MP : ಆಧ್ಯಾತ್ಮಿಕ ಅಂಗಳ : ಶ್ರೀ ಗಣೇಶ ಸಹಸ್ರನಾಮದ ಅರ್ಥ( ಭಾಷ್ಯ ) : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ – ಪುಟ – 21

439
Share

ಶ್ರೀ ಗಣೇಶ ಸಹಸ್ರನಾಮ ಭಾಷ್ಯ : ಪುಟ – 21

ಸಂಸ್ಕೃತದಿಂದ ಕನ್ನಡಾನುವಾದ :
ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ ,
ಅವಧೂತ ದತ್ತ ಪೀಠಂ,
ಮೈಸೂರು .

ಶ್ರೀ ಗಣೇಶ ಸಹಸ್ರ ನಾಮಾವಳಿಯ ಅರ್ಥವನ್ನು MP ( ಮೈಸೂರು ಪತ್ರಿಕೆ ) -ಆಧ್ಯಾತ್ಮಿಕ ಅಂಗಳದ ಅಂಕಣದಲ್ಲಿ ಪ್ರಕಟಿಸುವ ಪ್ರಯತ್ನವನ್ನು ಮಾಡಲು ಮುಂದಾಗಿದೆ ಎಂದು ತಿಳಿಸಲು ಹರ್ಷಿಸುತ್ತದೆ . ಗಣೇಶನ ಸಹಸ್ರನಾಮಾದ ಅರ್ಥ ಓದುವುದರ ಮೂಲಕ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನಡೆಯಲಿ ಎಂದು ಆಶಿಸುತ್ತೇವೆ . ( ಸಂಪಾದಕ )

ಇಂದಿನ ನಾಮಾವಳಿಗಳು :

106 . ಓಂ ಚಿತ್ರಾಂಕಶ್ಯಾಮದಶನಾಯ ನಮಃ
107 . ಓಂ ಫಾಲಚಂದ್ರಾಯ ನಮಃ
108 . ಓಂ ಚತುರ್ಭುಜಾಯ ನಮಃ
109 . ಓಂ ಯೋಗಾಧಿಪಾಯ ನಮಃ
110 . ಓಂ ತಾರಕಸ್ಥಾಯ ನಮಃ

106 . ಓಂ ಚಿತ್ರಾಂಕಶ್ಯಮದಶನಃ : –
ಭಾಷ್ಯ :
ಶ್ಯಾಮೈಕ ಪ್ರಚುರೈಶ್ಚಿತ್ರೈರಂಕಿತೇ ರದನೇ ಸತಿ ।
ಚಿತ್ರಾಂಕಶ್ಯಾಮದಶನ ಇತ್ಯೇವಂ ಸ್ತೂಯಸ್ರ ಬುಧೈಃ ॥

ಗಣೇಶನ ಬೆಳ್ಳಗಿರುವ ದಂತದ ಮೇಲೆ ಅಲಂಕಾರಕ್ಕಾಗಿ, ಅಲ್ಲಲ್ಲಿ ಹಸಿರು ಬಣ್ಣವನ್ನು ಹಚ್ಚಿದ್ದಾರೆ. ಆದ್ದರಿಂದ ಅವನಿಗೆ ಈ ಹೆಸರು. ಅಥವಾ ಗಣೇಶನು ಹಸಿರಾದ ಅರಣ್ಯದಲ್ಲಿ ಸಂಚರಿಸುತ್ತಿದ್ದ ಸಮಯದಲ್ಲಿ ಬೆಳ್ಳಗಿರುವ ಅವನ ದಂತದ ಮೇಲೆ ಹಸಿರು ಬಣ್ಣವು ಪ್ರತಿಬಿಂಬಿಸಿತು. ಅವರಿಂದ ಅವನು ಹಸಿರು ಗ್ರಂಥವನ್ನು ಹೊಂದಿದ್ದಾನೆಯೇನೋ ಎಂದೆನಿಸಿತು. ಆದಕಾರಣ ಅವನು ಚುತ್ರಾಂಕಶ್ಯಾಮದಶನಾಯ ನಮಃ

107 . ಓಂ ಫಾಲಚಂದ್ರಾಯ ನಮಃ
ಭಾಷ್ಯ :
ಫಾಲಚಂದ್ರ ಇತಿಖ್ಯಾತೋ ಫಾಲೇ ಚಂದ್ರಸ್ಯ ಧಾರಣಾತ್ ।
ಅಷ್ಟಮೀ ಚಂದ್ರಸದೃಶಂ ಲಲಾಟಂ ಯಸ್ಯ ಸೋ ೭ ಥವಾ ||

ಹಣೆಯಲ್ಲಿ ಚಂದ್ರನನ್ನು ಅಲಂಕಾರವಾಗಿ ಧರಿಸಿರುವುದರಿಂದಲೂ ಅಥವಾ ಅಷ್ಟಮೀ ತಿಥಿಯ ಚಂದ್ರನಂತಹ ಆಕಾರದ ಹಣೆಯು ಗಣೇಶನಿಗೆ ಇರುವುದರಿಂದಲೂ ಅವನು ಫಾಲಚಂದ್ರನು .
ಓಂ ಫಾಲಚಂದ್ರಾಯ ನಮಃ

108 . ಓಂ ಚತುರ್ಭುಜಃ : –
ಭಾಷ್ಯ :
ಚತ್ವಾರೋ ಬಾಹವೋ ಯಸ್ಯ ವಿಗ್ರಹ ಸ ಚತುರ್ಭುಜಃ ।

ಯಾರ ವಿಗ್ರಹ ಮೂರ್ತಿಯಲ್ಲಿ ನಾಲ್ಕು ಭುಜಗಳು ಇರುತ್ತವೆಯೋ ಅವನು ಚತುರ್ಭುಜನು . ( ಗಣೇಶನಿಗೆ ನಾಲ್ಕು ಭುಜಗಳು ಇರುತ್ತವೆ ಎಂದು ಭಾವ . )
ಓಂ ಚತುರ್ಭುಜಾಯ ನಮಃ

109 . ಓಂ ಯೋಗಾಧಿಪಃ : –
ಭಾಷ್ಯ :
ಯೋಗಾಚಾರ್ಯಾವತಾರಾ ಯೇ ಲೈಂಗೇ ೭ ಷ್ಟಾವಿಂಶತಿಃ ಸ್ಮೃತಾಃ |
ಲಕುಲೀಶಾದಯ ಸ್ತತ್ತದ್ರೂಪೋ ಯೋಗಾಧಿಪೋ ಮತಃ ॥
ನಕುಲೀಶ ಮೊದಲಾದ 28 ಮಂದಿ ಯೋಗಾಚಾರ್ಯರ ಅವತಾರಗಳು ಹೇಳಲ್ಪಟ್ಟಿವೆ. ಗಣೇಶನು ಆ ಎಲ್ಲಾ ಯೋಗಾಚಾರ್ಯರ ರೂಪದವನಾದ್ದರಿಂದ ಅವನು ಯೋಗಾಧಿಪನು. ( ಯೋಗಾಚಾರ್ಯಧಿಪನು ಎಂದು ಮಧ್ಯಮಪದಲೋಪಿ ಸಮಾಸವೆಂದು ತಿಳಿಯತಕ್ಕದ್ದು )
ಓಂ ಯೋಗಾಧಿಪಾಯ ನಮಃ

( ಶ್ವೇತ , ಸುತಾರ , ಮದನ , ಸುಹೋತ್ರ , ಕಂಕಣ , ಲೋಗಾಕ್ಷಿ , ಜೈಗೀಷವ್ಯ, ದಧಿವಾಹನ , ಋಷಭ , ಮುನಿ ಉಗ್ರ , ಅತ್ರಿ , ಸುಬಾಲಕ , ವೇದಶೀರ್ಷ, ಗೋಕರ್ಣ , ಗುಹದಾಸಿ , ಶಿಖಂಡಭೃತ್ , ಜಟಾಮಾಲಿ , ಅಟ್ಟಹಾಸ , ದಾರುಕ, ಲಾಂಗಲಿ, ಮಹಾಕಾಯ, ಶೂಲಿ, ಭುಂಡೀಶ್ವರ, ಸಹಿಷ್ಣು, ಸೋಮಶರ್ಮ, ನಕುಲೀಶ ಈ ಇಪ್ಪತ್ತೆಂಟು ಮಂದಿ ಯೋಗಾಚಾರ್ಯರು . )
110 . ತಾರಕಸ್ಥಃ : –
ಭಾಷ್ಯ :
ಪ್ರಣವೇನಾಭಿಧೇಯತ್ವಾತ್ ತಾರಕಸ್ಥ ಇತಿ ಸ್ಮೃತಃ ।

ಗಣೇಶನು ಪ್ರಣವ ಮಂತ್ರದಿಂದ ( ಓಂಕಾರದಿಂದ ) ಹೇಳಲ್ಪಡುವವನಾದ್ದರಿಂದ ಅವನು ‘ ತಾರಕಸ್ಥ ” ಎಂದು ಕರೆಸಿಕೊಳ್ಳುತ್ತಾನೆ .
ಓಂ ತಾರಕಸ್ಥಾಯ ನಮಃ

( ಮುಂದುವರೆಯುವುದು )

( ಸಂಗ್ರಹ )
* ಭಾಲರಾ
ಬೆಂಗಳೂರು


Share