MP : ಆಧ್ಯಾತ್ಮಿಕ ಅಂಗಳ : ಶ್ರೀ ಗಣೇಶ ಸಹಸ್ರನಾಮಾವಳಿಯ ಅರ್ಥ( ಭಾಷ್ಯ ) : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ – ಪುಟ – 177

262
Share

ಶ್ರೀ ಗಣೇಶ ಸಹಸ್ರನಾಮ ಭಾಷ್ಯ : ಪುಟ – 177

ಸಂಸ್ಕೃತದಿಂದ ಕನ್ನಡಾನುವಾದ :
ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ ,
ಅವಧೂತ ದತ್ತ ಪೀಠಂ,
ಮೈಸೂರು .

ಶ್ರೀ ಗಣೇಶ ಸಹಸ್ರ ನಾಮಾವಳಿಯ ಅರ್ಥವನ್ನು MP ( ಮೈಸೂರು ಪತ್ರಿಕೆ ) -ಆಧ್ಯಾತ್ಮಿಕ ಅಂಗಳದ ಅಂಕಣದಲ್ಲಿ ಪ್ರಕಟಿಸುವ ಪ್ರಯತ್ನವನ್ನು ಮಾಡಲು ಮುಂದಾಗಿದೆ ಎಂದು ತಿಳಿಸಲು ಹರ್ಷಿಸುತ್ತದೆ . ಗಣೇಶನ ಸಹಸ್ರನಾಮಾದ ಅರ್ಥ ಓದುವುದರ ಮೂಲಕ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನಡೆಯಲಿ ಎಂದು ಆಶಿಸುತ್ತೇವೆ . ( ಸಂಪಾದಕ )

ಇಂದಿನ ನಾಮಾವಳಿಗಳು :

956 . ಓಂ ದ್ವಾತ್ರಿಂಶದ್ಭೈರವಾಧೀಶಾಯ ನಮಃ
957 . ಓಂ ಚತುಸ್ತ್ರಿಂಶನ್ಮಹಾಹ್ರದಾಯ ನಮಃ
958 . ಓಂ ಷಟ್ತ್ರಂಶತ್ತತ್ತ್ವ ಸಂಭೂತಯೇ ನಮಃ
959 . ಓಂ ಅಷ್ಟಾತ್ರಿಂಶತ್ಕಲಾತನವೇ ನಮಃ
960 . ಓಂ ನಮದೇಕೋನಪಂಚಾಶನ್ಮರುಧ್ವರ್ಗ ನಿರರ್ಗಲಾಯ ನಮಃ

956 . ಓಂ ದ್ವಾತ್ರಿಂಶದ್ಭೈರವಾಧೀಶಃ –
ಭಾ : ದ್ವಾತ್ರಿಂಶದ್ಭೈರವಾಧೀಶ ಶ್ಚತ್ವಾರೋ ಭೈರವಾಷ್ಟಕಾಃ ।
ಅಸಿತಾಂಗದಯೋ ಯೇ ಯೇ ತೇಷಾಂ ತೇಷಾಮಧೀಶ್ವರಃ ॥
೧. ಅಸಿತಾಂಗ ೨. ವಿಶಾಲಾಕ್ಷ ೩. ಮಾರ್ತಾಂಡ ೪. ಮೋದಕಪ್ರಿಯ ೫. ಸ್ವಚ್ಛಂದ ೬. ವಿಘ್ನಸಂತುಷ್ಟ ೭. ಖೇಚರ ೮. ಸಚರಾಚರ ೯. ರುರು ೧೦. ಕ್ರಂದದಂಷ್ಟ್ರ ೧೧. ಜಟಾಧರ ೧೨. ವಿಶ್ವರೂಪ ೧೩. ವಿರೂಪಾಕ್ಷ ೧೪. ನಾನಾರೂಪಧರ ೧೫. ವಜ್ರಹಸ್ತ ೧೬. ಮಹಾಕಾಯ ೧೭. ಚಂಡ ೧೮. ಪ್ರಳಯಾಂತಕ ೧೯ , ಭೂಮಿಕಂಪ ೨೦. ನೀಲಕಂಠ ೨೧. ವಿಷ್ಣು ೨೨. ಕುಲಪಾಲಕ ೨೩. ಮುಂಡಪಾಲ ೨೪ , ಕಾಮಪಾಲ ೨೫ , ಕ್ರೋಧ ೨೬. ಪಿಂಗಲೇಕ್ಷಣ ೨೭. ಅಭ್ರರೂಪ ೨೮. ಧರಾಪಾಲ ೨೯ ಕುಟಿಲ ೩೦ . ಮಂತ್ರನಾಯಕ ೩೧ . ರುದ್ರ ೩೨ . ಪಿತಾಮಹ ಇವರು ಮೂವತ್ತೆರಡು ಮಂದಿ ಭೈರವರು . ಗಣೇಶನು ಭೈರವರೆಲ್ಲರಿಗೂ ಅಧಿಪತಿಯಾಗಿದ್ದಾನೆ ಆದ್ದರಿಂದ ಅವನ್ನು ದ್ವಾತ್ರಿಂಶದ್ಭೈರವಾಧೀಶನು.
ಓಂ ದ್ವಾತ್ರಿಂಶದ್ಭೈರವಾಧೀಶಾಯ ನಮಃ

957 . ಓಂ ಚತುಸ್ತ್ರಿಂಶನ್ಮಹಾಹ್ರದಃ –
ಭಾ : ಪುಷ್ಕರಾದ್ಯಾ ದೇವಖಾತಾಃ ಸಂತಿ ಪುಣ್ಯಾ ಮಹಾಹ್ರದಾಃ ।
ತದಾತ್ಮಕತ್ವೇನ ಭವಾಂಶ್ಚತುಸ್ತ್ರಿಂಶನ್ಮಹಾಹ್ರದಃ ॥
ಹೇ ಗಣೇಶ ಪುಷ್ಕರ ಮೊದಲಾದ ಮೂವತ್ತನಾಲ್ಕು ದೇವ ಸರೋವರ ಸ್ವರೂಪನು ನೀನೇ.
ಓಂ ಚತುಸ್ತ್ರಿಂಶನ್ಮಹಾಹ್ರದಾಯ ನಮಃ

958 . ಓಂ ಷಟ್ತ್ರಿಂಶತ್ತತ್ತ್ವಸಂಭೂತಿಃ –
ಷಟ್ತ್ರಿಂಶತ್ತತ್ತ್ವ ಸಂಭೂತಿಃ ಶೈವತಂತ್ರೋಕ್ತಯಾ ದಿಶಾ ।
ಶಿವಾದಿಕ್ಷಿತಿ ಪರ್ಯಂತ ಷಟ್ರಿಂಶತ್ತತ್ತ್ವ ಕಾರಣಮ್ ॥
ಶೈವ ತಂತ್ರದಲ್ಲಿ ಹೇಳಿರುವ ಹಾಗೆ ಶಿವನಿಂದ ಪ್ರಾರಂಭವಾಗಿ ಭೂತತ್ವವರೆಗಿರುವ ಮೂವತ್ತಾರು ತತ್ತ್ವಗಳಿಗೆ ಕಾರಣನಾದ್ದರಿಂದ ಗಣಪತಿಯು ಷಟ್ತ್ರಿಂಶತ್ತತ್ತ್ವಸಂಭೂತಿಯು.
( ಶೈವತಂತ್ರೋಕ್ತ ಷಟ್ಟ್ರಿಂಶತತ್ವಗಳು – ೧. ಸದಾಶಿವ , ೨ . ಈಶ್ವರ , ೩. ಶುದ್ಧವಿದ್ಯಾ , ೪ , ಮಾಯಾತತ್ವ , ೫. ಕಾಲತತ್ತ್ವ , ೬. ಕಲಾತತ್ವ , ೭ . ನಿಯತಿ , ೮. ವಿದ್ಯಾ , ೯ , ರಾಗ , ೧೦. ಪುರುಷ ೧೧ , ಪ್ರಕೃತಿ , ೧೨. ಗುಣ, ೧೩. ಋದ್ಧಿ , ೧೪ . ಅಹಂಕಾರ , ೧೫ . ಮನಸ್ತತ್ವ , ೧೬ . ಶ್ರೋತ್ರ , ೧೭ . ತ್ವಕ್ , ೧೮. ಚಕ್ಷುಸ್ , ೧೯ , ಜಿಹ್ವಾ , ೨೦. ನಾಸಾ , ೨೧ , ವಾಕ್ , ೨೨ , ಪಾಣಿ, ೨೩. ಪಾದ , ೨೪ , ಪಾಯು , ೨೫ , ಉಪಸ್ಥ , ೨೬ , ಶಬ್ದ , ೨೭ , ಸ್ಪರ್ಶ ೨೮. ರೂಪ , ೨೯ , ರಸ , ೩೦. ಗಂಧ , ೩೧ , ವ್ಯೋಮ , ೩೨. ವಾಯು ೩೩ , ಅಗ್ನಿ , ೩೪ , ಜಲ , ೩೫. ಪೃಥಿವೀ , ೩೬. ಶಿವತತ್ತ್ವಗಳು . ಶಿವತತ್ತ್ವದಿಂದ ಪ್ರಾರಂಭಿಸಿ ಪೃಥಿವ್ಯಂತವಾಗಿ ಪೂರ್ಣಗೊಳಿಸುವ ಕ್ರಮವೂ ಉಂಟು . )
ಓಂ ಷಟ್ತ್ರಂಶತ್ತತ್ತ್ವ ಸಂಭೂತಯೇ ನಮಃ
ಓಂ ಅಷ್ಟಾತ್ರಿಂಶತ್ಕಲಾತನುಃ –
ಭಾ : ವಹ್ನೇಃ ಸೂರ್ಯಸ್ಯ ಚಂದ್ರಸ್ಯ ದಶ ದ್ವಾದಶ ಷೋಡಶ ।
ಕಲಾಸ್ಸಂತಿ ತದಾತ್ಮತ್ವಾ – ದಷ್ಟಾತ್ರಿಂಶತ್ಕಲಾತನುಃ ॥
ಅಗ್ನಿಯ ಹತ್ತುಲೆಗಳು , ಸೂರ್ಯನ ಹನ್ನೆರಡು ಕಲೆಗಳು , ಚಂದ್ರನ ಹದಿನಾರು ಕಲೆಗಳು , ಒಟ್ಟು ಸೇರಿ ಮೂವತ್ತೆಂಟು ಕಲೆಗಳು . ಗಣೇಶನು ಈ ಕಲೆಗಳನ್ನೇ ತನ್ನ ಶರೀರವನ್ನಾಗಿ ಮಾಡಿಕೊಂಡು ಅಷ್ಟಾತ್ರಿಂಶತ್ಕಲಾತನುವಾಗಿದ್ದಾನೆ .
( ಅಗ್ನಿಕಲೆಗಳು – ೧. ಧೂಮ್ರಾರ್ಚಿ , ೨. ಊಷ್ಮ ೩. ಜ್ವಲಿನಿ , ೪. ಜ್ವಾಲಿನೀ , ೫. ವಿಸ್ಟುಲಿಂಗಿನೀ , ೬. ಸುಶ್ರೀ , ೭. ಸುರೂಪಾ ೮. ಕಪಿಲಾ , ೯ . ಹವ್ಯವಾಹಾ ೧೦ . ಕವ್ಯವಾಹಾ
ಸೂರ್ಯ ಕಲೆಗಳು- ೧. ತಪಿನೀ , ೨ , ತಾಪಿನೀ , ೩. ಧೂಮ್ರ , ೪. ಮರೀಚೀ ೫. ಜ್ವಾಲಿನೀ , ೬. ರುಚಿ , ೭. ಸುಷುಮ್ನ ೮. ಭೋಗದಾ , ೯ . ವಿಶ್ವಾ ೧೦. ಬೋಧಿನಿ ೧೧. ಧಾರಿಣೀ ೧೨. ಕ್ಷಮಾ
ಚಂದ್ರಕಲೆಗಳು – ೧. ಅಮೃತ , ೨. ಮಾನದಾ , ೩. ಪೂಷಾ , ೪ . ತುಷ್ಟಿ , ೫. ಪುಷ್ಟಿ , ೬. ರತಿ , ೭. ಧೃತಿ , ೮. ಶಶಿನೀ , ೯. ಚಂದ್ರಿಕಾ , ೧೦. ಚಂದ್ರಿಕಾ ೧೧. ಜ್ಯೋತ್ಸಾ , ೧೨. ಶ್ರೀ ೧೩. ಪ್ರೀತಿ , ೧೪ , ಅಂಗದಾ ೧೫. ಪೂರ್ಣ ೧೬. ಪೂರ್ಣಾಮೃತಾ . )
ಓಂ ಅಷ್ಟಾತ್ರಿಂಶತ್ಕಲಾತನವೇ ನಮಃ ನಮದೇಕೋನಪಂಚಾಶನ್ಮರುದ್ವರ್ಗ ನಿರರ್ಗಲಃ | ಪಂಚಾಶದಕ್ಷರಶ್ರೇಣೀ ಪಂಚಾಶದ್ರುದ್ರವಿಗ್ರಹಃ ||

960 . ಓಂ ನಮದೇಕೋನಪಂಚಾಶನ್ಮರುಧ್ವರ್ಗ ನಿರರ್ಗಲಃ –
ಭಾ : ಮರುಧ್ವರ್ಗಶತಾಶ್ಚಾಸೌ ನಿಷ್ಪತ್ತೂಹಗತಿಶ್ಚ ಸಃ । ನಮದೇಕೋನಪಂಚಾಶನ್ಮರುಧ್ವರ್ಗನಿರರ್ಗಲಃ ॥
ಇಂದ್ರನು ದ್ವಿತೀಯ 7 ಭಾಗಗಳನ್ನಾಗಿ ಖಂಡಿಸಿ ಆ ಏಳನ್ನೂ ಮತ್ತೆ ಏಳೇಳು ಭಾಗಗಳನ್ನಾಗಿ ಖಂಡಿಸಿದನು .
ಹಾಗೆ ನಲವತ್ತೊಂಬತ್ತು ಮರುತ್ತುಗಳ ಉತ್ಪತ್ತಿಯಾಯಿತು. ಮರುತ್ತುಗಳ ಗುಂಪನ್ನು ಮರುತ್ ಕಾರಣವೆನ್ನುತ್ತಾರೆ. ಗಣೇಶನು ಮರುದ್ಗಣದಿಂದ ವರ್ಣಿಸಲ್ಪಟ್ಟಿದ್ದಾನೆ. ಹಾಗೂ ಆ ಮರುದ್ಗಣಗಳ ಮಧ್ಯದಲ್ಲಿ ಸ್ವತಂತ್ರನಾಗಿ ಸಂಚರಿಸುತ್ತಿದ್ದಾನೆ.
ಓಂ ನಮದೇಕೋನಪಂಚಾಶನ್ಮರುಧ್ವರ್ಗ ನಿರರ್ಗಲಾಯ ನಮಃ

( ಮುಂದುವರೆಯುವುದು )

( ಸಂಗ್ರಹ )

* ಭಾಲರಾ
ಬೆಂಗಳೂರು


Share