MP : ಆಧ್ಯಾತ್ಮಿಕ ಅಂಗಳ : ಶ್ರೀ ಗಣೇಶ ಸಹಸ್ರನಾಮಾವಳಿಯ ಅರ್ಥ( ಭಾಷ್ಯ ) : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ – ಪುಟ – 86

374
Share

ಶ್ರೀ ಗಣೇಶ ಸಹಸ್ರನಾಮ ಭಾಷ್ಯ : ಪುಟ – 86

ಸಂಸ್ಕೃತದಿಂದ ಕನ್ನಡಾನುವಾದ :
ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ ,
ಅವಧೂತ ದತ್ತ ಪೀಠಂ,
ಮೈಸೂರು .

ಶ್ರೀ ಗಣೇಶ ಸಹಸ್ರ ನಾಮಾವಳಿಯ ಅರ್ಥವನ್ನು MP ( ಮೈಸೂರು ಪತ್ರಿಕೆ ) -ಆಧ್ಯಾತ್ಮಿಕ ಅಂಗಳದ ಅಂಕಣದಲ್ಲಿ ಪ್ರಕಟಿಸುವ ಪ್ರಯತ್ನವನ್ನು ಮಾಡಲು ಮುಂದಾಗಿದೆ ಎಂದು ತಿಳಿಸಲು ಹರ್ಷಿಸುತ್ತದೆ . ಗಣೇಶನ ಸಹಸ್ರನಾಮಾದ ಅರ್ಥ ಓದುವುದರ ಮೂಲಕ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನಡೆಯಲಿ ಎಂದು ಆಶಿಸುತ್ತೇವೆ . ( ಸಂಪಾದಕ )

ಇಂದಿನ ನಾಮಾವಳಿಗಳು :

439 . ಓಂ ಕಲಭಾನನಾಯ ನಮಃ
440 . ಓಂ ಕರ್ಮಸಾಕ್ಷಿಣೇ ನಮಃ
441 . ಓಂ ಕರ್ಮಕರ್ತಾಯ ನಮಃ
442 . ಓಂ ಕರ್ಮಾಕರ್ಮಫಲಪ್ರದಾಯ ನಮಃ
443 . ಓಂ ಕದಂಬ ಗೋಲಕಾಕಾರಾಯ ನಮಃ

439. ಓಂ ಕಲಭಾನನಃ-
ಭಾ: ಕಲೋ ನಾದೋ ಭಾ ತು ದೀಪ್ತಿರನನಂ ಪ್ರಾಣನಂ ಮತಂ। ನಾದಕಾಂತ್ಯುಜ್ಜೀವಕತ್ವಾತ್ ಕಥ್ಯತೇ ಕಲಭಾನನಃ॥
‘ಕಲ – ಭಾ- ಅನನ’ ಎಂದು ಪದಚ್ಛೇದ. ಕಲ ಎಂದರೆ ನಾದವೆಂದರ್ಥ. ಭಾ ಎಂಬ ಪದವು ಕಾಂತಿಯನ್ನು ಹೇಳುತ್ತದೆ. ಅನನ ಎಂದರೆ ಜೀವಂತರನ್ನಾಗಿ ಮಾಡುವುದು ಎಂದರ್ಥ. ನಾದಕಾಂತಿಗಳನ್ನು ಉದ್ದೀಪನಗೊಳಿಸುವುದರಿಂದ ಅವನು ಕಲಭಾನನನಾಗಿದ್ದಾನೆ.
ಓಂ ಕಲಭಾನನಾಯ ನಮಃ

440. ಓಂ ಕರ್ಮಸಾಕ್ಷೀ-
ಭಾ: ಕರ್ಮಸಾಕ್ಷೀ ತ್ವದೃಷ್ಟಾನಾಮಪಿ ದ್ರಷ್ಟಾಸಿ ಕರ್ಮಣಾಮ್‌।
ಹೇ ಗಣೇಶ! ನೀನು ಕಣ್ಣಿಗೆ ಕಾಣಿಸದ ಮನಸ್ಸಿನ ಹಾಗೂ ಬುದ್ಧಿಯ ಕರ್ಮಗಳನ್ನು ಕೂಡಾ ಸಾಕ್ಷಿಯಾಗಿ ನೋಡುತ್ತಿದ್ದೀಯೆ. ಆದ್ದರಿಂದ ನೀನು ಕರ್ಮಸಾಕ್ಷಿಯು.
ಓಂ ಕರ್ಮಸಾಕ್ಷಿಣೇ ನಮಃ

441. ಓಂ ಕರ್ಮಕರ್ತಾ-
ಭಾ: ಕರ್ಮಠಪ್ರೇರಣಾದಂತಃ ಕರ್ಮಕರ್ತಾ ಭವಾನಪಿ।
ಹೇ ಗಣೇಶಾ! ನೀನು ಕರ್ಮಗಳನ್ನು ಶ್ರದ್ಧೆಯಿಂದ ಆಚರಣೆ ಮಾಡುವವರ ಅಂತಃಕರಣದಲ್ಲಿದ್ದು ಅವರಿಗೆ ಪ್ರೇರಣೆಯನ್ನು ಕೊಡುತ್ತೀಯೆ. ಆದ್ದರಿಂದ ನೀನು ಕೂಡಾ ಕರ್ಮಕರ್ತನಾಗಿದ್ದೀಯೆ.
ಓಂ ಕರ್ಮಕರ್ತ್ರೇ ನಮಃ

442. ಓಂ ಕರ್ಮಾಕರ್ಮಫಲಪ್ರದಃ-
ಭಾ: ಸ್ವರ್ಗಾಪವರ್ಗದಾತೃತ್ವಾತ್ ಕರ್ಮಾಕರ್ಮಫಲಪ್ರದಃ।
ಸ್ವರ್ಗ ಮೋಕ್ಷಗಳನ್ನು ಕೊಡುವವನಾದ್ದರಿಂದ ಅವನು ಕರ್ಮಾಕರ್ಮಫಲಪ್ರದನು.
ಓಂ ಕರ್ಮಾಕರ್ಮಫಲಪ್ರದಾಯ ನಮಃ
ಕದಂಬಗೋಲಕಾಕಾರಃ ಕೂಷ್ಮಾಂಡಗಣನಾಯಕಃ।
ಕಾರುಣ್ಯದೇಹಃ ಕಪಿಲಃ ಕಥಕಃ ಕಟಿಸೂತ್ರಭೃತ್‌॥

443. ಓಂ ಕದಂಬ ಗೋಲಕಾಕಾರಃ-
ಭಾ: ಸರ್ವನಾಡ್ಯುದ್ಗಮಸ್ಥಾನಂ ಕದಂಬಕುಸುಮಾಕೃತಿ।
ಪರಿತಃ ಸಂವೃತಾ ತಾಭಿಃ ಹೃದಿಕಾಪ್ಯಸ್ತಿ ದೇವತಾ॥
ಕದಂಬಗೋಲಕಾಕಾರ ಇತಿ ತದ್ರೂಪ ಉಚ್ಯಸೇ ॥
ಸಮಸ್ತ ನಾಡಿಗಳ ಉಗಮ ಸ್ಥಾನವು ಕದಂಬ ಪುಷ್ಪದಂತೆ ಗುಂಡಾಗಿರುತ್ತದೆ. ಅದರ ಅಧಿಷ್ಠಾನ ದೇವತೆಯು ಹೃದಯದಲ್ಲಿ ಇರುತ್ತಾಳೆ. ಗಣೇಶನೇ ಆ ದೇವತಾರೂಪಿಯಾದ್ದರಿಂದ ಕದಂಬಗೋಲಕಾಕಾರ ಎಂಬುದು ಅವನ ನಾಮಧೇಯ.
ಓಂ ಕದಂಬಗೋಲಕಾಕಾರಾಯ ನಮಃ

( ಮುಂದುವರೆಯುವುದು )

( ಸಂಗ್ರಹ )

* ಭಾಲರಾ
ಬೆಂಗಳೂರು

Share