MP-ಟಾಕ್: ತೆರೆ-ಮರೆ – 19-6-21

410
Share

 

 

ಇಂದಿನ MP- ಟಾಕ್ ಕಾರ್ಯಕ್ರಮ ‘ತೆರೆ – ಮರೆ ‘ಎಂಬ ವಿಷಯ ಕುರಿತಾಗಿದ್ದು. ಕಳೆದ ನಾಲ್ಕೈದು ದಶಕಗಳಿಂದ ಮೈಸೂರಿನಲ್ಲಿ ರಾರಾಜಿಸುತ್ತಿದ್ದ ಅನೇಕ ಸಿನೆಮಾ ಚಿತ್ರಮಂದಿರಗಳು ಮರೆಯಾಗಿ ಹೋಗುತ್ತಿರುವ ಹಿನ್ನೆಲೆಯಲ್ಲಿ ಚರ್ಚೆ ಮಾಡಲಾಗುತ್ತಿದೆ.
ಚಿತ್ರಮಂದಿರದ ಮಾಲೀಕರೂ ರಾಜ್ಯ ಸಿನಿಮಾ ಪ್ರದರ್ಶಕರ ಸಂಘದ ಉಪಾಧ್ಯಕ್ಷರೂ ಆದ ರಾಜಾರಾಮ್ , ಖ್ಯಾತ ರಂಗಕರ್ಮಿ ಚಿತ್ರನಟರೂ ಆಗ ಶ್ರೀ ಮಂಡ್ಯ ರಮೇಶ್ ಮುಂತಾದವರು ತಮ್ಮ ಅಭಿಪ್ರಾಯಗಳನ್ನು ಇಂದಿನ ಈ ಚರ್ಚೆಯಲ್ಲಿ ವ್ಯಕ್ತಪಡಿಸಿದ್ದಾರೆ. ಮೈಸೂರು ನಗರಪಾಲಿಕೆಯ ಅವೈಜ್ಞಾನಿಕ ತೆರಿಗೆ ಕೋವಿದ್ ಸಂಕಷ್ಟ ಹೀಗೆ ಹತ್ತು ಹಲವು ಕಾರಣಗಳಿಂದ ಸಿಂಗಲ್ ಸ್ಕ್ರೀನ್ ಥಿಯೇಟರ್ಗಳು ಇತಿಹಾಸ ಪುಟ ಸೇರುವಂತಾಗಿದೆ.
ಒಪೆರಾ ,ರಣ್ಜೀತ್, ವಿದ್ಯಾರಣ್ಯ ಗಣೇಶ ,ಶಾಲಿಮಾರ್, ಶ್ರೀನಿವಾಸ ರತ್ನ ,ಶಾಂತಲಾ, ಶ್ರೀ ಟಾಕೀಸ್, ತಿಬ್ಬಾದೇವಿ ,ಶಾಮ್ಸುಂದರ್ (ರೀಜೆನ್ಸಿ ) ಹೀಗೆ ಹತ್ತಾರು ಚಿತ್ರಮಂದಿರಗಳು ಈಗ ದಂತಕಥೆಗಳಾಗಿವೆ.
ಈ ಜಾಗ ಗಳೆಲ್ಲವೂ
ದೊಡ್ಡ ಕಾಂಪ್ಲೆಕ್ಸ್ ಗಳಾಗಿ ಪರಿವರ್ತನೆಗೊಳ್ಳುತಿವೆ.
ಪ್ರಖ್ಯಾತ ನಟರು ನಿರ್ದೇಶಕರು ನಿರ್ಮಾಪಕರು ಹಂಚಿಕೆದಾರರು ಇಂತಹ ಚಿತ್ರಮಂದಿರಗಳಿಂದಲೇ ತಮ್ಮ ಜೀವನದ ಬೆಸುಗೆ ಖಂಡವರು.ಇಂದು ಅವರನ್ನೆಲ್ಲಾ ದುಃಖದ ಮಡುವಿಗೆ ತಳ್ಳಿದೆ.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕೂಡಲೇ ಮಧ್ಯಪ್ರವೇಶಿಸಬೇಕಿದೆ.
ಕೇವಲ ಮೈಸೂರು ಅಷ್ಟೆ ಅಲ್ಲ .ಇಡೀ ಕರ್ನಾಟಕ ರಾಜ್ಯದ ಚಿತ್ರಮಂದಿರಗಳ ಪರಿಸ್ಥಿತಿ ಹೀಗೆ ಮುಂದುವರೆದಿದೆ, ಎಂಬ ವಿಷಯಗಳು ಇಂದಿನ ಚರ್ಚೆಯಲ್ಲಿ ಬೆಳಕು ಚೆಲ್ಲಲಿದೆ…


Share