ಎಂಪಿ ಅಡಿಗೆಮನೆ; ?ಸಿಹಿ ಕುಂಬಳ ಹಲ್ವ?

793
Share

?ಸಿಹಿ ಕುಂಬಳ ಹಲ್ವ?

ಮಾಡುವುದು ಸುಲಭ…ಉತ್ಕೃಷ್ಟವಾದ ರುಚಿ..

ಹೀಗೆ ಮಾಡಿ :1/2ಕೆ ಜಿ ಸಿಹಿ ಕುಂಬಳಕಾಯಿ ಸಿಪ್ಪೆ ತೆಗೆದು ಮೀಡಿ ಯಂ ರಂದ್ರದ ತುರಿ ಮಣೆ ಇಂದ ತುರಿದು 1ಟೇಬಲ್ ಚಮಚ ದೇಸಿ ತುಪ್ಪ ಹಾಕಿ ಮಂದ ಉರಿಯಲ್ಲಿ ಹಸಿ ವಾಸನೆ ಹೋಗುವ ತನಕ ಹುರಿಯಿರಿ…ತುರಿಯೆಲ್ಲ ಹೊಂದಿ ಕೊಂಡು ಮುದ್ದೆ ಆಗುತ್ತೆ…ಸುಮಾರು 200ಗ್ರಾಂ ಬೆಲ್ಲ ಪುಡಿ ಮಾಡಿ, ಹುರಿದ ತುರಿಗೆ ಸೇರಿಸಿ ಕೈ ಆಡಿಸುತ್ತಿರಿ…ಬೆಲ್ಲ ಕರಗಿ ಮತ್ತೆ ಗಟ್ಟಿಯಾಗುತ್ತೆ …ಈಗ ಇಂಗಿಸಿದ ಹಾಲು ಅಥವ ಸಪ್ಪೆ ಕೋವ 100ಗ್ರಾಂ ಹಾಕಿ ಸ್ವಲ್ಪ ಸಮಯ ಕೈ ಆಡಿಸುತ್ತಿರಿ….ತಳ ಬಿಡಲು ಶುರುವಾಗಿ ತುಪ್ಪ ಜಿನುಗುತ್ತೆ … ಈಗ ಉರಿ ಆರಿಸಿ ತುಪ್ಪದಲ್ಲಿ ಒಗ್ಗರಣೆ ಮಾಡಿದ ಗೋಡಂಬಿ,ಬಾದಾಮಿ,ದ್ರಾಕ್ಷಿ ಹಾಕಿ ಅಲಂಕರಿಸಿ…ಬಲು ರುಚಿಯಾದ ಸಿಹಿ ಕುಂಬಳ ಹಲ್ವ ರೆಡಿ…ಮಾಡಿ ತಿನ್ನಿ…ರುಚಿಯನ್ನು ಶೇರ್ ಮಾಡಿ?


Share