MP -TALK : ಆಟ ಪಿಕಲಾಟ

868
Share

 

 

ಪ್ರಚಲಿತ ವಿದ್ಯಮಾನಕ್ಕೆ ಅನುಗುಣವಾಗಿ ಎಂಪಿ ಟಾಪ್ ಕಾರ್ಯಕ್ರಮಗಳು ಮುಂದುವರೆದಿದ್ದು ಇಂದಿನ ಕಾರ್ಯಕ್ರಮದಲ್ಲಿ ಆಟ- ಪೀಕಲಾಟ ಎಂಬ ಶೀರ್ಷಿಕೆಯಡಿ ಶಾಲೆಗಳ ಮೇಲೆ ಕಳೆದ 2ದಿನಗಳಿಂದ ಆಗುತ್ತಿರುವ ಕೋವಿದ್ ಪರಿಣಾಮ ಕುರಿತು ಚರ್ಚಿಸಲಾಗುತ್ತಿದೆ. ಮೈಸೂರು ನಗರ ಒಂದರಲ್ಲೇ ನೂರಕ್ಕೂ ಹೆಚ್ಚು ಪ್ರಕರಣಗಳು ನಿನ್ನೆ ವರದಿಯಾಗಿದ್ದು ಅದರಲ್ಲಿ ಹತ್ತೊಂಬತ್ತು ಶಾಲಾ ಮಕ್ಕಳಿಗೆ ಕರೋನಾ ಪಾಸಿಟಿವ್ ಬಂದಿದ್ದು ಬಹಳ ಆತಂಕಕಾರಿ ಆಗಿದೆ.ಇಂತಹ ಸಂದರ್ಭದಲ್ಲಿ ಶಿಕ್ಷಣ ಸಚಿವರು ತಮ್ಮ ನಿಲುವಿನಲ್ಲಿ ಬದಲಾವಣೆ ಮಾಡಲೇಬೇಕಾದ ಅನಿವಾರ್ಯತೆ ಬಂದಿದೆ . ಶಾಲೆಗಳನ್ನು ಬಂದ್ ಮಾಡುವ ದಿಟ್ಟ ಕ್ರಮ ಜರುಗಿಸಬೇಕಾಗಿದೆ. ನೆರೆಯ ರಾಜ್ಯಗಳು ಈಗಾಗಲೇ ರಜೆ ಘೋಷಿಸಿ. ಛತ್ತೀಸ್‍ಘಡ್ ಅಂತ ರಾಜ್ಯಗಳು ಶಾಲಾ ಮಕ್ಕಳಿಗೆ ಜನರಲ್ ಪ್ರಮೋಷನ್ ನೀಡಲು ಮುಂದಾಗಿದೆ .ಇವುಗಳನ್ನು ಕೂಡಲೇ ರಾಜ್ಯ ಸರ್ಕಾರ ಪರಾಮರ್ಶಿಸಿ ಸೂಕ್ತ ಕ್ರಮ ಕೈಗೊಳ್ಳುವುದು ವಿವೇಚನಾತ್ಮಕ. ಮಕ್ಕಳೊಂದಿಗೆ ಚೆಲ್ಲಾಟವಾಡುವುದನ್ನು ನಿಲ್ಲಿಸಿ , ಶಾಲೆ ನಡೆಸಲೇಬೇಕೆಂಬ ಹಠದ ಧೋರಣೆ ಸಡಿಲಿಸಲಿ . ಎಂಬುದೇ ಇಂದಿನ ಚರ್ಚೆಯ ವಿಷಯವಾಗಿದೆ .


Share