MP : ವಾಚಕರ ಪತ್ರ : ‘ ಮೊರದ ಬಾಗಿನ ತಯಾರಿಕೆ ‘ : ನಮ್ಮ ಕಣ್ಣು ತೆರೆಸಿದ ಕಾರ್ಯಕ್ರಮ

290
Share

ನಮಸ್ಕಾರ
ನಾನು ಭದ್ರಾವತಿ ನಿವಾಸಿ
ಮೈಸೂರು ಪತ್ರಿಕೆ ನ್ಯೂಸ್ ಚಾನೆಲ್ ನಲ್ಲಿ ಬರುವ ಎಲ್ಲಾ ಸುದ್ದಿಗಳನ್ನು ಕಾರ್ಯಕ್ರಮಗಳನ್ನು ತಪ್ಪದೇ ನೋಡುತ್ತೇನೆ ವೀಕ್ಷಿಸುತ್ತೇನೆ .
ಗೌರಿಹಬ್ಬದ ದಿನದಂದು ಮೈಸೂರು ಪತ್ರಿಕೆಯಲ್ಲಿ ಮರದ ಬಾಗಿನ ಮಾಡುವ ಮರವನ್ನು ಹೆಣೆಯುವವರ ಬಗ್ಗೆ ವೀಡಿಯೊ ಚಿತ್ರಣವನ್ನು ನೋಡಿದೆ . ಮೊದಲಿಗೆ ಈ ಚಿತ್ರಣವನ್ನು ನೀಡಿದ ಮೈಸೂರು ಪತ್ರಿಕೆಗೆ ಅಭಿನಂದನೆಗಳು . ಇಂತಹ ಚಿಕ್ಕ ಚಿಕ್ಕ ಕೆಲಸ ಮಾಡುವವರು ಆದರೆ ಎಲ್ಲರಿಗೂ ಬೇಕಾಗುವವರು ಸಮಾಜದಲ್ಲಿ ಗಮನಕ್ಕೆ ಬರುವುದಿಲ್ಲ . ಅಂತಹವರನ್ನು ತೋರಿಸಿದ್ದಕ್ಕಾಗಿ ಮೈಸೂರು ಪತ್ರಿಕೆಗೆ ಮನಃಪೂರ್ವಕವಾಗಿ ಅಭಿನಂದಿಸುತ್ತೇನೆ .
ಆದರೆ ಇದನ್ನು ನೋಡಿದ ಮೇಲೆ ನಿಜವಾಗಿಯೂ ಮನಸ್ಸು ಕಲಕುವ ವಂತಾಯಿತು . ಎಲ್ಲರಿಗೂ ವರ್ಷಕ್ಕೊಮ್ಮೆ ಬೋನಸ್ಸು ಅಥವಾ ಸಂಬಳದಲ್ಲೇ ಜಾಸ್ತಿಯಾಗುವುದು ಯಾವುದೋ 1ರೀತಿಯ ಅನುಕೂಲಗಳು ಇರುತ್ತದೆ . ಆದರೆ ಅದರಲ್ಲಿ ಮಾತನಾಡಿದ ವ್ಯಕ್ತಿ 1ತಿಂಗಳಿನಿಂದ ಮನೆಗೆ ಹೋಗದೆ ಈ ಕಸುಬಿನಲ್ಲಿ ತೊಡಗಿರುತ್ತಾರೆ ಎನ್ನುವುದನ್ನು ಕೇಳಿ ಬಹಳ ಬೇಸರವಾಯಿತು .
ಇದನ್ನು ತೆಗೆದುಕೊಳ್ಳುವಾಗ ಜನರು ಸ್ವಲ್ಪ ಯೋಚಿಸಬೇಕು ಎನಿಸಿತು .
ಹೆಚ್ಚೂಕಡಿಮೆ ಮೊರವನ್ನು ವರ್ಷಕ್ಕೆ ಒಂದೇ ಬಾರಿ ಉಪಯೋಗಿಸುತ್ತಾರೆ ಬೇರೆ ಸಮಯದಲ್ಲಿ ಉಪಯೋಗಕ್ಕೆ ಬರುವುದು ಬಹಳ ಕಡಿಮೆ . ಅಂತಹದ್ದರಲ್ಲೂ ಇದನ್ನು ಚೌಕಾಸಿ ಮಾಡಿ ತೆಗೆದುಕೊಳ್ಳುವುದು ನೋಡಿದರೆ ಬೇಜಾರಾಗುತ್ತದೆ . ಇಷ್ಟಕ್ಕೂ ಜಾಸ್ತಿಯೆಂದರೆ ಐವತ್ತು ಅಥವಾ ನೂರು ರು ಅಧಿಕವಾಗಿ ನೀಡಬಹುದು . ಆದರೆ ಇದು ಪ್ರತಿನಿತ್ಯದ ವ್ಯಾಪಾರವಲ್ಲ ಅಥವಾ ಪ್ರತಿವಾರದ ವ್ಯಾಪಾರವಲ್ಲ ವರ್ಷಕ್ಕೆ ಒಂದೇ 1ಸಲ 1ನೂರು ರೂ ಹೆಚ್ಚಾಗಿ ಕೊಡುವುದರಿಂದ ಯಾರೂ ಏನನ್ನೂ ಕಳೆದುಕೊಳ್ಳುವುದಿಲ್ಲ ಅನ್ನಿಸುತ್ತದೆ .
ಎಲ್ಲರಲ್ಲೂ ನಾನು ಪ್ರಾರ್ಥಿಸುವುದು ಇಷ್ಟೇ ಬರುವ ವರ್ಷವಾದರೂ ಮೊರದ ಬಾಗಿನ ಖರೀದಿಸುವಾಗ ಐವತ್ತು ಅಥವಾ ನೂರು ಹೆಚ್ಚು ಕೆ ಆದಲ್ಲಿ ಯೋಚನೆ ಮಾಡದೆ ಕೊಡುವುದು ಉತ್ತಮ ಎನಿಸುತ್ತದೆ .
ಆದರೆ ಮಾರಾಟ ಮಾಡುವವರು ಇದನ್ನು ಗಮನದಲ್ಲಿರಿಸಿ ಹೇಗಿದ್ದರೂ ಕೊಡುತ್ತಾರೆ ಎಂದು ಯದ್ವಾತದ್ವಾ ಹಾಕುವಂಥ ಮನೋಸ್ಥಿತಿಗೆ ಇಳಿಯಬಾರದು .
ಒಟ್ಟಿನಲ್ಲಿ ಇಂತಹ 1ಉತ್ತಮ ವಿಷಯವನ್ನು ತಿಳಿಸಿಕೊಟ್ಟ ಮೈಸೂರು ಪತ್ರಿಕೆಗೆ ಮತ್ತೊಮ್ಮೆ ಅಭಿನಂದನೆಗಳು . ಇಂತಹ ಪ್ರಯತ್ನ ಇನ್ನೂ ಹೆಚ್ಚುಹೆಚ್ಚಾಗಿ ಮಾಡಲಿ ಎಂದು ಆಶಿಸುತ್ತೇನೆ .

ಇಂತಹ ವಿಷಯವನ್ನು ತಿಳಿಸಿಕೊಟ್ಟು ಮೈಸೂರು ಪತ್ರಿಕೆಯು ನಮ್ಮ ಕಣ್ಣು ತೆರೆಸಿದೆ. ಸುಲಭವಾಗಿ ಮಿರ ತಂದು ಉಪಯೋಗಿಸುತ್ತೇವೆ. ಇದರ ಹಿಂದಿನ ಪರಿಶ್ರಮ ತಿಳಿದಿರಲಿಲ್ಲ. ಹಾಗಾಗಿ ನಾನು ಇನ್ನು ಮುಂದೆ ಬಾಗಿನದ ಮೊರ ಖರೀದಿಸುವಾಗ ಚೌಕಾಸಿ ಮಾಡುವುದಿಲ್ಲ ಎಂದು ನಿರ್ಧರಿಸಿದ್ದೇನೆ.

ಧನ್ಯವಾದಗಳು


Share