ಎಂಪಿ ಕವನ ಸಂಗ್ರಹ-ಯುಗ ಯುಗಾದಿ ಕಳೆದರೂ………! ರಾಮ್

208
Share

 

*ಯುಗ ಯುಗಾದಿ ಕಳೆದರೂ………!*

ಹೊಸ ವರುಷ,
ತರಲಿ ಹರುಷ
ತೊಡೆದು ಎಲ್ಲಾ ಕಲ್ಮಶ
ಸ್ವಚ್ಚಗೊಳಿಸಲಿ ಮನಸ.

*ಮನತುಂಬಿ ಹಾರೈಸುವೆ*

ಸಾಕಾರವಾಗಲಿ ಕನಸುಗಳು,
ಈಡೇರಲಿ ಎಲ್ಲಾ ಬಯಕೆಗಳು
ಒಂದಾಗಲಿ ಮನಸುಗಳು,
ದೂರವಾಗಲಿ ಜಾತಿ ಮತ ಧರ್ಮ ಭೇದಗಳು.

*ಮನತುಂಬಿ ಹಾರೈಸುವೆ*

ಸುಗಮವಾಗಿರಲಿ ಸಾಗುವ ದಾರಿ,
ಬದಲಾಗಲಿ ಬದುಕಿನ ಪರಿ
ಪ್ರಯತ್ನಿಸಿ ಶಕ್ತಿ ಮೀರಿ,
ತಲುಪುವಿರಿ ನಿಮ್ಮ ಗುರಿ.

*ಮನತುಂಬಿ ಹಾರೈಸುವೆ*

ಬದುಕು ಒಂದು ಕನ್ನಡಿ,
ಬೇಡ ಯಾವುದೇ ಗಡಿಬಿಡಿ
ಹೊರಗಣ್ಣನ್ನು ಮುಚ್ಚಿರಿ
ಒಳಗಣ್ಣನ್ನು ತೆರೆಯಿರಿ.

*ಮನತುಂಬಿ ಹಾರೈಸುವೆ*

ಇರುವುದೊಂದೆ ಜೀವನ ಎಂಜಾಯ್ ಮಾಡಿ,
ರಾಗ ದ್ವೇಷವ ಸುಡಿ
ಶತೃಗಳಾಗಲಿ ಮಿತ್ರರು
ದ್ವೇಷಿಸುವವರಾಗಲಿ ಆತ್ಮೀಯರು.

*ಮನತುಂಬಿ ಹಾರೈಸುವೆ*

ಆತ್ಮೀಯತೆ ಬೆಳೆಯಲಿ
ಅಂಧವಿಶ್ವಾಸ ಅಳಿಯಲಿ
ಹಳೆಯ ನೋವೆಲ್ಲಾ ದೂರಾಗಲಿ
ಹೊಸತನದ ನಲಿವು ಬರಲಿ.

*ಕ್ರೋಧಿ ನಾಮ ಸಂವತ್ಸರದಲ್ಲಿ ನಿಮಗೆ ಹೊಸ ಚೈತನ್ಯ, ಸುಖ, ಶಾಂತಿ, ಸಮೃದ್ದಿ, ನೆಮ್ಮದಿ ಸಿಗಲಿ. ಯುಗಾದಿ‌ ಹಬ್ಬದ ಶುಭಾಶಯಗಳು*

*ರಾಮ್ ಮೈಸೂರು*


Share