ಅಕ್ರಮ ಆಸ್ತಿ ಗಳಿಕೆ : ಪಂಚಾಯತ್ ಇಂಜಿನಿಯರ್ ಗೆ ಶಿಕ್ಷೆ

166
Share

ಮೂಲ್ಕಿ ಪಟ್ಟಣ ಪಂಚಾಯತ್ ಜೂನಿಯರ್ ಇಂಜಿನಿಯರ್ ಎನ್ ಕೆ ಪದ್ಮನಾಭ ಅವರು ಆದಾಯದ ಮೂಲಕ್ಕೆ ಮೀರಿದ ಆಸ್ತಿ ಗಳಿಕೆ ಆರೋಪದಲ್ಲಿ ಅಪರಾಧಿ ಎಂದು ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಿ ಬಿ ಜಕಾತಿ ಘೋಷಿಸಿ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದಾರೆ.
ಪದ್ಮನಾಭ ಅವರಿಗೆ ನ್ಯಾಯಾಲಯ 26.5 ಲಕ್ಷ ರೂಪಾಯಿ ದಂಡ ವಿಧಿಸಿದೆ. ದಂಡ ಪಾವತಿಸಲು ವಿಫಲವಾದರೆ ಆರು ತಿಂಗಳ ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ನ್ಯಾಯಾಧೀಶ ಜಕಾತಿ ತಿಳಿಸಿದ್ದಾರೆ.
ಪದ್ಮನಾಭ ಅವರು 2015ರಲ್ಲಿ ಆಸ್ತಿ ಗಳಿಕೆ ಮಾಡಿರುವ ಬಗ್ಗೆ ಲೋಕಾಯುಕ್ತ ಪೊಲೀಸರಿಗೆ ದೂರು ಬಂದಿದ್ದು, ಅದರಂತೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ಭ್ರಷ್ಟಾಚಾರ ತಡೆ ಕಾಯ್ದೆ 1988 ಕಲಂ 13 (1) (ಇ) ಮತ್ತು 13 (2) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. ) ಲೋಕಾಯುಕ್ತ ಪೊಲೀಸ್ ಇನ್ಸ್‌ಪೆಕ್ಟರ್ ನವೀನಚಂದ್ರ ಜೋಗಿ ಅವರು ತನಿಖೆ ನಡೆಸಿದ್ದು, ಇನ್ಸ್‌ಪೆಕ್ಟರ್ ಭಾರತಿ ಜಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.


Share