ಶ್ರೀ ಆಂಜನೇಯ ಚರಿತ್ರೆ ಭಾಗ 1 : ಪುಟ – 82

251
Share

ಶ್ರೀ ಆಂಜನೇಯ ಚರಿತ್ರೆ ಭಾಗ 1 : ಪುಟ – 82
ಓಂ ನಮೋ ಹನುಮತೇ ನಮಃ

574) ಸಭೆಗೆ ಬಂದಾಗ ಉಗ್ರನಾಗಿದ್ದ ರಾವಣನನ್ನು ನೋಡಿ ಹನುಮಂತ ಆಶ್ಚರ್ಯ ಪಟ್ಟ. ರಾತ್ರಿ ತಾನು ನೋಡಿದ್ದ ರಾವಣನಿಗೂ ಈಗ ತಾನು ನೋಡುತ್ತಿರುವ ರಾವಣನಿಗೂ ಎಷ್ಟೊಂದು ವ್ಯತ್ಯಾಸ! ಎಂದುಕೊಂಡ. ಸ್ವಲ್ಪ ಭಯವೂ ಆಯಿತು.
575) ನಂತರ ಸಭೆಯಲ್ಲಿ ಹನುಮಂತನನ್ನು ಪ್ರಶ್ನಿಸಲು ಪ್ರಾರಂಭಿಸಿದರು. ಹನುಮಂತನು ತಾನು ಸುಗ್ರೀವನ ಮಂತ್ರಿಯೆಂದೂ, ರಾಮದೂತನೆಂದೂ ಹೇಳಿ ರಾವಣನಿಗೆ ವಿಧವಿಧವಾಗಿ ಹಿತೋಪದೇಶ ಮಾಡಿದ. ರಾಮ ಲಕ್ಷ್ಮಣರ ಪರಾಕ್ರಮವನ್ನು ವಿವರಿಸಿದ.
576) ರಾವಣನಿಗೆ ಮೈಉರಿದುಹೋಯ್ತು. “ಸಾಯಿಸಿ ಹಾಕ್ರೋ ಅವನನ್ನ!” ಎಂದು ಘರ್ಜಿಸಿದ.
577) ಆಗ ವಿಭೀಷಣನು – “ದೂತರನ್ನು ಸಾಯಿಸಬಾರದು. ಅಗತ್ಯ ಬಿದ್ದರೆ ಯಾವುದಾದರೂ ಒಂದು ಅಂಗವನ್ನು ಕತ್ತರಿಸಬಹುದು” ಎಂದು ಹೇಳಿದ.
ಲಂಕಾದಹನ
578) ರಾವಣನಿಗೆ ಅದು ಸರಿ ಎನಿಸಿ, ಹನುಮಂತನ ಬಾಲಕ್ಕೆ ಬೆಂಕಿ ಹಚ್ಚುವಂತೆ ಆಜ್ಞಾಪಿಸಿದ. ರಾಕ್ಷಸರು ಬಾಲಕ್ಕೆ ಎಣ್ಣೆ ಬಟ್ಟೆಯನ್ನು ಸುತ್ತಿ ಬೆಂಕಿ ಅಂಟಿಸಿದರು.
579) ಹನುಮಂತ ಒಳಗೊಳಗೇ ಹೀಗೆ ಯೋಚಿಸುತ್ತಿದ್ದ –
1. ನಾನು ಈ ರಾವಣಾಸುರನನ್ನೂ ಸಾಯಿಸಬಲ್ಲೆ. ಆದರೆ ಆ ಕೆಲಸವನ್ನು ಶ್ರೀರಾಮ ಮಾಡಿದರೇನೇ ಚೆನ್ನ.
2. ಈ ನಗರವನ್ನು ರಾತ್ರಿವೇಳೆ ನೋಡಿದ್ದೆ. ಹಗಲು ಬೆಳಕಿನಲ್ಲಿ ಇನ್ನೊಮ್ಮೆ ನೋಡುವುದು ಒಳ್ಳೆಯದು.
580) ಹೀಗೆ ಯೋಚಿಸಿದ ಹನುಮಂತ ಮಿಂಚಿನ ವೇಗದಲ್ಲಿ ಎಗರಿ, ಉರಿಯುತ್ತಿದ್ದ ಬಾಲದಿಂದ ಲಂಕಾಪಟ್ಟಣದ ಮನೆಗಳಿಗೆ ಬೆಂಕಿ ಇಟ್ಟ.
581) ಹನುಮಂತನು ಮಾಡುತ್ತಿದ್ದ ಅದ್ಭುತ ಕಾರ್ಯವನ್ನು ನೋಡಿ ಆಕಾಶದಲ್ಲಿ ದೇವತೆಗಳು ಅವನನ್ನು ಕೊಂಡಾಡಿದರು.
( ಮುಂದುವರೆಯುವುದು )

* ರಚನೆ : ಪೂಜ್ಯ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ

* ಸಂಗ್ರಹ
ಭಾಲರಾ
ಬೆಂಗಳೂರು


Share