MP : ಆಧ್ಯಾತ್ಮಿಕ ಅಂಗಳ : ಶ್ರೀ ಗಣೇಶ ಸಹಸ್ರನಾಮಾವಳಿಯ ಅರ್ಥ( ಭಾಷ್ಯ ) : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ – ಪುಟ – 53

352
Share

ಶ್ರೀ ಗಣೇಶ ಸಹಸ್ರನಾಮ ಭಾಷ್ಯ : ಪುಟ – 53

ಸಂಸ್ಕೃತದಿಂದ ಕನ್ನಡಾನುವಾದ :
ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ ,
ಅವಧೂತ ದತ್ತ ಪೀಠಂ,
ಮೈಸೂರು .

ಶ್ರೀ ಗಣೇಶ ಸಹಸ್ರ ನಾಮಾವಳಿಯ ಅರ್ಥವನ್ನು MP ( ಮೈಸೂರು ಪತ್ರಿಕೆ ) -ಆಧ್ಯಾತ್ಮಿಕ ಅಂಗಳದ ಅಂಕಣದಲ್ಲಿ ಪ್ರಕಟಿಸುವ ಪ್ರಯತ್ನವನ್ನು ಮಾಡಲು ಮುಂದಾಗಿದೆ ಎಂದು ತಿಳಿಸಲು ಹರ್ಷಿಸುತ್ತದೆ . ಗಣೇಶನ ಸಹಸ್ರನಾಮಾದ ಅರ್ಥ ಓದುವುದರ ಮೂಲಕ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನಡೆಯಲಿ ಎಂದು ಆಶಿಸುತ್ತೇವೆ . ( ಸಂಪಾದಕ )

ಇಂದಿನ ನಾಮಾವಳಿಗಳು :

271 . ಓಂ ಮುದ್ಗರಾಯುಧಾಯ ನಮಃ
272 . ಓಂ ಪೂರ್ಣಪಾತ್ರಿಣೇ ನಮಃ
273 . ಓಂ ಕಂಭುಧರಾಯ ನಮಃ
274 . ಓಂ ವಿಧೃತಾಲಿಸಮುದ್ಗಕಾಯ ನಮಃ
275 . ಓಂ ಮಾತುಲಿಂಗಧರಾಯ ನಮಃ
276 . ಓಂ ಚೂತಳಿಕಾಭೃತೇ ನಮಃ

271. ಓಂ ಮುದ್ಗರಾಯುಧಃ-
ಭಾ: ಮುದಂ ಗಿರಂತಿ ಯನ್ಮಂತ್ರಸಾಧನಾನ್ಯುರುಬುಧ್ನಕಂ ।
ಮುಸಲಂ ವಾಯುಧಂ ಯಸ್ಯ ಸ ದೇವೋ ಮುದ್ಗರಾಯುಧಃ ॥
ಯಾವ ದೇವನ ಮಂತ್ರದ ಸಾಧನೆಯಿಂದ ಸಂತೋಷವು ಉಂಟಾಗುತ್ತದೆಯೋ ಮತ್ತು ಯಾವ ದೇವನು ಒಂದು ಕೊನೆಯಲ್ಲಿ ದಪ್ಪವಾಗಿರುವ ಒನಕೆಯನ್ನು (ಮುಸಲವನ್ನು) ಆಯುಧವಾಗಿ ಧರಿಸಿದ್ದಾನೆಯೋ ಅವನು ಮುದ್ಗರಾಯುಧನು.
ಪೂರ್ಣಪಾತ್ರೀ ಕಂಬುಧರೋ ವಿಧೃತಾಲಿ ಸಮುದ್ಗಕಃ೤
ಮಾತುಲಿಂಗಧರಃ ಚೂತ- ಕಳಿಕಾಭೃತ್ ಕುಠಾರವಾನ್‌ ॥

272. ಓಂ ಪೂರ್ಣಪಾತ್ರೀ-
ಭಾ: ಪೂರ್ಣಪಾತ್ರಂ ಯಾಜ್ಞಿಕೇಷು ಪ್ರಸಿದ್ಧಂ ತದ್ಯುತೋ ಮಖಃ ।
ಯದ್ವಾ ಸುಧಾಘಟಯುತಃ ಪೂರ್ಣಪಾತ್ರೀತಿ ಕೀರ್ತ್ಯತೇ ॥
ಯಜ್ಞಗಳಲ್ಲಿ ಉಪಯೋಗಿಸಲ್ಪಡುವ ಒಂದು ಪಾತ್ರವಿಶೇಷವು ಪೂರ್ಣಪಾತ್ರೆಯೆಂದು ಕರೆಯಲ್ಪಡುತ್ತದೆ. ಯಜ್ಞರೂಪನಾದ್ದರಿಂದ ಗಣೇಶನನ್ನು ಪೂರ್ಣಪಾತ್ರೀಯೆನ್ನುತ್ತಾರೆ. ಅಥವಾ ಅಮೃತದಿಂದ ತುಂಬಿದ ಕಲಶವನ್ನು ಧರಿಸಿರುತ್ತಾನಾದ್ದರಿಂದಲೂ ಅವನು ಪೂರ್ಣಪಾತ್ರಿಯಾಗಿದ್ದಾನೆ.
ಓಂ ಪೂರ್ಣಪಾತ್ರಿಣೇ ನಮಃ

273. ಓಂ ಕಂಬುಧರಃ-
ಭಾ: ಶಂಖಸ್ಯ ಧಾರಣಾದ್ಧಸ್ತೇ ದೇವಃ ಕಂಬುಧರಃ ಸ್ಮೃತಃ ।
ಕಂಬುಯೆಂದರೆ ಶಂಖ. ಶಂಖವನ್ನು ಕೈಯಲ್ಲಿ ಹಿಡಿದಿರುವುದರಿಂದ ಅವನು ಕಂಬುಧರನು.
ಓಂ ಕಂಬುಧರಾಯ ನಮಃ

274. ಓಂ ವಿಧೃತಾಲಿಸಮುದ್ಗಕಃ-
ಭಾ: ಮದ್ಯಸಂಪುಟಕಂ ಧತ್ತೇ ಭೃಂಗಾಣಾಂ ಸಂಪುಟಾಯತೇ ।
ಯೋ ಮದಸ್ತಂ ಕಟೇ ಧತ್ತೇ ವಿಧೃತಾಲಿ ಸಮುದ್ಗಕಃ ॥
ಕೆನ್ನೆಗಳಿಂದ (ಗಂಡಸ್ಥಲದಿಂದ) ಸ್ರವಿಸುತ್ತಿರುವ ಮದರಸಕ್ಕಾಗಿ ಗಣೇಶನ ಮುಖದ ಸುತ್ತಲೂ ದುಂಬಿಗಳು ಬಂದು ಸೇರಿವೆ. ಅಥವಾ ಲಿಪಿರೂಪನಾದ ಗಣೇಶನು ಎಲ್ಲರ ಹಣೆಬರಹವನ್ನು ಬರೆಯಲೆಂದು ಮದ್ಯದ (ಮಸಿಯ) ಡಬ್ಬಿಯನ್ನು ಕೈಯಲ್ಲಿ ಹಿಡಿದಿದ್ದಾನೆ. ಅದರ ಸುತ್ತಲೂ ದುಂಬಿಗಳು ಸೇರಿಕೊಂಡಿವೆ. ಗಣೇಶನು ಆ ದುಂಬಿಗಳನ್ನೇ ಬರೆಯುವ ಸಾಧನೆಗಳನ್ನಾಗಿರಿಸಿಕೊಂಡಿದ್ದಾನೆ. ಆದ್ದರಿಂದಲೂ ಅವನು ವಿಧೃತಾಲಿಸಮುದ್ಗಕನು.
ಓಂ ವಿಧೃತಾಲಿಸಮುದ್ಗಕಾಯ ನಮಃ

275. ಓಂ ಮಾತುಲಿಂಗಧರಃ- 276. ಓಂ ಚೂತಕಳಿಕಾಭೃತ್-
ಭಾ: ಬೀಜಾಪೂರ ಫಲಂ ಚಾಮ್ರಮಂಜರೀಂ ಚ ಕರೇ ದಧತ್‌ ।
ಮಾತುಲಿಂಗಧರಶ್ಚೂತಕಳಿಕಾ ಭೃಚ್ಛ ಕಥ್ಯತೇ ॥
ಮಾದೀಫಲವನ್ನು ಕೈಯಲ್ಲಿ ಧರಿಸಿರುವುದರಿಂದ ಅವನು ಮಾತುಲಿಂಗಧರನಾಗಿದ್ದಾನೆ.
ಓಂ ಮಾತುಲಿಂಗಧರಾಯ ನಮಃ
ಮಾವಿನ ಚಿಗುರಿನ ಗುಚ್ಛವನ್ನು ಕೈಯಲ್ಲಿ ಧರಿಸಿರುವುದರಿಂದ ಆ ಸ್ಕಂದಾಗ್ರಜನು ಚೂತಕಳಿಕಾಭೃತ್ ಎಂದು ಕರೆಯಲ್ಪಡುತ್ತಾನೆ.
ಓಂ ಚೂತಕಳಿಕಾಭೃತೇ ನಮಃ

( ಮುಂದುವರೆಯುವುದು )

( ಸಂಗ್ರಹ )
* ಭಾಲರಾ
ಬೆಂಗಳೂರು


Share