MP : ಆಧ್ಯಾತ್ಮಿಕ ಅಂಗಳ : ಶ್ರೀ ಪಾದ ವಲ್ಲಭರ ಚರಿತ್ರೆ ಪುಟ : 278

500
Share

ಶ್ರೀಪಾದ ಶ್ರೀವಲ್ಲಭರ ದಿವ್ಯ ಚರಿತಾಮೃತ ಪಾರಾಯಣ ವಿಧಾನ ಮತ್ತು ಫಲಶ್ರುತಿ

ಪುಟ : 277

1.ಒಂದನೇ ಅಧ್ಯಾಯ : ವ್ಯಾಘ್ರೇಶ್ವರ ಶರ್ಮಾ ವೃತ್ತಾಂತ : ಗೃಹದಲ್ಲಿ ಶಾಂತಿ ಸೌಲಭ್ಯಗಳು ಲಭಿಸುತ್ತವೆ
2. ಎರಡನೇ ಅಧ್ಯಾಯ : ಶಂಕರ ಭಟ್ಟರಿಗೆ ಶ್ರೀಸಿದ್ಧ ಯೋಗೀಂದ್ರ ದರ್ಶನ : ಬೇರೆಯವರಿಗೆ ಹೇಳಿಕೊಳ್ಳಲಾರದಂತಹ ಮನೋ ವ್ಯಾಧಿಗಳು ಮತ್ತು ಮನೋ ಕ್ಲೇಶಗಳು ಪರಿಹಾರವಾಗುತ್ತವೆ .
3. ಮೂರನೇ ಅಧ್ಯಾಯ : ಶಂಕರ ಭಟ್ಟನಿಗೆ ಪಳನಿ ಸ್ವಾಮಿ ದರ್ಶನ ಕುರುವಪುರ ಸಂದರ್ಶನ : ನಾಗ ದೋಷ ನಿವಾರಣೆ ಸಂತಾನ ಪ್ರಾಪ್ತಿಗಾಗಿ ಈ ಅಧ್ಯಾಯವನ್ನು ತಪ್ಪದೇ ಓದಬೇಕು .
4. ನಾಲ್ಕನೇ ಅಧ್ಯಾಯ : ಶಂಕರ ಭಕ್ತನಿಗೆ ಕುರುವಪುರದಲ್ಲಿ ವಾಸವಾಂಬಿಕಾ ಸಂದರ್ಶನ : ಕನ್ಯೆಯರಿಗೆ ಯೋಗ್ಯವಾದ ವರನ ಜತೆ ವಿವಾಹ, ಗುರು ನಿಂದೆಯ ಪಾಪ ವಿಮೋಚನೆ .
5. ಐದನೇ ಅಧ್ಯಾಯ : ಶಂಕರಭಟ್ಟ ತಿರುಪತಿ ಸೇರುವುದು, ಕಾಣಿ ಪಾಕದಲ್ಲಿ ತಿರುಮಲ ದಾಸನನ್ನು ಸಂದರ್ಶಿಸುವುದು : ದೇವರ ಹರಕೆಗಳನ್ನು ತೀರಿಸದ ಪ್ರಯುಕ್ತ ಒದಗುವ ದೋಷಗಳಿಂದ ವಿಮುಕ್ತಿಗಾಗಿ ಮತ್ತು ವಿಘ್ನ ನಿವಾರಣೆಗಾಗಿ .
6. ಆರನೆ ಅಧ್ಯಾಯ : ನರಸಾವಧಾನಿಗಳ ವೃತ್ತಾಂತ : ಪಿತೃದೇವತೆಗಳ ಶಾಪದಿಂದ ಬಿಡುಗಡೆ
7. ಏಳನೇ ಅಧ್ಯಾಯ : ಖಗೋಳಗಳ ವರ್ಣನೆ : ವಿದ್ಯಾಪ್ರಾಪ್ತಿ
8. ಎಂಟನೇ ಅಧ್ಯಾಯ : ದತ್ತಾವತಾರಗಳ ವರ್ಣನೆ : ಸಂತಾನ ಪ್ರಾಪ್ತಿ ಹಾಗೂ ಧನ ಪ್ರಾಪ್ತಿ .
9. ಒಂಭತ್ತನೆಯ ಅಧ್ಯಾಯ : ಕರ್ಮಫಲ ಮೀಮಾಂಸೆ : ಪ್ರಾರಬ್ಧ ಕರ್ಮದಿಂದ ಬಿಡುಗಡೆ
10. ಹತ್ತನೇ ಅಧ್ಯಾಯ : ನರಸಿಂಹ ಮೂರ್ತಿಗಳ ವರ್ಣನೆ : ದೌರ್ಭಾಗ್ಯ ನಿವಾರಣೆ
11. ಹನ್ನೊಂದನೆಯ ಅಧ್ಯಾಯ : ಸುಬ್ಬಯ್ಯ ಶ್ರೇಷ್ಠಿ, ಚಿಂತಾಮಣಿ, ಬಿಲ್ವಮಂಗಳರ ವೃತ್ತಾಂತ : ದುರಭ್ಯಾಸಗಳಿಂದ ಬಿಡುಗಡೆ.
12. ಹನ್ನೆರಡನೆಯ ಅಧ್ಯಾಯ : ಕುಲಶೇಖರ ವೃತ್ತಾಂತ : ದೇಹಾರೋಗ್ಯ .
13. ಹದಿಮೂರನೇ ಅಧ್ಯಾಯ : ಆನಂದ ಶರ್ಮರ ವೃತ್ತಾಂತ : ಪಶು ಸಂಪತ್ತು ಹಾಗೂ ವ್ಯವಸಾಯ ವೃದ್ಧಿ .
14. ಹದಿನಾಲ್ಕನೇ ಅಧ್ಯಾಯ : ದತ್ತ ದಾಸನಿಗೆ ಅಭಯ ಪ್ರಧಾನ : ಆಪತ್ತಿನಿಂದ ಹೊರಬರಲು ಧೈರ್ಯೋತ್ಸಾಹಗಳ ಪ್ರಾಪ್ತಿಗಾಗಿ
15. ಹದಿನೈದನೇ ಅಧ್ಯಾಯ : ಬಂಗಾರಪ್ಪ, ಸುಂದರರಾಜ ಶರ್ಮರ ವೃತ್ತಾಂತ : ಅಕಾರಣ ಕಲಹಗಳ, ಪೂರ್ವಜನ್ಮಕೃತ ದೋಷ ನಿವಾರಣೆ .
16. ಹದಿನಾರನೇ ಅಧ್ಯಾಯ : ಶ್ರೀಮನ್ನಾರಾಯಣ ವೃತ್ತಾಂತ : ಧನ ಆಕರ್ಷಣ ಶಕ್ತಿಯ ವೃದ್ಧಿ .
17. ಹದಿನೇಳನೇ ಅಧ್ಯಾಯ : ಶ್ರೀನಾಥ ರಾಮಾನಂದರ ದರ್ಶನ : ಸಿದ್ಧಪುರುಷರ ಆಶೀರ್ವಾದ ಪ್ರಾಪ್ತಿ
18. ಹದಿನೆಂಟನೇ ಅಧ್ಯಾಯ : ರವಿದಾಸನ ಕುರಿತ ವರ್ಣನೆ : ಪಾಪ ಕರ್ಮಗಳ ನಾಶ ಹಾಗೂ ಭಾಗ್ಯವಂತ ಜೀವನ ಪ್ರಾಪ್ತಿ .
19. ಹತ್ತೊಂಬತ್ತನೇ ಅಧ್ಯಾಯ : ಲಿಂಗಣ್ಣ ಶಾಸ್ತ್ರಿ ಗಣಪತಿ ಶಾಸ್ತ್ರಿಯವರ ವೃತ್ತಾಂತ : ಮಾನಸಿಕ ಕ್ಲೇಶಗಳ ಅಂತ್ಯ
20. ಇಪ್ಪತ್ತ ನೇ ಅಧ್ಯಾಯ : ಗುರುಚರಣ ವಿಸ್ಸಾವಧಾನಿಗಳ ವೃತ್ತಾಂತ : ಜೀವನದಲ್ಲಿ ಒದಗುವ ಮಹತ್ತರ ಕಷ್ಟನಷ್ಟಗಳ ನಿವಾರಣೆ
21. ಇಪ್ಪತ್ತೊಂದನೇ ಅಧ್ಯಾಯ : ಆಧ್ಯಾತ್ಮಿಕ ಲಾಭವುಂಟಾಗಿ ಪುಣ್ಯಫಲವು ವೃದ್ಧಿಯಾಗುವುದು .
22. ಇಪ್ಪತ್ತೆರಡನೇ ಅಧ್ಯಾಯ : ಗುರುದತ್ತ ಭಟ್ಟನ ವೃತ್ತಾಂತ : ಕರ್ಮದೋಷಗಳ ಹಾಗೂ ಮಾನವನಿಗೆ ಒದಗುವ ಅಡ್ಡಿ ಅಡಚಣೆಗಳು ನಿವಾರಣೆ
( ಮುಂದುವರೆಯುವುದು )
ಕೃಪೆ : ಶ್ರೀ ಕನ್ನೇಶ್ವರ ಪ್ರಕಾಶನ

( ಸಂಗ್ರಹ )
* ಭಾಲರಾ
ಬೆಂಗಳೂರು

ಜೈಗುರುದತ್ತ


Share