ಕೊಲೆ ಯತ್ನ :ಶ್ರೀಲಂಕಾ ಕ್ರಿಕೆಟಿಗ ಗುಣತಿಲಕ 14ವರ್ಷ ಜೈಲು ?

179
Share

31ವರ್ಷದ ಶ್ರೀಲಂಕಾ ಕ್ರಿಕೆಟಿಗ ದನುಷ್ಕ ಗುಣತಿಲಕ ಆಸ್ಟ್ರೇಲಿಯಾದ ಸಿಡ್ನಿಯ ರೋಸ್ ನಿವಾಸದಲ್ಲಿ ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಆಕೆಯನ್ನು ಕತ್ತು ಹಿಸುಕಿ ಸಾಯಿಸುವ ಯತ್ನ ಮಾಡಿದನೆಂದು ಆರೋಪಿಸಲಾಗಿದೆ.
ಕಳೆದ ನವೆಂಬರ್ ಎರಡರಂದು ಟಿ ಟ್ವೆಂಟಿ ವಿಶ್ವಕಪ್ ನಲ್ಲಿ ಭಾಗವಹಿಸಿದ್ದ ಈ ಶ್ರೀಲಂಕಾ ತಂಡದ ಆಟಗಾರನ ಜೊತೆ ಡೇಟಿಂಗಿಗೆ ತೆರಳಿದ್ದ ಮಹಿಳೆ ತನ್ನ ವಿರುದ್ಧ 4 ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆಂದು ಪೋಲೀಸರಿಗೆ ದೂರು ನೀಡಿದ್ದಾಳೆಂದು ಹೇಳಲಾಗಿದೆ.
ಇದೀಗ ಸಿಡ್ನಿ ಪೊಲೀಸರು ಶ್ರೀಲಂಕಾ ತಂಡ ತಂಗಿದ್ದ ಹೋಟೆಲ್ ನಲ್ಲಿ ಗುಣತಿಲಕ ನನ್ನು ಬಂಧಿಸಿದ್ದಾರೆ ಎಂದು ಹೇಳಲಾಗಿದೆ .
ಈ ಬಗ್ಗೆ ತೀವ್ರವಾಗಿ ವಿಚಾರಣೆ ನಡೆಯುತ್ತಿದ್ದು ಮುಂದಿನ ವಿಚಾರಣೆ ನ12 ರಂದು ನಿಗದಿಯಾಗಿದೆ.
ಶ್ರೀಲಂಕಾದ ಎಡಗೈ ಬ್ಯಾಟ್ಸ್ ಮನ್ ಆಗಿರುವ ಗುಣತಿಲಕ ನ ‘ ಗುಣ’ ಸಾಬೀತಾದರೆ ಆಸ್ಟ್ರೇಲಿಯಾ ನಿಯಮಾವಳಿ ಪ್ರಕಾರ 14 ವರ್ಷ ಶಿಕ್ಷೆ ಆಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ .
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಶ್ರೀಲಂಕಾ ಕ್ರಿಕೆಟ್ ಮಂಡಳಿ ಈ ಆಟಗಾರರನ್ನು ಎಲ್ಲಾ ಮಾದರಿಯ ಕ್ರಿಕೆಟ್ ನಿಂದ ಅಮಾನತು ಪಡಿಸಿದೆ ಎಂದು ಹೇಳಲಾಗಿದೆ.


Share