MP : ಆಧ್ಯಾತ್ಮಿಕ ಅಂಗಳ : ಶ್ರೀ ಗಣೇಶ ಸಹಸ್ರನಾಮಾವಳಿಯ ಅರ್ಥ( ಭಾಷ್ಯ ) : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ – ಪುಟ – 79

259
Share

ಶ್ರೀ ಗಣೇಶ ಸಹಸ್ರನಾಮ ಭಾಷ್ಯ : ಪುಟ – 79

ಸಂಸ್ಕೃತದಿಂದ ಕನ್ನಡಾನುವಾದ :
ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ ,
ಅವಧೂತ ದತ್ತ ಪೀಠಂ,
ಮೈಸೂರು .

ಶ್ರೀ ಗಣೇಶ ಸಹಸ್ರ ನಾಮಾವಳಿಯ ಅರ್ಥವನ್ನು MP ( ಮೈಸೂರು ಪತ್ರಿಕೆ ) -ಆಧ್ಯಾತ್ಮಿಕ ಅಂಗಳದ ಅಂಕಣದಲ್ಲಿ ಪ್ರಕಟಿಸುವ ಪ್ರಯತ್ನವನ್ನು ಮಾಡಲು ಮುಂದಾಗಿದೆ ಎಂದು ತಿಳಿಸಲು ಹರ್ಷಿಸುತ್ತದೆ . ಗಣೇಶನ ಸಹಸ್ರನಾಮಾದ ಅರ್ಥ ಓದುವುದರ ಮೂಲಕ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನಡೆಯಲಿ ಎಂದು ಆಶಿಸುತ್ತೇವೆ . ( ಸಂಪಾದಕ )

ಇಂದಿನ ನಾಮಾವಳಿಗಳು :

408 . ಓಂ ಊಹಾಪೋಹ ದುರಾಸದಾಯ ನಮಃ
409 . ಓಂ ಋಗ್ಯಜುಸ್ಸಾಮಸಂಭೂತಯೇ ನಮಃ
410 . ಓಂ ಋದ್ಧಿಸಿದ್ಧಿಪ್ರವರ್ತಕಾಯ ನಮಃ
411 . ಓಂ ಋಜುಚಿತ್ತೈಕಸುಲಭಾಯ ನಮಃ
412 . ಓಂ ಋಣತ್ರಯ ವಿಮೋಚಕಾಯ ನಮಃ

408. ಓಂ ಊಹಾಪೋಹ ದುರಾಸದಃ-
ಭಾ: ಊಹೋ ವಿತರ್ಕ ಸ್ತತ್ತ್ವಸ್ಯಾಪೋಹ ಸ್ತಾತ್ವಿಕಬಾಧನಂ ।
ತಾಭ್ಯಾಂ ದುರಾಸದೋ7ಪ್ರಾಪ್ಯ ಊಹಾಪೋಹದುರಾಸದಃ॥
ತತ್ತ್ವವನ್ನು ತಾರ್ಕಿಕವಾಗಿ ಯೋಚಿಸುವುದನ್ನು ಊಹ ಎನ್ನುತ್ತಾರೆ. ತತ್ತ್ವಚಿಂತನೆಗೆ ಅಡಚಣೆಯನ್ನುಂಟು ಮಾಡುವುದನ್ನು ಅಪೋಹ ಎನ್ನುತ್ತಾರೆ. ಊಹಾಪೋಹಗಳಿಗೆ ಸಿಲುಕದವನಾದ್ದರಿಂದ ಅವನು ಊಹಾಪೋಹದುರಾಸದನು.
ಓಂ ಊಹಾಪೋಹದುರಾಸದಾಯ ನಮಃ
ಋಗ್ಯಜುಸ್ಸಾಮಸಂಭೂತಿಃ ಋದ್ಧಿಸಿದ್ಧಿ ಪ್ರವರ್ತಕಃ ।
ಋಜುಚಿತ್ತೈಕಸುಲಭ ಋಣತ್ರಯವಿಮೋಚಕಃ॥

409. ಓಂ ಋಗ್ಯಜುಸ್ಸಾಮಸಂಭೂತಿಃ-
ಭಾ: ಋಗ್ಯಜುಸ್ಸಾಮಸಂಭೂತಿರ್ಯಸ್ಯ ನಿಶ್ಶ್ವಸಿತಂ ತ್ರಯೀ।
ಯಾರ ನಿಶ್ಶ್ವಾಸದಿಂದ ಋಗ್ವೇದ, ಯಜುರ್ವೇದ, ಸಾಮವೇದಗಳು ಹೊರ ಬಂದವೋ ಆ ಗಣೇಶನನ್ನು ಋಗ್ಯಜುಸ್ಸಾಮಸಂಭೂತಿ ಎಂದು ಕರೆಯುತ್ತಾರೆ.
ಓಂ ಋಗ್ಯಜುಸ್ಸಾಮಸಂಭೂತಯೇ ನಮಃ

410. ಓಂ ಋದ್ಧಿಸಿದ್ಧಿಪ್ರವರ್ತಕಃ-
ಭಾ: ರಾಜ್ಯಾಣಿಮಾದಿದಾತೃತ್ವಾ ದೃದ್ಧಿಸಿದ್ಧಿ ಪ್ರವರ್ತಕಃ।
ರಾಜ್ಯವನ್ನೂ, ಅಷ್ಟಸಿದ್ಧಿಗಳನ್ನೂ ಕೊಡುವವನಾದ್ದರಿಂದ ಅವನು ಋದ್ಧಿಸಿದ್ಧಿಪ್ರವರ್ತಕನು.
ಓಂ ಋದ್ಧಿಸಿದ್ಧಿಪ್ರವರ್ತಕಾಯ ನಮಃ

411. ಓಂ ಋಜುಚಿತ್ತೈಕಸುಲಭಃ-
ಭಾ: ದೃಶ್ಯತೇ ತ್ವಗ್ರ್ಯಯಾ ಬುದ್ಧ್ಯೇತ್ಯುಕ್ತೇರ್ಯದ್ವಿಮಲಂ ಮನಃ ।
ತದ್ಗ್ರಾಹ್ಯ ಋಜುಚಿತ್ತೈಕಸುಲಭಸ್ತೇನ ಗೀಯಸೇ ॥
ಹೇ ಗಣೇಶಾ! ‘ದೃಶ್ಯತೇ ತ್ವಗ್ರ್ಯಯಾ ಬುದ್ಧ್ಯಾ’ ಎಂಬ ಉಪನಿಷದ್ವಾಕ್ಯವನ್ನು ಅನುಸರಿಸಿ ವಿಮಲವಾದ (ಕಲ್ಮಷರಹಿತವಾದ) ಮನಸ್ಸಿನಿಂದ ನೀನು ಗ್ರಾಹ್ಯನಾಗಿದ್ದೀಯೆ. ಆದ್ದರಿಂದ ನೀನು ಋಜುಚಿತ್ತೈಕಸುಲಭನು.
ಓಂ ಋಜುಚಿತ್ತೈಕಸುಲಭಾಯ ನಮಃ

412. ಓಂ ಋಣತ್ರಯ ವಿಮೋಚಕಃ-
ಭಾ: ಪುತ್ರೀಯಂತಿ ಯಿಯಕ್ಷಂತಿ ವೇದಾನಿಚ್ಛಂತಿ ಯೇ ದ್ವಿಜಾಃ ।
ತತ್ಕಾಮನಾಪೂರಕತ್ವಾ ದೃಣತ್ರಯವಿಮೋಚಕಃ ॥
ದ್ವಿಜರು ದೇವಋಣ, ಋಷಿಋಣ, ಪಿತೃಋಣ ಎಂಬ ಮೂರು ಋಣಗಳಿಂದ ಕೂಡಿದವರಾಗಿ ಹುಟ್ಟುತ್ತಾರೆ. ಬ್ರಹ್ಮಚರ್ಯದಿಂದ ಋಷಿಋಣವೂ, ಯಜ್ಞಗಳಿಂದ ದೇವಋಣವೂ, ಸಂತಾನೋತ್ಪತ್ತಿಯಿಂದ ಪಿತೃಋಣವೂ ತೀರುತ್ತದೆ. ಈ ಮೂರು ಋಣಗಳಿಂದ ಮುಕ್ತಿಯನ್ನು ಕೋರುತ್ತಾ ಯಾರು ಬ್ರಹ್ಮಚರ್ಯಾದಿಗಳನ್ನು ಪಾಲಿಸುತ್ತಾರೆಯೋ ಅಂತಹವರ ಕೋರಿಕೆಗಳನ್ನು ಗಣೇಶನು ಈಡೇರಿಸುತ್ತಾನೆ. ಆದ್ದರಿಂದ ಅವನು ಋಣತ್ರಯ ವಿಮೋಚಕನು.
ಓಂ ಋಣತ್ರಯ ವಿಮೋಚಕಾಯ ನಮಃ
ಲುಪ್ತವಿಘ್ನಸ್ಸ್ವಭಕ್ತಾನಾಂ ಲುಪ್ತಶಕ್ತಿಸ್ಸುರದ್ವಿಷಾಮ್‌ ।
ಲುಪ್ತಶ್ರೀರ್ವಿಮುಖಾರ್ಚಾನಾಂ ಲೂತಾವಿಸ್ಫೋಟನಾಶನಃ ॥

( ಮುಂದುವರೆಯುವುದು )

( ಸಂಗ್ರಹ )

* ಭಾಲರಾ
ಬೆಂಗಳೂರು


Share