MP : ಆಧ್ಯಾತ್ಮಿಕ ಅಂಗಳ : ಶ್ರೀ ಪಾದ ವಲ್ಲಭರ ಚರಿತ್ರೆ ಸಂಪೂರ್ಣ

509
Share

 

 

 

ಶ್ರೀಪಾದ ಶ್ರೀವಲ್ಲಭರ ದಿವ್ಯ ಚರಿತಾಮೃತ ಪಾರಾಯಣ ವಿಧಾನ ಮತ್ತು ಫಲಶ್ರುತಿ
ಪುಟ : 279

37. ಅಧ್ಯಾಯ 37 : ಭಿನ್ನ ಮಸ್ತಾ ದೇವಿ ವರ್ಣನೆ : ಜೀವಿತವು ಸುಗಮವಾಗಿ ನಡೆಯುವುದು .
38. ಅಧ್ಯಾಯ 38 : ಬಗಳಾಮುಖಿ ಆರಾಧನೆ ವಿವರಣೆ : ಆತ್ಮಸ್ಥೈರ್ಯ ಪ್ರಾಪ್ತಿ.
39. ಅಧ್ಯಾಯ 39 : ನಾಗೇಂದ್ರ ಶಾಸ್ತ್ರಿಗಳೊಡನೆ ಸಮಾಗಮ : ಸರ್ವದೋಷ ನಿವಾರಣೆ .
40. ಅಧ್ಯಯ 40 : ಭಾಸ್ಕರ ಶಾಸ್ತ್ರಿಗಳೊಡನೆ ಸಮಾಗಮ : ಅಸಾಧ್ಯ ವಿಷಯಗಳು ಸಾಧ್ಯವಾಗುವುದು.
41. ಅಧ್ಯಯ 41 : ಕುಹಾನಾ ಪರಿವ್ರಾಜಕ ವೃತ್ತಾಂತ : ಇತರರು ಮಾಡುವ ಮೋಸ ಮತ್ತು ಒಳಸಂಚುಗಳಿಂದ ಬಿಡುಗಡೆ.
42. ಅಧ್ಯಾಯ 42 : ಮೊತ್ತಮೊದಲಿಗೆ ಪೀಠಿಕಾಪುರದವರಿಂದ….. : ತಪ್ಪಿಸಿಕೊಂಡಿರುವ ಮಕ್ಕಳು ಸಿಕ್ಕುವುದು .
43. ಅಧ್ಯಾಯ 43 : ಶ್ರೀ ಅನಘಾ ಲಕ್ಷ್ಮಿ ವರ್ಣನೆ : ಅಷ್ಟವಿಧ ಐಶ್ವರ್ಯ ಪ್ರಾಪ್ತಿ .
44. ಅಧ್ಯಾಯ 44 : ಸ್ವರ್ಣ ಪೀಠಿಕಾ ಪುರ ವರ್ಣನೆ : ಉಜ್ವಲವಾದ ಭವಿಷ್ಯತ್ತು .
45. ಅಧ್ಯಾಯ 45 : ಶ್ರೀ ಹನುಮಂತ ದೇವರಿಗೆ ಭೂಮಿಯ ಮೇಲೆ …… : ಎಲ್ಲ ಕ್ಷೇತ್ರಗಳಲ್ಲಿಯೂ ಶ್ರೇಯೋಭಿವೃದ್ಧಿ ಉಂಟಾಗುವುದು .
46. ಅಧ್ಯಾಯ 46 : ಧನ ಗುಪ್ತರ ಮನೆಗೆ ಹೋಗುವುದು : ತಕ್ಷಣವೇ ವಿವಾಹ ಸಂಬಂಧವು ಕುದುರುವುದು .
47. ಅಧ್ಯಾಯ 47 : ಶ್ರೀ ಪೀಠಿಕಾ ಪುರದಿಂದ ಪಂಚದೇವ ಪಹಾಡ್ ಗೆ….. : ಸರ್ವವಿಧ ಶುಭ ಫಲ ಪ್ರಾಪ್ತಿ .
48. ಅಧ್ಯಾಯ 48 : ಪಂಚ ದೇವ ಪಹಾಡ್ ನಲ್ಲಿ ದರ್ಬಾರು ವಿವರಣೆ : ಆರ್ತರಿಗೆ, ಅರ್ಥಾರ್ಥಿಗಳಿಗೆ, ಜಿಜ್ಞಾಸುಗಳಿಗೆ ಮೋಕ್ಷಾಕಾಂಕ್ಷಿಗಳಿಗೆ ಚತುರ್ವಿಧ ಪುರುಷಾರ್ಥ ಪ್ರಾಪ್ತಿ .
49. ಅಧ್ಯಾಯ 49 : ಶ್ರೀಪಾದರು ಕರ್ಮ ವಿದ್ವಾಂಸ : ಸಮಸ್ತ ಕರ್ಮದೋಷಗಳ ಪರಿಹಾರ .
50. ಅಧ್ಯಾಯ 50 : ಗುರುನಿಂದೆ ಮಾಡುವುದರಿಂದ ಉಂಟಾಗುವ …… : ಗುರು ನಿಂದೆಯಿಂದ ಪ್ರಾಪ್ತವಾದ ದಾರಿದ್ಯ್ರವೇ ಮೊದಲಾದ ಶಾಪಗಳ ನಿವಾರಣೆ.
51. ಅಧ್ಯಾಯ 51 : ಜಲಗಂಡವೇ ಮೊದಲಾದ ಗಂಡಾಂತರಗಳಿಂದ …… : ಜಲಗಂಡ ಮತ್ತು ಇತರ ಎಲ್ಲ ಗಂಡಾಂತರಗಳಿಂದ ಪಾರಾಗಿ ದೀರ್ಘಾಯುಷ್ಯ ಪ್ರಾಪ್ತಿ .
52. ಅಧ್ಯಾಯ 52 : ಶಂಕರಭಟ್ಟರ ಯೋಗಾನುಭವ ನಿರೂಪಣೆ : ಎಲ್ಲ ಸಮಸ್ಯೆಗಳು ಅಪ್ರಯತ್ನವಾಗಿ ಪರಿಹಾರವಾಗುವುದು .
53. ಅಧ್ಯಾಯ 53 : ಶ್ರೀಪಾದ ಶ್ರೀವಲ್ಲಭರ ಚರಿತಾಮೃತ ಪೇಟಿಕಾಶಿರವನ್ನು ಸೇರುವ ವಿಧಾನ : ಮಹಾಪಾಪಗಳು ಧ್ವಂಸವಾಗಿ ಕೈತಪ್ಪಿದ ಅದೃಷ್ಟಗಳು ಪ್ರಾಪ್ತವಾಗುವವು.

( ಮೇಲೆ ಹೇಳಿರುವ ಅಧ್ಯಾಯ ಪಠಣ ಫಲಗಳನ್ನು ಬಯಸುವ ಭಕ್ತರು ಸಂಕಲ್ಪಪೂರ್ವಕವಾಗಿ ಶ್ರೀಪಾದಶ್ರೀವಲ್ಲಭರ ದಿವ್ಯ ಚರಿತಾಮೃತವನ್ನು ಸಪ್ತಾಹ ದೀಕ್ಷೆಯಿಂದ ಭಕ್ತಿಶ್ರದ್ಧೆಗಳಿಂದ ಪಾರಾಯಣ ಮಾಡಿದರೆ
ಅಥವಾ ಕನಿಷ್ಠ ಪಕ್ಷ
ಸಂಬಂಧಪಟ್ಟ ಅಧ್ಯಾಯಗಳನ್ನು ನಲ್ವತ್ತು ದಿನಗಳು ಸ್ತ್ರೀಯರು ನಲವತ್ತ್ 8ದಿನಗಳು ಪ್ರತಿದಿನ ಸ್ನಾನಾನಂತರ ಭಕ್ತಿಶ್ರದ್ಧೆಗಳಿಂದ ಪಠಿಸಿ ಶಕ್ತ್ಯಾನುಸಾರವಾಗಿ ಶ್ರೀಪಾದಶ್ರೀವಲ್ಲಭರ ಸ್ತೋತ್ರವನ್ನು ಮಾಡಿದರೆ ಅವರ ಬಯಕೆಗಳು ಸಿದ್ಧಿಸುವವು )
॥ ಶ್ರೀಪಾದರು ರಾಜಂ ಶರಣಂ ಪ್ರಪದ್ಯೆ ॥
॥ ಜಯವಾಗಲಿ ಜಯವಾಗಲಿ ಶ್ರೀಪಾದಶ್ರೀವಲ್ಲಭರಿಗೆ ಜಯವಾಗಲಿ ॥
ಶ್ರೀಪಾದ ಶ್ರೀವಲ್ಲಭರ ಚರಿತ್ರೆ ಸಂಪೂರ್ಣವಾಯಿತು
ಕೃಪೆ : ಶ್ರೀ ಕನ್ನೇಶ್ವರ ಪ್ರಕಾಶನ .

ಶ್ರೀ ಪಾದವಲ್ಲಭರ ದಿವ್ಯ ಚರಿತಾಮೃತದ ಪಾನವನ್ನು ಮಾಡಿ ಪುನೀತರಾಗಿರುವ ಮೈಸೂರು ಪತ್ರಿಕೆ ಓದುಗರಿಗೆ ಧನ್ಯವಾದಗಳು.
ಆಧ್ಯಾತ್ಮಿಕ ಅರಿವಿಗೆ ಆದಿ ಅಂತ್ಯವಿಲ್ಲ. ಸತತವಾಗಿ ನಡೆಯುತ್ತಿರ ಬೇಕಾಗಿರುವ ಒಂದು ಪ್ರಕ್ರಿಯೆ.
ನಾವು ದಿನಪೂರ್ತಿ ಸಂತಸವಾಗಿರಬೇಕಾದರೆ ಬೆಳಗಿನ ಆರಂಭ ಚೆನ್ನಾಗಿರಬೇಕು.
ಈ ನಿಟ್ಟಿನಿಂದ ಮೈಸೂರು ಪತ್ರಿಕೆಯು ಪ್ರತಿನಿತ್ಯ ಮುಂಜಾನೆ ಭಗವಂತನ ನಾಮಸ್ಮರಣೆ ಹಾಗೂ, ಮಹಾತ್ಮರ, ದೈವಪುರುಷರ ಚರಿತ್ರೆಯಿಂದ ಆರಂಭಿಸುತ್ತದೆ.
ಇದೆಲ್ಲ ಮಾಡುವುದರಿಂದ ನಮಗೆ ಯಾವ ಕಷ್ಟಗಳೂ ಬರುವುದೇ ಇಲ್ಲ ಎನ್ನುವ ಅರ್ಥವಲ್ಲ. ಕಷ್ಟ ಸುಖ ಎನ್ನುವ ಚಕ್ರದಲ್ಲೇ ಮನುಷ್ಯನ ಜೀವನ ಅಡಗಿದೆ.
ಮುಂಜಾನೆ ಸ್ವಲ್ಪ ಸಮಯ ಸತ್ಕಾಲಕ್ಷೇಪ ಮಾಡುವುದರಿಂದ ಮನಸ್ಸು ಚೈತನ್ಯದ ಚಿಲುಮೆಯಂತಿರುತ್ತದೆ. ನಮ್ಮ ಕರ್ಮಾನುಸಾರ ಕೆಲವೊಂದು ನಮ್ಮ ಕಷ್ಟಗಳು ಬಗೆಹರಿಯಬಹುದು ಇಲ್ಲದಿದ್ದರೆ ಬಗೆಹರಿಯದ ಸಂಕಷ್ಟಗಳನ್ನು ಎದುರಿಸುವ ಮಾನಸಿಕ ಸ್ಥೈರ್ಯವಂತು ಖಚಿತವಾಗಿ ಸಿಗುತ್ತದೆ. ನಮ್ಮ ಎಷ್ಟೋ ಗೊಂದಲಗಳಿಗೆ ಪರಿಹಾರಗಳು ಸಿಗುತ್ತವೆ.
ಈ ರೀತಿಯ ಮನೋಧೈರ್ಯ , ಸಮಚಿತ್ತ ನೀಡುತ್ತಿದ್ದ ಶ್ರೀ ಪಾದ ವಲ್ಲಭರ ದಿವ್ಯ ಚರಿತಾಮೃತವು ಸಂಪೂರ್ಣಗೊಂಡಿದೆ. ಇದನ್ನು ಓದಿ ಪುನೀತರಾದ ಎಲ್ಲಾ ಮೈಸೂರು ಪತ್ರಿಕೆ ಓದುಗರಿಗೆ ಮೈಸೂರು ಪತ್ರಿಕೆ ತಂಡವು ಅಭಿನಂದನೆ ಸಲ್ಲಿಸುತ್ತದೆ ಹಾಗೂ ಇನ್ನು ಮುಂದೆಯೂ ವಾಚಕರು ಇನ್ನು ಹೆಚ್ಚಿನ ಸಹಕಾರ ನೀಡಬೇಕೆಂದು ಮೈಸೂರು ಪತ್ರಿಕೆ ತಂಡವು ಅಪೇಕ್ಷಿಸುತ್ತದೆ.
ಭಾಲರಾ
ಬೆಂಗಳೂರು

ಜೈಗುರುದತ್ತ


Share