ಸಂಪಾದಕೀಯ : ಆಧುನಿಕತೆ ಎಂದರೆ ನಮ್ಮ ಸಂಸ್ಕೃತಿ , ಪರಂಪರೆಯನ್ನು ಮರೆತು ಮುನ್ನುಗ್ಗುವುದಲ್ಲ

113
Share

ಸಕಲ ಜನತೆಗೆ, ಮೈಸೂರು ಪತ್ರಿಕೆ ವಾಚಕರಿಗೆ, ಜಾಹೀರಾತುದಾರರಿಗೆ, ಲೇಖನಕಾರರಿಗೆ, ಕ್ರೋಧಿ ನಾಮ ಸಂವತ್ಸರದ ಶುಭಾಶಯಗಳು.
ಯುಗಾದಿ ಹಬ್ಬದ ಹೊಸಿಲಲ್ಲೇ ವಿಶ್ವದ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತದಲ್ಲಿ ಪ್ರಜಾಪ್ರಭುತ್ವದ ಹಬ್ಬವು ಬರುತ್ತಿದೆ. ಇದು ಸಂತೋಷದ ವಿಷಯ.
ಪ್ರಜಾಪ್ರಭುತ್ವ ಮತ್ತು ರಾಜಕೀಯ ಎಂಬುದೆರೆಡು ಒಂದು ನಾಣ್ಯದ ಎರೆಡು ಮುಖಗಳಿದ್ದಂತೆ. ವಿಪರ್ಯಾಸವೆಂದರೆ ರಾಜಕೀಯದಲ್ಲಿ ಎಲ್ಲವೂ ಸಾದ್ಯ, ಏನು ತಪ್ಪು ಮಾಡಿದರೂ ತಪ್ಪಿಲ್ಲ ಎನ್ನುವುದು ನಾಣ್ನುಡಿಯಾಗಿಬಿಟ್ಟಿದೆ.
ಭಾರತವು ಸಂಸ್ಕೃತಿ , ಪರಂಪರೆ, ಇತಿಹಾಸ, ಆಚಾರ, ವಿಚಾರವುಳ್ಳ ಶ್ರೀಮಂತ ರಾಷ್ಟ್ರ .
ಸ್ವಾತಂತ್ರ್ಯ ಪೂರ್ವದಲ್ಲಿ ಸಾವಿರಾರು ಹೋರಾಟಗಾರರು ತನು, ಮನ, ಧನ ಅರ್ಪಿಸಿ ತಮ್ಮ ಜೀವವನ್ನೆ ತೆತ್ತಿ, ಜೀವನದುದ್ದಕ್ಕೂ ಹೇಳಲಾರದಷ್ಟು ಕಷ್ಟ ಪಟ್ಟು ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ. ಅಂತಹ ನಾಯಕರುಗಳನ್ನು ಇಂದಿಗೂ ನೆನೆಸಿಕೊಳ್ಳತ್ತೇವೆ. ಆದರೆ ಸ್ವಾತಂತ್ರ್ಯಾನಂತರ ಆ ಆದರ್ಶ, ದೇಶಸೇವಾ ಮನೋಭಾವ ಇರುವ ರಾಜಕಾರಣಿಗಳು ಇಲ್ಲ ಎಂದು ಹೇಳಲಾಗುವುದಿಲ್ಲ ಅತಿ ವಿರಳ.
ಇನ್ನು ಚುನಾವಣಾ ಸಮಯದಲ್ಲಂತೂ ಮರಕೋತಿ ಆಟದಂತಾಗುತ್ತಿದೆ ಇಂದಿನ ರಾಜಕಾರಣ. ಯಾವುದೇ ನೀತಿ ನಿಯಮಗಳಿಲ್ಲ. ತಮ್ಮ ಪಕ್ಷದ ಬದ್ಧತೆಯಂತು ಹೇಳ ತೀರದು. ಬಹುಶಃ ಅದರ ಅರ್ಥವೇ ಗೊತ್ತಿಲ್ಲವೇನೋ ? ತಮ್ಮ ಸಿದ್ಧಾಂತವನ್ನೇ ಗಾಳಿಗೆ ತೂರಿ ಬಿಡುತ್ತಾರೆ ಪಕ್ಷ ಬಿಡುವವರು, ಇತರರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುವವರು !!
ಆಧುನಿಕತೆ ಮುಖ್ಯ. ಕಾಲದೊಂದಿಗೆ ನಡೆಯ ಬೇಕು. ಆದರೆ ನಮ್ಮ ಸಂಸ್ಕೃತಿ , ಪರಂಪರೆಗಳನ್ನು ತಲೆದಂಡ ಮಾಡಿಕೊಂಡು ಆಧುನಿಕತೆಗೆ ಸೋಗು ಹಾಕುವ ಅವಶ್ಯಕತೆ ಇಲ್ಲ.
ದೇಶವನ್ನಾಳುವ ನಾಯಕರು ಇಂದಾದರು ಬೇವನ್ನು ಜಗಿದು ತಿಂದು ತಮ್ಮಲ್ಲಿರುವ ಕಹಿಯಾದ ಗುಣಗಳನ್ನು ವರ್ಜಿಸಿ ಬೆಲ್ಲವನ್ನು ತಿಂದು ಸಿಹಿಯಾದ ಆಡಳಿತ ನೀಡಲು ನಿರ್ಧರಿಸಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ.
ಮತ್ತೊಮ್ಮೆ ಸಕಲ ನಾಡಿನ ಜನತೆಗೂ ಕ್ರೋಧಿ ನಾಮ ಸಂವತ್ಸರದ ಯುಗಾದಿ ಹಬ್ಬದ ಶುಭಾಶಯಗಳು.
ಮತದಾರರು ದೇಶದ ಅಭಿವೃದ್ದಿಯನ್ನು ಮಾನದಂಡವಾಗಿಟ್ಟುಕೊಂಡು ಬೇವಿನಂತ ಕಹಿ ನಾಯಕರನ್ನು ಬದಿಗಿಟ್ಟು, ಬೆಲ್ಲದಂತ ಸಿಹಿ ನಾಯಕರನ್ನು ಆರಿಸುವ ಸದ್ಬುದ್ಧಿ ಕೊಡಲೆಂದು ನಮ್ಮ ಪ್ರಾರ್ಥನೆ.


Share