ಈ ಶುಕ್ರವಾರ ಶುಗರ್‌ಲೆಸ್ -ಚಿತ್ರ ಬಿಡುಗಡೆ

167
Share

ಈ ಶುಕ್ರವಾರ ಶುಗರ್‌ಲೆಸ್

‌‌‌‌‌‌ಸಕ್ಕರೆ ಖಾಯಿಲೆ ಬಗ್ಗೆ ಜನರಲ್ಲಿರುವ ಕಲ್ಪನೆಯನ್ನು ‌ಹಾಸ್ಯಮಿಶ್ರಿತ ಕಥಾ ಹಂದರದೊಂದಿಗೆ ಹೇಳುವ ಚಿತ್ರ ಶುಗರ್‌ಲೆಸ್. ಡಾಟರ್ ಆಫ್‌ಪಾರ್ವತಮ್ಮ ನಿರ್ಮಾಪಕ ಶಶಿಧರ ಕೆ.ಎಂ. ಅವರು ಮೊದಲಬಾರಿಗೆ ನಿರ್ದೇಶನ ಮಾಡಿರುವ ಈ ಚಿತ್ರ ಜು.8ರ ಶುಕ್ರವಾರ ರಾಜ್ಯ ಅಲ್ಲದೆ ವಿದೇಶಗಳಲ್ಲೂ ಸಹ‌ ಬಿಡುಗಡೆಯಾಗಲಿದೆ. ಇತ್ತೀಚೆಗಷ್ಟೇ ಈ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಚಿತ್ರದ ಕಂಟೆಟ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಯಾವುದೇ ಕಡಿತ ಮತ್ತು ಮ್ಯೂಟ್ ಇಲ್ಲದೆ ಯು ಪ್ರಮಾಣ ಪತ್ರ ನೀಡಿದೆ.
ಚಿತ್ರದ ಕಥೆ, ಚಿತ್ರಕಥೆ ಬರೆದು ನಿರ್ದೇಶನದ ಜೊತೆಗೆ ನಿರ್ಮಾಣದ ಜವಬ್ದಾರಿಯನ್ನೂ ಸಹ ಶಶಿಧರ್ ಕೆ.ಎಂ. ಅವರೇ ಹೊತ್ತಿದ್ದಾರೆ. ಚಿತ್ರದ ಸಹ ನಿರ್ಮಾಪಕರಾಗಿ ವಿಜಯಲಕ್ಷ್ಮಿ ಕೃಷ್ಣೇಗೌಡ ಸಾತ್ ನೀಡಿದ್ದಾರೆ. ತನ್ನ ಶೀರ್ಷಿಕೆಯ ಮೂಲಕವೇ ಕುತೂಹಲ ಮೂಡಿಸಿರುವ ಈ ಚಿತ್ರದಲ್ಲಿ ಸಕ್ಕರೆ ಖಾಯಿಲೆ ಬಗ್ಗೆ ಸಮಾಜಕ್ಕೆ ಅತ್ಯವಶ್ಯವಾಗಿ ಬೇಕಾಗಿರುವ ಉತ್ತಮ ಸಂದೇಶವವನ್ನು ಹೇಳಲಾಗಿದೆ.
ಶಶಿಧರ್ ಸ್ಟುಡಿಯೋಸ್ ಪ್ರೊಡಕ್ಷನ್ ಮೂಲಕ ದಿವ್ಯ ಶಶಿಧರ್ ಅವರು ನಿರ್ಮಿಸಿರುವ
ಶುಗರ್‌ಲೆಸ್ ಚಿತ್ರಕ್ಕೆ ಲವಿತ್ ಅವರ ಛಾಯಾಗ್ರಹಣ, ಅನೂಪ್ ಸೀಳನ್ ಅವರ ಸಂಗೀತ ಸಂಯೋಜನೆ ಇದ್ದು, ಡಾ|| ವಿ. ನಾಗೇಂದ್ರಪ್ರಸಾದ್ ಸಾಹಿತ್ಯ ರಚಿಸಿದ್ದಾರೆ. ಗುರು ಕಶ್ಯಪ್ ಚಿತ್ರದ ಸಂಭಾಷಣೆಗಳನ್ನು ಹೆಣೆದಿದ್ದಾರೆ. ಚಿತ್ರದ ಸಂಕಲನ ರವಿಚಂದ್ರನ್, ನೃತ್ಯ‌ ಸಂಯೋಜನೆ ಮುರಳಿ ಮಾಸ್ಟರ್, ಕಲೆ ವಿನ್ಯಾಸ ರೂಪೇಂದ್ರ ಆಚಾರ್ ಅವರದಾಗಿದೆ. ಈ ಚಿತ್ರಕ್ಕೆ ಕರ್ನಾಟಕದಾದ್ಯಂತ ನಲವತೈದು ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ, ಪೃಥ್ವಿ ಅಂಬಾರ್ ಚಿತ್ರದ ನಾಯಕನಾಗಿದ್ದು, ಬಿಗ್ಬಾಸ್‌ನ ಪ್ರಿಯಾಂಕ ತಿಮ್ಮೇಶ್ ನಾಯಕಿ ಪಾತ್ರ ನಿರ್ವಹಿಸಿದ್ದಾರೆ. ಉಳಿದಂತೆ ಹಿರಿಯ ನಿರ್ದೇಶಕರಾದ
ಎಸ್. ನಾರಾಯಣ್ ಅವರು ಡಾಕ್ಟರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಘು ರಾಮನಕೊಪ್ಪ, ಧರ್ಮಣ್ಣ ಕಡೂರ್, ನವೀನ್ ಡಿ.ಪಡೀಲ್, ಗಿರೀಶ್ ಜತ್ತಿ, ಹೊನ್ನವಳ್ಳಿ ಕೃಷ್ಣ, ಮಾಲತಿ ಮುಂತಾದವರು ಅಭಿನಯಿಸಿದ್ದಾರೆ.
ಎಲ್ಲರಿಗೂ ತಿಳಿದಿರುವಂತೆ ಸಕ್ಕರೆ ಖಾಯಿಲೆ ಬಂದರೂ ಅದನ್ನು ನಿಗ್ರಹಿಸಿ ಹೇಗೆ ಸುಖ ಜೀವನ ನಡೆಸಬಹುದು ಎಂದು ಈ ಚಿತ್ರದ ಮೂಲಕ ಹೇಳಲಾಗಿದೆ.ಪ್ರಪಂಚದಲ್ಲಿ ಬಹುತೇಕ ಸಂಖ್ಯೆಯ ಮಧುಮೇಹಿಗಳಿದ್ದಾರೆ. ಆದರೆ, ಅದನ್ನು ಆಧರಿಸಿ ಈವರೆಗೆ ಯಾವುದೇ ಸಿನಿಮಾ ನಿರ್ಮಾಣವಾಗಿ ತೆರೆಗೆ ಬಂದಿಲ್ಲ. ಅಲ್ಲದೆ, ಯಾವಾಗಲೂ ಕಂಟೆಂಟ್ ಚಲನಚಿತ್ರಗಳನ್ನು ಬೆಂಬಲಿಸುವ ಪ್ರೇಕ್ಷಕರಿಗೆ ಶುಗರ್‌ಲೆಸ್ ಸಿನಿಮಾ ಖಂಡಿತ ಇಷ್ಟವಾಗುತ್ತದೆ ಎಂದು ಚಿತ್ರತಂಡ ಹೇಳಿದೆ. ಈ ಕುರುತಂತೆ ಮೈಸೂರಿನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಚಿತ್ರತಂಡ ವಿವರಿಸಿತು.


Share