MP : ಆಧ್ಯಾತ್ಮಿಕ ಅಂಗಳ : ಶ್ರೀ ಗಣೇಶ ಸಹಸ್ರನಾಮಾವಳಿಯ ಅರ್ಥ( ಭಾಷ್ಯ ) : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ – ಪುಟ – 43

272
Share

ಶ್ರೀ ಗಣೇಶ ಸಹಸ್ರನಾಮ ಭಾಷ್ಯ : ಪುಟ – 43

ಸಂಸ್ಕೃತದಿಂದ ಕನ್ನಡಾನುವಾದ :
ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ ,
ಅವಧೂತ ದತ್ತ ಪೀಠಂ,
ಮೈಸೂರು .

ಶ್ರೀ ಗಣೇಶ ಸಹಸ್ರ ನಾಮಾವಳಿಯ ಅರ್ಥವನ್ನು MP ( ಮೈಸೂರು ಪತ್ರಿಕೆ ) -ಆಧ್ಯಾತ್ಮಿಕ ಅಂಗಳದ ಅಂಕಣದಲ್ಲಿ ಪ್ರಕಟಿಸುವ ಪ್ರಯತ್ನವನ್ನು ಮಾಡಲು ಮುಂದಾಗಿದೆ ಎಂದು ತಿಳಿಸಲು ಹರ್ಷಿಸುತ್ತದೆ . ಗಣೇಶನ ಸಹಸ್ರನಾಮಾದ ಅರ್ಥ ಓದುವುದರ ಮೂಲಕ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನಡೆಯಲಿ ಎಂದು ಆಶಿಸುತ್ತೇವೆ . ( ಸಂಪಾದಕ )

ಇಂದಿನ ನಾಮಾವಳಿಗಳು :

221 . ಓಂ ಲಂಬನಾಸಿಕಾಯ ನಮಃ
222 . ಓಂ ಭಗ್ನವಾಮದರಾಯ ನಮಃ
223 . ಓಂ ತುಂಗಾಯ ನಮಃ
224 . ಓಂ ಸವ್ಯದಂತಾಯ ನಮಃ
225 . ಓಂ ಮಹಾಹನವೇ ನಮಃ

221. ಓಂ ಲಂಬನಾಸಿಕಃ-
ಭಾ: ಶುಂಡಾದಂಡೋ ಲಂಬಮಾನೋ ಯಸ್ಯಾಸೌ ಲಂಬನಾಸಿಕಃ ।

ದಂಡದಂತಿರುವ ಅವನ ಸೊಂಡಿಲು (ನಾಸಿಕ) ನೇತಾಡುತ್ತಿದೆ. ಆದ್ದರಿಂದ ಅವನು ಲಂಬನಾಸಿಕನು.
ಓಂ ಲಂಬನಾಸಿಕಾಯ ನಮಃ

ಭಗ್ನವಾಮ ರದಸ್ತುಂಗಃ ಸವ್ಯದಂತೋ ಮಹಾಹನುಃ ।
ಹ್ರಸ್ವ ನೇತ್ರ ತ್ರಯಃ ಶೂರ್ಪ-ಕರ್ಣೋ ನಿಬಿಡಮಸ್ತಕಃ ॥

222. ಓಂ ಭಗ್ನವಾಮರದಃ-
ಭಾ: ಭಗ್ನವಾಮರದೋ ಯಸ್ಯ ಛಿನ್ನಾಗ್ರೋ ವಾಮದಂತಕಃ ।

ಎಡಭಾಗದ ಹೊರಗಿನ ದಂತದ ತುದಿಯು ಮುರಿದು ಹೋಗಿರುವುದರಿಂದ ಆ ಏಕದಂತನು ಭಗ್ನವಾಮರದನು.
ಓಂ ಭಗ್ನವಾಮರದಾಯ ನಮಃ

223. ಓಂ ತುಂಗಃ-
ಭಾ: ದಂತೋ7ಸ್ಯ ದಕ್ಷಿಣಸ್ತುಂಗಃ……………

ಅವನ ಬಲಭಾಗದ ಹೊರಗಿನ ದಂತವು ಉದ್ದವಾಗಿದೆ. ಆದಕಾರಣ ಅವನು ತುಂಗನು.
ಓಂ ತುಂಗಾಯ ನಮಃ

224. ಓಂ ಸವ್ಯದಂತಃ-
ಭಾ: ………….ಸವ್ಯದಂತೋ ಯದುನ್ನತಃ ।

ಬಲಗಡೆಯ ದಂತದ ಮೊದಲಭಾಗ ಮಾತ್ರ ಇರುವುದರಿಂದ ಅವನು ಸವ್ಯದಂತನು. ಬಲದಂತವು ಮಾತ್ರ ಪೂರ್ಣವಾಗಿರುವುದರಿಂದ ಸವ್ಯದಂತನು.
ಓಂ ಸವ್ಯದಂತಾಯ ನಮಃ

225. ಓಂ ಮಹಾಹನುಃ-
ಭಾ: ಕಪೋಲಪರಭಾಗಸ್ಯ ಮಹತ್ತ್ವೇನ ಮಹಾಹನುಃ ।

ವಿಶಾಲವಾದ ದವಡೆಗಳು ಅವನಿಗಿವೆ. ಆದಕಾರಣ ಅವನು ಮಹಾಹನುವು.
ಓಂ ಮಹಾಹನವೇ ನಮಃ

( ಮುಂದುವರೆಯುವುದು )

( ಸಂಗ್ರಹ )

* ಭಾಲರಾ
ಬೆಂಗಳೂರು


Share