ಯಶವಂತಪುರ ಮಂಗಳೂರು ರೈಲಿನಲ್ಲಿ 3 ಲಕ್ಷ ಮೌಲ್ಯದ ಗಾಂಜ ಪತ್ತೆ

43
Share

ಎಕ್ಸ್‌ಪ್ರೆಸ್ ರೈಲಿನ ಜನರಲ್ ಕೋಚ್‌ನಲ್ಲಿ ಗಾಂಜಾ ಇರುವ ಲಗೇಜ್ ಒಂದು ಪತ್ತೆಯಾಗಿದೆ. ಅದರ ಮಾಲೀಕತ್ವವನ್ನು ಯಾರೂ ಹೇಳಿಕೊಳ್ಳದ ಕಾರಣ, ಆರ್‌ಪಿಎಫ್ ಸಿಬ್ಬಂದಿ ಬ್ಯಾಗ್ ಅನ್ನು ವಶಪಡಿಸಿಕೊಂಡಿರುವ ಘಟನೆ ವರದಿಯಾಗಿದೆ. ಅದರಲ್ಲಿ ನಿಷೇಧಿತ ಮದ್ದು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿ ರೈಲಿನಲ್ಲಿ ಸಾಗಿಸುತ್ತಿದ್ದ 3.16 ಲಕ್ಷ ಮೌಲ್ಯದ 6.33 ಕೆಜಿ ಒಣ ಗಾಂಜಾವನ್ನು ರೈಲ್ವೇ ರಕ್ಷಣಾ ಪಡೆ (ಆರ್‌ಪಿಎಫ್) ವಶಪಡಿಸಿಕೊಂಡಿದೆ.
ಕಾರವಾರ-ಯಶವಂತಪುರ ಎಕ್ಸ್‌ಪ್ರೆಸ್ ರೈಲಿನಿಂದ ಗುರುವಾರ ವಶಪಡಿಸಿಕೊಳ್ಳಲಾಗಿದ್ದು, ಪಾಲಕ್ಕಾಡ್ ರೈಲ್ವೆ ವಿಭಾಗದ ಅಪರಾಧ ತನಿಖಾ ದಳ ಮತ್ತು ರಾಜ್ಯ ಅಬಕಾರಿ ಇಲಾಖೆಯೊಂದಿಗೆ ಆರ್‌ಪಿಎಫ್ ತಂಡವು ಸ್ವಾತಂತ್ರ್ಯ ದಿನಾಚರಣೆಗೆ ಮುನ್ನ ರೈಲುಗಳನ್ನು ತಪಾಸಣೆ ನಡೆಸುತ್ತಿತ್ತು ಎಂದು ಇಲ್ಲಿ ಪ್ರಕಟಣೆ ತಿಳಿಸಿದೆ.
ಅಕ್ರಮ ವಸ್ತುಗಳನ್ನು ಅಬಕಾರಿ ಇಲಾಖೆಗೆ ಹಸ್ತಾಂತರಿಸಲಾಗಿದೆ. ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟೆನ್ಸ್ (ಎನ್‌ಡಿಪಿಎಸ್) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.


Share