ಎಂಪಿ ಅಡುಗೆಮನೆ:??ಹಯಗ್ರೀವ:Hayagriva?? ತಯಾರು ಮಾಡುವ ವಿಧಾನ :

871
Share

??ಹಯಗ್ರೀವ:::Hayagriva??
ತಯಾರು ಮಾಡುವ ವಿಧಾನ :
1/4Kg ಕಡಲೆಬೇಳೆ ಒಂದು ಗಂಟೆ ಕಾಲ ನೆನೆಸಿ…20ಗ್ರಾಂ ಗಸಗಸೆಯನ್ನು ಗಂ ಅನ್ನುವ ತನಕ ಹದವಾಗಿ ಹುರಿಯಿರಿ…ಸ್ವಲ್ಪ ಕೆಂಪಾದ ನಂತರ 1ಬಟ್ಟಲು ತುರಿದ ಒಣಕೊಬ್ಬರಿಯನ್ನು ಜೊತೆಗೆ ಹುರಿದು ಇಡಿ.. ಸ್ವಲ್ಪ ತುಪ್ಪದಲ್ಲಿ ತುಂಡರಿಸಿದ ಗೋಡಂಬಿ,ಬಾದಾಮಿ ಮತ್ತು ಒಣ ದ್ರಾಕ್ಷಿಯನ್ನು ಕೆಂಪಗೆ ಹುರಿದು ಪ್ರತ್ಯೇಕವಾಗಿ ಇಡಿ…ನೆನೆಸಿದ ಬೇಳೆ ಯನ್ನು ಶೊದಿಸಿಕೊಳ್ಳಿ…ಒಂದು ಬಾಣಲಿಯಲ್ಲಿ ಹಾಕಿ ಮದ್ಯಮ ಉರಿಯಲ್ಲಿ ಹುರಿಯಿರಿ….1/4kg ಪುಡಿ ಬೆಲ್ಲವನ್ನು ಸೇರಿಸಿ….ಮಿಶ್ರಣವು ನೀರೊಡೆದು ನಂತರ ಗಟ್ಟಿ ಆಗುತ್ತೆ…ಈಗ ಹುರಿದ ಗಸಗಸೆ ಕೊಬರಿ ಮಿಶ್ರಣ ವನ್ನು ಬೇಳೆ ಮಿಶ್ರಣಕ್ಕೆ ಹಾಕಿ ಕೈ ಆಡಿಸುತ್ತ ಸ್ವಲ್ಪ ತುಪ್ಪ ಸೇರಿಸಿ.. ಮಿಶ್ರಣ ತಳ ಬಿಡಲು ಶುರುವಾದಾಗ 1ಚಮಚ ಪುಡಿ ಏಲಕ್ಕಿಹಾಕಿ ಉರಿ ಆರಿಸಿ …ಒಣ ಹಣ್ಣುಗಳ ಒಗ್ಗರಣೆ ಹಾಕಿ ಮಿಶ್ರಣವನ್ನು ಒಂದು ಗೂಡಿಸಿ ಮುಚ್ಚಲ ಮುಚ್ಚಿ….?ರುಚಿ ರುಚಿ ಆದ ಹಯಗ್ರೀವ ರೆಡಿ….ಮಾಡಿ ಎಲ್ಲರಿಗೂ ಹಂಚಿ ನೀವೂ ತಿನ್ನಿ .. ಅನುಭವ ಶೇರ್ ಮಾಡಿ.

ಪ್ರಭಾಕರ ಮೂರ್ತಿ ನಿವೃತ್ತ ಕೆನರಾ ಬ್ಯಾಂಕ್ ವ್ಯವಸ್ಥಾಪಕರು


Share