MP ಒನ್ ಲೈನ್ ಸುದ್ದಿ

140
Share

* ಖಾಸಗಿಯಾಗಿ ಅಭಿವೃದ್ಧಿಪಡಿಸಿದ ದೇಶದ ಮೊದಲ ರಾಕೆಟ್ ವಿಕ್ರಮ್-ಎಸ್ ಅನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ), ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಶುಕ್ರವಾರ ಉಡಾವಣೆ  ಮಾಡಲಾಯಿತು.
* ಸೌದಿ ಅರೇಬಿಯಾದಲ್ಲಿ ಜೋರ್ಡಾನ್ ಪ್ರಜೆಯೊಬ್ಬ ಔಷಧಿ ಕಳ್ಳ ಮಾರಾಟ ಮಾಡಿದ್ದರಿಂದ ಗಲ್ಲಿಗೇರಿಸಲಾಗಿದೆ ಕಳೆದ ವರ್ಷ ವಿವಿಧ ಪ್ರಕರಣಗಳಲ್ಲಿ 69 ಜನರನ್ನು ಮರಣದಂಡನೆಗೆ ಗುರಿಪಡಿಸಿದರೆ ಈಗ ದುಪ್ಪಟಗೊಂಡು ಇದುವರೆಗೆ 138 ಜನರನ್ನು ಸಾಯಿಸಲಾಗಿದೆ.
* ಸಿಕಂದರಾಬಾದಿನ ಕಸ್ತೂರಿಬಾ ಗಾಂಧಿ ಕಾಲೇಜಿನ ವಿದ್ಯಾರ್ಥಿಗಳು ಪ್ರಯೋಗಾಲಯದಲ್ಲಿ ನಿರತರಾಗಿದ್ದಾಗ ರಾಸಾಯನಿಕ ಸೋರಿಕೆಯಾಗಿ 25 ವಿದ್ಯಾರ್ಥಿಗಳು ಅಸ್ವಸ್ಥ.
* ಕೆಲವು ದೇಶಗಳು ಭಯೋತ್ಪಾದನೆಯನ್ನು ಪ್ರೋತ್ಸಾಹಿಸುವುದು ತಮ್ಮ ವಿದೇಶಾಂಗ ನೀತಿಯ ಒಂದು ಕಾರ್ಯಭಾಗ ಮಾಡಿಕೊಂಡಿದೆ ಆದರೆ ಇದನ್ನು ಹತ್ತಿಕ್ಕಲು ಭಾರತ ದೃಢವಾಗಿದೆ-ಪ್ರಧಾನಿ ಮೋದಿ
* ಕೇವಲ ಇನ್ನೆರಡು ದಿನಗಳಲ್ಲಿ ವಿಶ್ವ ಫುಟ್ಬಾಲ್ ಪಂದ್ಯಗಳು ಕತಾರ್ ನ 8 ಸ್ಟೇಡಿಯಂ ಗಳಲ್ಲಿ ನಡೆಯಲಿದ್ದು ಅಲ್ಲಿ ಬೀರ್ ಸಮೇತ ಮಧ್ಯ ಮಾರಾಟವನ್ನು ಫೀಫಾ ನಿಷೇಧಿಸಿದೆ.
* ವಿಶ್ವಸಂಸ್ಥೆಯ ಸೆಕ್ರೆಟರಿ ಕೌನ್ಸಿಲ್ ನಲ್ಲಿ ಭಾರತಕ್ಕೆ ಶಾಶ್ವತ ಸ್ಥಾನ ನೀಡಬೇಕೆಂದು ಬ್ರಿಟನ್ ಮತ್ತೊಮ್ಮೆ ಪ್ರತಿಪಾದಿಸಿದೆ.
* ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಅವರನ್ನು ಮತ್ತೊಮ್ಮೆ ಕೊಲ್ಲುವ ಪ್ರಯತ್ನ ತಳ್ಳಿ ಹಾಕುವಂತಿಲ್ಲ ಅಲ್ಲಿಯ ಸರ್ಕಾರ ಎಚ್ಚರಿಕೆಂದಿರಬೇಕೆಂದು ನ್ಯಾಯಾಲಯ ಸೂಚಿಸಿದೆ.
* ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಾವು ಏಕ ಮಾತ್ರ ಸ್ಥಳದಲ್ಲಿ ಸ್ಪರ್ಧಿಸುವುದಾಗಿ ಕೋಲಾರದಲ್ಲಿ ಸ್ಪರ್ಧಿಸುವ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನಲ್ಲಿ ಇಂಗಿತ ವ್ಯಕ್ತಪಡಿಸಿದ್ದಾರೆ.


Share