MP : ಆಧ್ಯಾತ್ಮಿಕ ಅಂಗಳ : ಶ್ರೀ ಗಣೇಶ ಸಹಸ್ರನಾಮಾವಳಿಯ ಅರ್ಥ( ಭಾಷ್ಯ ) : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ – ಪುಟ – 75

283
Share

ಶ್ರೀ ಗಣೇಶ ಸಹಸ್ರನಾಮ ಭಾಷ್ಯ : ಪುಟ – 76

ಸಂಸ್ಕೃತದಿಂದ ಕನ್ನಡಾನುವಾದ :
ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ ,
ಅವಧೂತ ದತ್ತ ಪೀಠಂ,
ಮೈಸೂರು .

ಶ್ರೀ ಗಣೇಶ ಸಹಸ್ರ ನಾಮಾವಳಿಯ ಅರ್ಥವನ್ನು MP ( ಮೈಸೂರು ಪತ್ರಿಕೆ ) -ಆಧ್ಯಾತ್ಮಿಕ ಅಂಗಳದ ಅಂಕಣದಲ್ಲಿ ಪ್ರಕಟಿಸುವ ಪ್ರಯತ್ನವನ್ನು ಮಾಡಲು ಮುಂದಾಗಿದೆ ಎಂದು ತಿಳಿಸಲು ಹರ್ಷಿಸುತ್ತದೆ . ಗಣೇಶನ ಸಹಸ್ರನಾಮಾದ ಅರ್ಥ ಓದುವುದರ ಮೂಲಕ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನಡೆಯಲಿ ಎಂದು ಆಶಿಸುತ್ತೇವೆ . ( ಸಂಪಾದಕ )

ಇಂದಿನ ನಾಮಾವಳಿಗಳು :

393 . ಓಂ ಇತಿಕರ್ತವ್ಯತೇಪ್ಸಿತಾಯ ನಮಃ
394 . ಓಂ ಈಶಾನಮೌಲಯೇ ನಮಃ
395 . ಓಂ ಈಶಾನಾಯ ನಮಃ
396 . ಓಂ ಈಶಾನ ಸುತಾಯ ನಮಃ
397 . ಓಂ ಈತಿಹಾಯ ನಮಃ

393. ಓಂ ಇತಿಕರ್ತವ್ಯತೇಪ್ಸಿತಃ-
ಭಾ: ಇತಿಕರ್ತವ್ಯತಾಶಬ್ದಃ ಕ್ರತ್ವಂಗ ಸ್ತೋಮವಾಚಕಃ ।
ತಾಮಪೇಕ್ಷ್ಯ ದದತ್ಕಾಮಾನಿತಿಕರ್ತವ್ಯತೇಪ್ಸಿತಃ ॥
ಯಾಗದ ಅಂಗಗಳಾದ ಸ್ತೋತ್ರಗಳನ್ನು ‘ಇತಿಕರ್ತವ್ಯತಾ’ ಎಂದು ಕರೆಯುತ್ತಾರೆ. ಆ ಸ್ತೋತ್ರಗಳನ್ನು ಅಪೇಕ್ಷಿಸಿ (ಸ್ತೋತ್ರ ಮಾಡಿದವರಿಗೆ) ಕೋರಿಕೆಗಳನ್ನು ಈಡೇರಿಸುತ್ತಾನೆ. ಆದ್ದರಿಂದ ಅವನು ಇತಿಕರ್ತವ್ಯತೇಪ್ಸಿತನು. (ಕ್ರಮದಲ್ಲಿ ಮಾಡಬೇಕಾದ ಯಾಗಗಳನ್ನು ಮಾಡಿದರೆ ಸಂತೋಷದಿಂದ ಸ್ವೀಕರಿಸಿ ಅನುಗ್ರಹಿಸುತ್ತಾನೆ.)
ಓಂ ಇತಿಕರ್ತವ್ಯತೇಪ್ಸಿತಾಯ ನಮಃ

394. ಓಂ ಈಶಾನಮೌಲಿಃ-
ಭಾ: ನರಭೂತಸುರೇಶಾದ್ಯಾ ಈಶಾನಾ ಬಹವೋ7ಮಿತಾಃ।
ತೇಷಾಮೇಷೋಧಿಕೋ ಮೌಲಿರಮಿತೈಶ್ವರ್ಯಯೋಗತಃ॥
ಈಶಾನರು (ಪ್ರಭುಗಳು) ಎಂದು ಕರೆಯಲ್ಪಡುವ ಮಾನವರೂ, ಭೂತಗಳೂ, ದೇವೇಂದ್ರನೂ, ಮೊದಲಾದವರು ಬೇಕಾದಷ್ಟುಜನ ಇದ್ದಾರೆ. ಅವರೆಲ್ಲರಿಗಿಂತಲೂ ಐಶ್ವರ್ಯದಲ್ಲಿ ದೊಡ್ಡವನಾದ್ದರಿಂದ ಅವನು ಈಶಾನಮೌಲಿಯು.
ಓಂ ಈಶಾನಮೌಲಯೇ ನಮಃ

395. ಓಂ ಈಶಾನಃ-
ಭಾ: ಅನಯನ್ ಜೀವಯನ್ನೀಶಾನೀಶಾನ ಇತಿ ಕೀರ್ತ್ಯಸೇ।
ಹೇ ಪ್ರಭೂ! ನೀನು ಪ್ರಭುಗಳಿಗೆ ಜೀವದಾನವನ್ನು ಮಾಡುತ್ತಿರುವುದರಿಂದ ‘ಈಶಾನ’ ಎಂದು ಕೀರ್ತಿಸಲ್ಪಡುತ್ತಿದ್ದೀಯೆ.
ಓಂ ಈಶಾನಾಯ ನಮಃ

396. ಓಂ ಈಶಾನ ಸುತಃ-
ಭಾ: ಈಶಾನೇನ ಸುತಃ ಸೋಮರೂಪಸ್ತಸ್ಯ ಸುತೋ7ಥವಾ।
ಯಜ್ಞದ ಈಶಾನ (ಯಜಮಾನ) ನಾದವನಿಂದ ಹಿಂಡಲ್ಪಟ್ಟ ಸೋಮರಸ ಸ್ವರೂಪನಾದ್ದರಿಂದಲೂ, ಪರಮಶಿವನ ಸುತನಾದ್ದರಿಂದಲೂ ಅವನು ಈಶಾನಸುತನು.
ಓಂ ಈಶಾನ ಸುತಾಯನಮಃ

397. ಓಂ ಈತಿಹಾ-
ಭಾ: ಅತಿವೃಷ್ಟಿಮನಾವೃಷ್ಟಿಂ ಮೂಷಕಾನ್ ಶಲಭಾನ್ ಶುಕಾನ್‌೤
ಸ್ವಚಕ್ರಂ ಪರಚಕ್ರಂ ಚ ವಿನಿಘ್ನನ್ನೀತಿಹಾ ಮತಃ೤೤
ಅತಿವೃಷ್ಟಿ (ವಿಪರೀತವಾದ ಮಳೆ), ಅನಾವೃಷ್ಟಿ (ಮಳೆಯೇ ಇಲ್ಲದಿರುವುದು), ಇಲಿಗಳು, ಪತಂಗದ ಹುಳುಗಳು, ಗಿಣಿಗಳು, ತನ್ನವರು, ಇತರರು ಮೊದಲಾದವುಗಳಿಂದ ಉಂಟಾಗಬಹುದಾದ ವಿಘ್ನಗಳನ್ನೂ, ಬಾಧೆಗಳನ್ನೂ ಹೋಗಲಾಡಿಸುವುದರಿಂದ ಅವನು ಈತಿಹಾ ಎಂದು ಕರೆಸಿಕೊಳ್ಳುತ್ತಾನೆ.
ಓಂ ಈತಿಘ್ನೇ ನಮಃ
(ಅತಿವೃಷ್ಟಿರನಾವೃಷ್ಟಿಃ ಶಲಭಾ ಮೂಷಿಕಾ ಶ್ಶುಕಾಃ
ಅತ್ಯಾಸನ್ನಾಶ್ಚ ರಾಜಾನಃ ಷಡೇತಾ ಈತಯಃ ಸ್ಮೃತಾಃ)
ಈಷಣಾತ್ರಯಕಲ್ಪಾಂತ ಈಹಾಮಾತ್ರವಿವರ್ಜಿತಃ ।
ಉಪೇಂದ್ರ ಉಡುಭೃನ್ಮೌಲಿ ರುಂಡೇರಕಬಲಿಪ್ರಿಯಃ ॥

( ಮುಂದುವರೆಯುವುದು )

( ಸಂಗ್ರಹ )
* ಭಾಲರಾ
ಬೆಂಗಳೂರು


Share