ಎಂಪಿ, ಅಡಿಗೆಮನೆ: ☘️ ?ದಿಡೀರ್ ಪೇಪರ್ ಮೆದು ಅವಲಕ್ಕಿ?️☘️ ಇಂದಿನ ತೀಮ್ : ದಿಡೀರ್ ಅಡುಗೆ

744
Share

☘️ ?ದಿಡೀರ್ ಪೇಪರ್ ಮೆದು ಅವಲಕ್ಕಿ?️☘️
ಇಂದಿನ ತೀಮ್ : ದಿಡೀರ್ ಅಡುಗೆ

ಇಂದಿನ ಯುಗವೇ ವೇಗದ ಯುಗ…ಎಲ್ಲವೂ ತ್ವರಿತ ಗತಿಯಲ್ಲಿ ಆಗಬೇಕು… ಅದರಲ್ಲೂ ಅಡಿಗೆ ವಿಷಯದಲ್ಲಿ ಕುಕ್ಕರ ಕೂಗಬೇಕು …ಆರಬೇಕು..ನಂತರ ಕುದಿಯಬೇಕು.. ಇವೆಲ್ಲಕ್ಕೂ ಸಹಜವಾಗಿ ನಿಯಮಿತ ಕಾಲಾವಕಾಶ ಬೇಕು ….ಆದರೆ ನೂಡಲ್ಸ್..ರೆಡಿ ಚಪಾತಿ…ರೆಡಿ ಮಿಕ್ಸ್ ಇವೆಲ್ಲಾ ಲಭ್ಯವಾಗಲು ಪ್ರಾರಂಭ ವಾದಮೇಲೆ ಅಡುಗೆ ಮಾಡುವ ಸಮಯ ಕಡಿಮೆ ಆಗುತ್ತಿದೆ….
ನಾನು ಪ್ರಸ್ತುತ ಪಡಿಸುತ್ತಿರುವುದು ಮಾರುಕಟ್ಟೆಯಲ್ಲಿ ದೊರೆಯುವ ಸಾಮಾನ್ಯ ಪದಾರ್ತಗಳಿನ್ಡ..⬇️

ಹೀಗೆ ಮಾಡಿ : 1/4ಕೆ ಜಿ ತೆಳು/ಪೇಪರ್ ಅವಲಕ್ಕಿ ಶೋದಿಸಿಕೊಳ್ಲಿ …1/4ಬಟ್ಟಲು ತೆಂಗಿನತುರಿ,ಯೆತೆಚ್ಚವಾಗಿ ಕತ್ತರಿಸಿದ ಕೊತಂಬರಿ, 2ನಿಂಬೆ ಹಣ್ಣು ಕತ್ತರಿಸಿ ಇಟ್ಟುಕೊಳ್ಳಿ….ಸ್ವಲ್ಪ ಕಡಲೆಕಾಯಿ ಬೀಜ, ಸಾಸ್ವೆ,ಕ ಬೇಳೆ,ಉ ಬೇಳೆ,ಜೀರಿಗೆ,ಹಸಿ ಮೆಣಸಿನಕಾಯಿ,ಕರಿಬೇವು,ಅರಿಶಿನ ಒಗ್ಗರಣೆ ಮಾಡಿ…. ಶೋಧಿಸಿದ ಅವಲಕ್ಕಿಗೆ ಒಗ್ಗರಣೆ,ತೆಂಗಿನಕಾಯಿತುರಿ,ಕೊತಂಬರಿ,ನಿಂಬೆರಸ,1ಇಂಚು ತುರಿದ ಶುಣ್ಟಿ, ಉಪ್ಪು,ಚಿಟುಗೆ ಹಿಂಗು ಸೇರಿಸಿ ಹಿಸುಕಿ-ಹಿಸುಕಿ ಕಲಸಿ…. ಕಲಸುವಾಗ ಗಟ್ಟಿಯಾಗಿರುತ್ತೆ…ತೆಂಗಿನಕಾಯಿ ರಸ,ಕೊತಂಬರಿ,ಶುಣ್ಟಿ ತೇವ ಮತ್ತು ನಿಬೆರಸದ ಬೆರಕೆಯಿಂದ ಶೀಘ್ರವಾಗಿ ಮೆತ್ತಗಾಗುತ್ತೆ..ಮೆದು ಅವಲಕ್ಕಿ ರೆಡಿ…
ವಿ ಸೂ:ಯಾವುದೆ ಕಾರಣಕ್ಕೆ ನೀರು ಸೇರಿಸಬಾರದು
ಪ್ರಯಾಣಕ್ಕೆ ಲಾಯಕ್ಕಾದ ತಿಂಡಿ .. ಎರಡು ದಿನದ ವರೆಗೆ ಕಾಯ್ದುಕೊಳ್ಳ್ಬಹುದು.. ಮೊಸರು ಜೊತೆ ಬಲು ರುಚಿ ..
ತಯಾರಿಕೆ ಸಮಯ: ಕೇವಲ 10ನಿಮಿಷ…ಯಾವುದೆ ಪದಾರ್ಥ ಬೇಯಿಸುವ ,ಕುದಿಸುವ ಅವಶ್ಯಕತೆ ಇಲ್ಲ … ಮಾಡಿ … ಅನುಭವ ಶೇರ್ ಮಾಡಿ.

ಶ್ರೀಯುತ ಪ್ರಭಾಕರ ಮೂರ್ತಿ ನಿವೃತ್ತ ಕೆನರಾ ಬ್ಯಾಂಕ್ ವ್ಯವಸ್ಥಾಪಕರು.


Share