ʻಚಕ್ರವರ್ತಿ ಸೂಲಿಬೆಲೆʼಯನ್ನು ಕರೆಸುವುದು ಸೂಕ್ತವಲ್ಲ.

233
Share

ಮೈಸೂರು: ಬಹುರೂಪಿ ರಾಷ್ಟ್ರೀಯ ನಾಟಕೋತ್ಸವಕ್ಕೆ ವಿಚಾರ ಸಂಕಿರಣದ ಸಮಾರೋಪ ಅತಿಥಿಯಾಗಿ ಯುವಬ್ರಿಗೆಡ್‌ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಅವರನ್ನು ಆಯ್ಕೆ ಮಾಡಿರುವುದನ್ನು ʻಪರ್ವʼ ನಾಟಕದ ಕಿರಿಯ ಕಲಾವಿದರು ವಿರೋಧಿಸಿದ್ದಾರೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು, ಚಕ್ರವರ್ತಿ ಸೂಲಿಬೆಲೆ ಹಾಗೂ ಮಾಳವಿಕಾ ಅವಿನಾಶ್‌ ಅವರ ಬದಲಾಗಿ ಸಮಾನ ಮನಸ್ಕರನ್ನೂ ಆಯ್ಕೆ ಮಾಡುವಂತೆಯೂ ಪತ್ರದಲ್ಲಿ ಕೋರಿದ್ದಾರೆ.
ಈ ಸಂಬಂಧ ಅಡ್ಡಂಡ ಸಿ.ಕಾರ್ಯಪ್ಪ ಅವರಿಗೆ ಶುಕ್ರವಾರ ಪತ್ರಬರೆದಿರುವ ಅವರು, ʻಬಹುರೂಪಿʼ ರಂಗಾಯಣಕ್ಕೆ ದೊಡ್ಡ ಗರಿಮೆಯ ಕಾರ್ಯಕ್ರಮ. ಇದಕ್ಕೆ ಸಮಾಜದ ದೃಷ್ಟಿಯಲ್ಲಿ ಎಲ್ಲ ಸಿದ್ಧಾಂತಗಳಿಗೂ ಗೌರವ ಕೊಡುವ ಸಮಾನ ಮನಸ್ಕರನ್ನು ಕರೆಸಬಹುದು. ಆದರೆ ಒಂದೇ ಪಕ್ಷದ ವಕ್ತಾರರಾಗಿರುವ ಹಾಗೂ ಸುಳ್ಳಿನ ಸರಮಾಲೆಗಳನ್ನೇ ಹೆಣೆದು ಭಾಷಣ ಬಿಗಿದು ಕೋಮುಗಲಭೆ ಸೃಷ್ಟಿಸಿರುವ ʻಚಕ್ರವರ್ತಿ ಸೂಲಿಬೆಲೆʼಯನ್ನು ಕರೆಸುವುದು ಸೂಕ್ತವಲ್ಲ. ಹಾಗೂ ಮತ್ತೊಬ್ಬ ಕಲಾವಿದರಾದ ಮಾಳವಿಕಾ ಅವಿನಾಶ್‌ ಅವರೂ ಒಂದು ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ. ಇವರನ್ನೂ ಕರೆಸುವುದು ಸೂಕ್ತವಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಅನೇಕ ಯಶಸ್ವಿ ಕಾರ್ಯಕ್ರಮಗಳನ್ನು ನೀಡಿದ ತಾವು ಈ ಇಬ್ಬರನ್ನು ಕರೆತರುವ ಕುರಿತು ತುಸು ಗಂಭೀರವಾಗಿ ಆಲೋಚಿಸಬೇಕಿದೆ. ಇದು ನಮಗೂ ಖುಷಿ ತರುತ್ತದೆ. ಅವರಿಬ್ಬರನ್ನು ಕರೆಸುವುದನ್ನು ನಾವು ವಿರೋಧಿಸುತ್ತೇವೆ. ನಮ್ಮ ಆಸೆ ಒಂದೇ ನಿಮ್ಮ ಸಾರಥ್ಯದಲ್ಲಿ ʻಬಹುರೂಪಿʼಯು ಯಾವುದೇ ವಿವಾದ ಅಡಚಣೆಗಳ ಕೇಂದ್ರಬಿಂದುವಾಗದೇ ಯಶಸ್ವಿಯಾಗಬೇಕು ಎಂಬುದೇ ನಮ್ಮೆಲ್ಲರ ಆಶಯʼ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಕಲಾವಿದರ ಮನವಿಗೆ ಮನವಿಗೆ ಸೂಕ್ತವಾಗಿ ಸ್ಪಂಧಿಸದೇ ಉಡಾಫೆ ಉತ್ತರ ನೀಡಿದ್ದಾರೆ. ʻನಾವು ಈ ರಂಗಾಯಣ ನಿರ್ದೇಶಕರು. ಅತಿಥಿಗಳಾಗಿ ಯಾರನ್ನು ಬೇಕಾದರೂ ಕರೆಸುವ ಅಧಿಕಾರವಿದೆ. ನೀವು ನಾಟಕ ಮಾಡಲು ಬಂದಿದ್ದೀರಾ.. ನಾಟಕವನ್ನೂ ಮಾಡಿ, ನಮ್ಮ ರಾಜಕೀಯ ನಿಲುವುಗಳನ್ನು ಪ್ರಶ್ನಿಸುವ ಹಕ್ಕು ನಿಮಗೆ ಇಲ್ಲ ಎಂದು ಉಡಾಫೆ ಉತ್ತರ ನೀಡಿದ್ದಾರೆ. ಇದರೊಂದಿಗೆ ಪರ್ವ ನಾಟಕವನ್ನೂ ನಿಲ್ಲಿಸಿ ಬಿಡುತ್ತೇವೆ ಎಂದೂ ಕೆಲವರಿಗೆ ಎಚ್ಚರಿಕೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.


Share