ಶ್ರೀ ಆಂಜನೇಯ ಚರಿತ್ರೆ ಭಾಗ 1 : ಪುಟ 102

133
Share

ಶ್ರೀ ಆಂಜನೇಯ ಚರಿತ್ರೆ ಭಾಗ ಒಂದು : ಪುಟ 102
ಓಂ ನಮೋ ಹನುಮತೆ ನಮಃ

ಇಂದ್ರಜಿತ್ತು ಸಂಹಾರ :
ಅಂದು ರಾತ್ರಿ ನಡೆದ ಯುದ್ಧದಲ್ಲಿ ಲಕ್ಷ್ಮಣನು ವಿಜೃಂಭಿಸಿ ಇಂದ್ರಾಸ್ತ್ರವನ್ನು ಸಂಧಾನ ಮಾಡಿ ಅದನ್ನು ರಾಮಮಂತ್ರದಿಂದ ಅಭಿಮಂತ್ರಿಸಿದನು. ಓ ಬಾಣವೆ ! ದಶರಥ ಪುತ್ರನಾದ ರಾಮನು ಧರ್ಮತ್ಮನಾಗಿದ್ದರೆ, ಸತ್ಯಸಂದನೆ ಆಗಿದ್ದರೆ, ಪೌರುಷದಲ್ಲಿ ಸಾಟಿ ಇಲ್ಲದವನೇ ಆಗಿದ್ದರೆ, ನೀನು ಈ ರಾವಣ ಪುತ್ರನನ್ನು ಸಂಹರಿಸು. ಆ ಬಾಣದಿಂದ ಮಹಾವೀರನಾದ ಇಂದ್ರಜಿತ್ತು ನೆಲಕಚ್ಚಿದ.
ಮಾರನೇ ದಿನ ರಾವಣಾಸುರನು ರಾಮ ಲಕ್ಷ್ಮಣರ ಮೇಲೆ ತಾನೆ ಯುದ್ಧಕ್ಕಿಳಿದ . ಆ ಯುದ್ಧದಲ್ಲಿ ರಾವಣನು ಪ್ರಯೋಗಿಸಿದ ಶಕ್ತ್ಯಾಯುಧ ಲಕ್ಷ್ಮಣನ ಎದೆಗೆ ನಾಟಿತು. ಅವನಿಗೆ ಸ್ಪೃಹೆ ತಪ್ಪಿತ್ತು.
ಅದನ್ನು ಗಮನಿಸಿ ಶ್ರೀರಾಮನು ರಾವಣನ ಮೇಲೆ ವಿಜೃಂಭಿಸಿದ. ರಾವಣಾಸುರನ ಕೈಕಾಲು ಆಡದಂತೆ ಆಯಿತು. ಆದರೆ ಅವನ ಸಾರಥಿಯೂ ಹಾಗೂ ಹೀಗೂ ರಥವನ್ನು ಯುದ್ಧ ರಂಗದಿಂದ ಬೇರೆ ಕಡೆಗೆ ಹೊಡೆದುಕೊಂಡು ಹೋಗಿ ರಾವಣನನ್ನು ಉಳಿಸಿದ. ಇತ್ತ ಶ್ರೀರಾಮುನು ಲಕ್ಷ್ಮಣನ ತಲೆಯನ್ನು ಮಡಿಲಲ್ಲಿ ಇಟ್ಟುಕೊಂಡು ಅಳಲು ಪ್ರಾರಂಭಿಸಿದ. ಅದನ್ನು ಗಮನಿಸಿದ ಹನುಮಂತನು ಪುನಃ ಅಂದರೆ 7 ನೇ ಸಾರಿ ಸಮುದ್ರವನ್ನು ದಾಟಿ ಹಿಮಾಲಯಕ್ಕೆ ಹೋಗಿ ಸಂಜೀವಿನಿ ಪರ್ವತವನ್ನು ತಂದು ಲಕ್ಷ್ಮಣನನ್ನು ಉಳಿಸಿದ.

( ಮುಂದುವರೆಯುವುದು )

* ರಚನೆ : ಪೂಜ್ಯ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ

* ಸಂಗ್ರಹ :
ಭಾಲರ
ಬೆಂಗಳೂರು


Share