ಚಂದ್ರಯಾನ 3 : ‘ ವಿಕ್ರಮ’ನ ವಿಜಯ – ಚಂದ್ರನ ಸ್ಪರ್ಶಿಸಿದ ಭಾರತ

27
Share

ಪ್ರಪಂಚವೆ ಕಾತರದಿಂದ ಕಾಯುತ್ತಿದ್ದ ಚಂದ್ರಯಾನ – 3 ‘ ವಿಕ್ರಮ ‘ ISRO ನಿರೀಕ್ಷಯಂತೆ ಇಂದು ಸಂಜೆ 6 – 04 ನಿಮಿಷಕ್ಕೆ ಸರಿಯಾಗಿ ಚಂದ್ರನ ಮೇಲೆ ಯಾವುದೇ ತೊಂದರೆ ಇಲ್ಲದೆ ಸುರಕ್ಷಿತವಾಗಿ ಸಾಫ್ಟ್ ಲ್ಯಾಂಡಿಂಗ್ ಆಗಿದೆ.
ದೇಶದಾದ್ಯಂತ ಈ ಯಶಸ್ಸಿಗಾಗಿ ಪೂಜೆ ಪುನಸ್ಕಾರಗಳು ನಡೆಯುತ್ತಿದ್ದದ್ದನ್ನು ಸ್ಮರಿಸಬಹುದು.
ಭಾರತದ ವಿಜ್ಞಾನಿಗಳಿಗೆ ಇದು ಅವಿಸ್ಮರಣೀಯ ಕ್ಷಣ ಎಂದು ಹೇಳಬಹುದು.
ಚಂದ್ರಯಾನ-3 ಜುಲೈ 14, 2023 ರಂದು ಶ್ರೀಹರಿಕೋಟಾದಿಂದ ಉಡಾವಣೆಯಾಗಿತ್ತು. ಬಾಹ್ಯಾಕಾಶ ನೌಕೆಯು ಲ್ಯಾಂಡರ್ ಮತ್ತು ರೋವರ್ ಅನ್ನು ಒಳಗೊಂಡಿದೆ. ಲ್ಯಾಂಡರ್ ಚಂದ್ರನ ಮೇಲೆ ಸ್ಪರ್ಶಿಸಲು ಪ್ರಯತ್ನಿಸುತ್ತದೆ ಮತ್ತು ನಂತರ ಆಗಸ್ಟ್ 23 ರಂದು ರೋವರ್ ಅನ್ನು ನಿಯೋಜಿಸಲಾಗುತ್ತದೆ.


Share