಾಯ ನಮಃ

( ಮುಂದುವರೆಯುವುದು )

(ಸಂಗ್ರಹ )
* ಭಾಲರಾ
ಬೆಂಗಳೂರು


Share