MP-ಟಾಕ್, ನೆನಪಿನ ಅಂಗಳದಲ್ಲಿ ತಾರಾಸು ಪಯಣ

1125
Share

https://www.facebook.com/mysore.pathrike/videos/1032318497288645/?sfnsn=wiwspmo

ಸಾಹಿತಿಗಳು ಕಾದಂಬರಿಗಾರರೂ ಆದ
ತ ರಾ ಸು ರವರ ಜನ್ಮಶತಮಾನೋತ್ಸವವನ್ನು ಮೈಸೂರು ನಗರದಲ್ಲಿ ನಾಳೆ ಆಚರಿಸಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ವಲಯ ಉಪಾಧ್ಯಕ್ಷರು, ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರರೂ ಆದ ಶ್ರೀ ಡಿ.ಟಿ. ಪ್ರಕಾಶ್ ರವರು ಇಂದಿನ MP TALK ನಲ್ಲಿ ತರಾಸು ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಲಿದ್ದಾರೆ.
ದಾವಣಗೆರೆಯಲ್ಲಿ ಹುಟ್ಟಿ ಚಿತ್ರದುರ್ಗದಲ್ಲಿ ಬೆಳೆದು ಬಾಲ್ಯದಿಂದಲೇ ತಮ್ಮ ತಂದೆ ಹಾಗೂ ಕನ್ನಡ ಸಾಹಿತ್ಯಲೋಕದ ಶ್ರೀಮಂತ ವ್ಯಕ್ತಿ ಎನ್ನಿಸಿ ಕೊಂಡಂತಹ ಅವರ ದೊಡ್ಡಪ್ಪ ವೆಂಕಣ್ಣಯ್ಯನವರ ಗರಡಿಯಲ್ಲಿ ಪಳುಗಿದವರು ತ ರಾ ಸು.
ಮೈಸೂರಿಗೂ ತರಾಸು ರವರಿಗೂ ಅವಿನಾಭಾವ ಸಂಬಂಧ ,
ನಾಲಿಗೆಯಲ್ಲಿ ಸರಸ್ವತಿ ಇರುವಳು ಎನ್ನುವ ಹಾಗೆ A Pen is mighter than a sword ಎಂದು ತೋರಿಸಿಕೊಟ್ಟು ತಮ್ಮ ಬರವಣಿಗೆಯಿಂದಲೇ ಇತಿಹಾಸ ಸೃಷ್ಟಿಸಿದವರು ತರಾಸು .
50ಕ್ಕೂ ಹೆಚ್ಚು ಸಾಮಾಜಿಕ ಕಾದಂಬರಿ, ಐತಿಹಾಸಿಕ ಕಾದಂಬರಿ, ಜೀವನ ಚರಿತ್ರೆ, ನಾಟಕಗಳು, ಹೀಗೆ ಹತ್ತು ಹಲವು ಕಾದಂಬರಿಗಳಿಗೆ ತರಾಸು ಸುಪ್ರಸಿದ್ದರಾಗಿದ್ದಾರೆ.
ನಾಗರಹಾವು ಚಂದನದ ಗೊಂಬೆ ಗಾಳಿಮಾತು ಚಲನಚಿತ್ರಗಳಾಗಿ ಜನಮನ್ನಣೆ ಗಳಿಸಿದೆ. ಮೈಸೂರು ಪತ್ರಿಕೆಗೂ ತರಾಸು ರವರಿಗೂ ಸಹ ಅವಿನಾಭಾವ ಸಂಬಂಧ ,ತರಾಸು ರವರು ಬರೆಯುತ್ತಿದ್ದ ‘ಹೂವಿನ ಖಠಾರಿ’ ಲೇಖನ ಸರಕಾರವನ್ನೇ ನಡುಗಿಸುವ ಶಕ್ತಿ ಇತ್ತು ……ಇಂತಹ ಅನೇಕ ವಿಷಯಗಳು ಇಂದಿನ MP TALK ಕಾರ್ಯಕ್ರಮದಲ್ಲಿ ಮೂಡಿಬಂದಿದೆ.


Share