ಶ್ರೀ ಕ್ರೋಧಿ ನಾಮ ಸಂವತ್ಸರ :ಲಕ್ಷ್ಮೀ ಕೃಪೆ ಹೆಚ್ಚು / ಸುಬ್ರಹ್ಮಣ್ಯನನ್ನು ಹೆಚ್ಚು ಪ್ರಾರ್ಥಿಸಿ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ

278
Share


ಶ್ರೀ  ಕ್ರೋಧಿ ನಾಮ ಸಂವತ್ಸರದಂದು ಪೂಜ್ಯ ಶ್ರೀ  ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿಯವರ ಅನುಗ್ರಹ ಸಂದೇಶ –
ಎಲ್ಲರಿಗೂ ಶ್ರೀ ಕ್ರೋಧಿನಾಮ ಸಂವತ್ಸರದ ಶುಭಾಶಯಗಳು. ಇಂದು ನಮ್ಮ ಆಶ್ರಮದಲ್ಲಿ ಈ ಸಂವತ್ಸರವನ್ನು ಬರಮಾಡಿಕೊಳ್ಳೋಣ. ಕ್ರೋಧಿ ಎಂದು ಹೇಳದೆ ಶ್ರೀ ಕ್ರೋಧಿ ಸಂವತ್ಸರ ಎಂದು ಕರೆಯೋಣ. ಈ ಹೊಸ ವರ್ಷ ಯುಗಾದಿ ಎಂದು ಹೇಳುತ್ತೇವೆ. ಇದು ಸೃಷ್ಟಿ ಆದಿಯಲ್ಲಿ ಕಲಿಯುಗ ಪ್ರಾರಂಭವಾದ ದಿನ. ಪೂಜ್ಯರು ಇಂದು ಹೈದರಾಬಾದ್ ನಲ್ಲಿ ವಿಜೃಂಭಣೆಯಿಂದ ಆಚರಿಸುತ್ತಿದ್ದಾರೆ. ಮೈಸೂರಿನಲ್ಲಿ ಹೆಚ್ಚು ಹೆಚ್ಚು ಕಾರ್ಯಕ್ರಮ ಮಾಡುವ ಸಲುವಾಗಿ ಇಲ್ಲೇ ಆಚರಿಸುತ್ತಿದ್ದೇವೆ. ಬಿಟ್ಟುಹೋಗಿರುವ ಸಂವತ್ಸರ ಶ್ರೀ ಶೋಭಕೃತ್ ನಾಮ ಸಂವತ್ಸರ. ಈ ವರ್ಷದ  ಶ್ರೀ  ಕ್ರೋಧಿ ನಾಮ ಸಂವತ್ಸರದ ವಿಶೇಷ ಎಂದರೆ ಸೀತಾ ಅಮ್ಮನವರು ಹುಟ್ಟಿದ್ದ ಸಂವತ್ಸರ. ನೇಗಿಲಿನಲ್ಲಿ ಸಿಕ್ಕವಳು ಅಮ್ಮ. ಜನಕ ಮಹಾರಾಜರಿಗೆ ಸೀತಾ ಅಮ್ಮ ಸಿಕ್ಕಿದ್ದು ಕ್ರೋಧಿ ನಾಮ ಸಂವತ್ಸರದಲ್ಲೇ. ಲಕ್ಷ್ಮೀ ಅಷ್ಟೋತ್ತರದಲ್ಲಿ ಕಾಮಾಕ್ಷೀಂ ಕ್ರೋಧ ಸಂಭವ ಎಂದು ಹೇಳುತ್ತೇವೆ. ಕ್ರೋಧ ಸಂಭವದಿಂದ  ಭೂಮಿಗೆ ಇಳಿದು ಬಂದದ್ದು ಲಕ್ಷ್ಮೀ , ಇದು ಶುಭ. ಈ ಸಂವತ್ಸರದಲ್ಲಿ ಲಕ್ಷ್ಮೀ ಕೃಪೆ ಹೆಚ್ಚಾಗಿರುತ್ತದೆ. ಇಂದು ಸಂಜೆ ವೇಳೆ ಪಂಚಾಂಗ ಶ್ರವಣ ಮಾಡಬೇಕು. 

ಇಂದು ಮಂಗಳವಾರ ಹೊಸ ಸಂವತ್ಸರ ಪ್ರಾರಂಭವಾಗಿರುವುದರಿಂದ ಕುಜನೇ ರಾಜನು. ಈ ವರ್ಷ ಸುಬ್ರಹ್ಮಣ್ಯನನ್ನು ಹೆಚ್ಚು ಪ್ರಾರ್ಥಿಸಬೇಕು. ಎಲ್ಲರೂ ಆರೋಗ್ಯಕ್ಕಾಗಿ ಅವನಲ್ಲಿ ಪ್ರಾರ್ಥಿಸೋಣ.

Share