MP-ಟಾಕ್ ಅಜಾಗ್ರತೆ – ಜಾಗ್ರತೆ

787
Share

 

https://www.facebook.com/mysore.pathrike/videos/805460320352193/

ಎಂಪಿ ಟಾಕ್ ಇಂದಿನ ಕಾರ್ಯಕ್ರಮದಲ್ಲಿ ಜಾಗ್ರತೆ ಜಾಗ್ರತೆ ವೀಕ್ಷಕರಿಗೆ ತಿಳಿಸಲಾಗುತ್ತಿದೆ

ಕರೋನಾ ಹೆಚ್ಚಾಗುತ್ತಿದೆ . ಜನರೇ ಜಾಗ್ರತೆಯಿಂದ ಇರಿ ಎಂದು ತಜ್ಞ ವೈದ್ಯರು, ಸರ್ಕಾರ ಯಾರೆಲ್ಲಾ ಏನೆಲ್ಲಾ ಏನೇ ಹೇಳಿದರೂ ಜನ ಉದಾಸೀನ ತೋರುತ್ತಲೇ ನಡೆದರು. ಒಮ್ಮೆಗೆ ಸೋಂಕು ಹೆಚ್ಚಾಗಿ ಸಾವು ನೋವುಗಳು ವಿಪರೀತವಾದಾಗ ಆಗ ಪ್ರಾರಂಭವಾಯಿತು ಜನರಲ್ಲಿ ಸ್ವಲ್ಪ ಮಟ್ಟಿನ ಜಾಗ್ರತೆ. ಇದಕ್ಕೆ ಹೊಣೆ ಯಾರು ನಾವೇ ಅಲ್ಲವೇ? ಸರ್ಕಾರವನ್ನು ದೂಷಿಸುವುದರಲ್ಲಿ ಅರ್ಥವೇನಿದೆ? ಇಂದು ಕರೋನಾ ಬಗ್ಗೆ ಇಡೀ ವಿಶ್ವಕ್ಕೆ ಸರಿಯಾದ ಮಾಹಿತಿ ದೊರೆಯುತ್ತಿಲ್ಲ ,ವಿಶ್ವ ಆರೋಗ್ಯ ಸಂಸ್ಥೆಯೇ ದಿನಕ್ಕೊಂದು ಹೇಳಿಕೆ ಬಿಡುಗಡೆ ಮಾಡುತ್ತಿದೆ ,ಇದು ಜನರಲ್ಲೂ ಬಹಳಷ್ಟು ಗೊಂದಲ ಏರ್ಪಟ್ಟಿದ್ದು ನಿತ್ಯ ಮಾಧ್ಯಮದಲ್ಲಾಗಲಿ ಸರ್ಕಾರದ ಹೇಳಿಕೆಗಳಿಂದಾಗಲಿ ಬೇಸತ್ತು ಹೋಗಿ ಇದರ ಬಗ್ಗೆ ನಿರುತ್ಸಾಹ ರಾಗಿ ತಮ್ಮ ಎಂದಿನ ಜೀವನ ನಡೆಸಿಕೊಂಡು ಹೋಗುತ್ತಿದ್ದಾರೆ ಆದರೆ ಆಗುತ್ತಿರುವ ಆಗು ಹೋಗುಗಳ ಬಗ್ಗೆ ಸರ್ಕಾರವನ್ನು ಮಾತ್ರ ಎಲ್ಲರೂ ಬೆರಳು ಮಾಡಿ ತೋರಿಸುತ್ತಾ ಹೊಣೆಗಾರರನ್ನಾಗಿ ಮಾಡಿದ್ದಾರೆ .ಪರಿಸ್ಥಿತಿ ಯಾವುದೇ ಡೋಲಾಯಮಾನ ಸ್ಥಿತಿಯಲ್ಲಿದ್ದರೂ ನಾವು ಎಷ್ಟು ಜಾಗ್ರತೆಯಿಂದ ಇರುತ್ತೀವೊ ಅಷ್ಟು ನಮ್ಮ ಜೀವನವನ್ನು ಸಮಗ್ರವಾಗಿ ಕಾಪಾಡಿಕೊಳ್ಳಬಹುದು ಎಂಬುದೇ ಇಂದಿನ ಎಂಪಿ ಟಾಕ್ನ -ಅಜಾಗ್ರತೆ ಜಾಗ್ರತೆ ವಿಷಯವಾಗಿದೆ .


Share