ಜಂತುಹುಳು ನಿವಾರಣಾ ಕಾರ್ಯಕ್ರಮ.

1437
Share

ಕರ್ನಾಟಕ ಸರ್ಕಾರ ಜಿಲ್ಲಾ ಆರೋಗ್ಯ ,ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮ ದೇಶದ್ಯಾಂತ ದಿನಾಂಕ : 07-09-2020 ರಿಂದ 21-09-2020ರ ವರೆಗೆ ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ . ಸದರಿ ಕಾರ್ಯಕ್ರಮದಲ್ಲಿ 1 ರಿಂದ 19 ವರ್ಷದೊಳಗಿನ ಎಲ್ಲಾ ಮಕ್ಕಳನ್ನು ಗುರಿಯಾಗಿರಿಸಿಕೊಳ್ಳಲಾಗಿದ್ದು , ಕೋವಿಡ್ -19 ಮಾರ್ಗಸೂಚಿಯನ್ವಯ ಶಾಲೆಗಳು ತೆರೆಯದ ಇರುವುದರಿಂದ ಮೇಲ್ಕಾಣಿಸಿದ ಅಂದರ 1 ರಿಂದ 19 ವರ್ಷದೊಳಗಿನ ಮಕ್ಕಳಿಗೆ ಆಶ್ಚಂಡಾಜೋಲ್ ಮಾತ್ರೆಯನ್ನು ಮನೆ ಮನೆಗೆ ತಲುಪಿಸುವ ವ್ಯವಸ್ಥೆಯನ್ನು ಆರೋಗ್ಯ ಕಾರ್ಯಕರ್ತೆಯರು , ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಹಮ್ಮಿಕೊಳ್ಳಲಾಗಿರುತ್ತದೆ ಎಂದು ತಿಳಿಸುತ್ತಾ , ಈ ಖಾಯಿಲೆಯು ಜಂತುಹುಳು ಎಂಬ ಪರಾವಲಂಬಿ ಹುಳುವಿನ ಸೋಂಕಿನಿಂದ ಹರಡುತ್ತದೆ . . . ಜಂತುಹುಳು ಸೋಂಕು ಹರಡುವ ವಿಧಾನಗಳು : ಕಳಪೆ ನೈರ್ಮಲ್ಯ ಮತ್ತು ಕೊಳಕು ಸ್ಥಿತಿ ಹಾಗೂ ಮಣ್ಣಿನ ಸಂಪರ್ಕದಿಂದ ಹರಡುತ್ತದೆ . ಈ ರೋಗಲಕ್ಷಣವು ಸಾಮಾನ್ಯವಾಗಿ ಮಕ್ಕಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತದೆ . ಜಂತುಹುಳು ಸೋಂಕಿನಿಂದ ವ್ಯಕ್ತಿಯ ಪೌಷ್ಟಿಕತೆಯ ಮೇಲಾಗುವ ಪರಿಣಾಮಗಳು : ಜಂತುಹುಳುಗಳು ವಿಟಮಿನ್ ‘ ಎ ‘ ಕೊರತೆಯೊಂದಿಗೆ ರಕ್ತಹೀನತೆಗೆ ಕಾರಣವಾಗುವುದರ ಜೊತೆಗೆ ಅಪೌಷ್ಠಿಕತೆ ಹಾಗೂ ವ್ಯಕ್ತಿಯ ಭೌದ್ಧಿಕ ಮತ್ತು ದೇಹದ ಬೆಳವಣಿಗೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ . ಜಂತುಹುಳು ಸೋಂಕಿನಿಂದಾಗಿ ಮಕ್ಕಳು ಆಗಾಗ ಕಾಯಿಲೆ ಬೀಳುವ ಹಾಗೂ ಶಾಲೆಯಲ್ಲಿ ಗಮನ ಕೇಂದ್ರೀಕರಿಸಲು ಅಸಮರ್ಥರಾಗುವುದರ ಜೊತೆಗೆ ಮಕ್ಕಳ ಶಿಕ್ಷಣ ಮತ್ತು ದೀರ್ಘಾವಾದ ಉತ್ಪಾದಕತೆಯ ಮೇಲೆ ದುಷ್ಪರಿಣಾಮ ಬೀರುತ್ತದೆ . ಜಂತುಹುಳು ಸೋಂಕಿನಿಂದಾಗಿ , ಮಕ್ಕಳ ದೈಹಿಕ ಬೆಳವಣಿಗೆ ಹಾಗೂ ಮಾನಸಿಕ ಅರಿವಿನ ಬೆಳವಣಿಗೆಯ ಮೇಲೆ ನಕರಾತ್ಮಕವಾಗಿ ಪರಿಣಾಮ ಬೀರುತ್ತದೆ . ಅವರ ತಾರುಣ್ಯಾವಸ್ತೆಯಲ್ಲಿ ಲಸದ ಸಾಮರ್ಥ್ಯ ಮತ್ತು ವೇತನಗಳ ಮೇಲೆ ಋಣಾತ್ಮಕ ಪರಿಣಾಮಗಳನ್ನು ಬೀರುತ್ತದೆ . . . ಜಂತುಹುಳು ಸೋಂಕಿನ ನಿವಾರಣೋಪಾಯಗಳು ಕೈಗಳ ಉಗುರುಗಳನ್ನು ಚಿಕ್ಕದಾಗಿ ಮತ್ತು ಸ್ವಚ್ಛವಾಗಿಡುವುದು . • ಮನೆಯ ಸುತ್ತ ನೈರ್ಮಲ್ಯ ಕಾಪಾಡುವುದರೊಂದಿಗೆ ಶುದ್ಧ ನೀರಿನ ಸೇವನೆ ಹಾಗೂ ಮುಚ್ಚಿಟ್ಟ ಆಹಾರ ಬಳಕೆ ಮಾಡುವುದು . ಹಣ್ಣು ಮತ್ತು ತರಕಾರಿಗಳನ್ನು ಶುದ್ಧ ನೀರಿನಿಂದ ತೊಳೆದು ಬಳಸುವುದು . ಶೌಚಾಲಯದ ಬಳಿಕ ಕೈಗಳನ್ನು ಸಾಬೂನಿಂದ ತೊಳೆಯುವುದು ಮತ್ತು ಪಾದರಕ್ಷೆಗಳನ್ನು ಉಪಯೋಗಿಸುವುದು .ಚಿಕಿತ್ಸೆ ವಿಧಾನ : ಜಂತಹುಳು ನಿವಾರಣಾ ಮಾತ್ರ ( ಅಲ್ಬಂಡಾಜೋಲ್ -400 ಎಮ್.ಜಿ ಉಚಿತವಾಗಿ ದೊರೆಯುತ್ತದೆ ) 1-2 ವರ್ಷದ ಮಕ್ಕಳಿಗೆ 200 ಎಂ.ಜಿ ಹಾಗೂ 2-19 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ 400 ಎಮ್.ಜಿ ಮಾತ್ರೆಯನ್ನು ನೀಡಲಾಗುವುದು . ಜಂತುಹುಳು ನಿವಾರಣಾ ಮಾತ್ರೆಯನ್ನು ಮಕ್ಕಳು ಹಾಗೂ ವಯಸ್ಕರಿಗೆ ಸಮಾನವಾಗಿ ನೀಡುವುದು . ಜಂತುಹುಳು ನಿವಾರಣಾ ಮಾತ್ರ ಅಗಿದು ತಿನ್ನುವುದು ಅಥವಾ ಚೀಪುವುದು . 1-2 ವರ್ಷದ ಮಕ್ಕಳಿಗೆ 12 ಮಾತ್ರ ( 200 ಎಮ್.ಜಿ ) ಯನ್ನು ಚಮಚಗಳ ಮಧ್ಯೆ ಪುಡಿ ಮಾಡಿ ತಿನ್ನಿಸಿ ನೀರು ಕುಡಿಸುವುದು . . . . ಜಂತುಹುಳು ಸೋಂಕು ನಿವಾರಣಾ ಚಿಕಿತ್ಸೆಯಿಂದ ಆಗುವ ಉಪಯೋಗಗಳು : ರಕ್ತಹೀನತೆಯನ್ನು ನಿಯಂತ್ರಿಸುವುದರ ಜೊತೆಗೆ ಪೌಷ್ಟಿಕಾಂಶದ ಕೊರತೆಯನ್ನು ನಿವಾರಿಸುತ್ತದೆ . ಶಾಲೆ ಏಕಾಗ್ರತೆಯನ್ನು ಹೆಚ್ಚಿಸುವುದರೊಂದಿಗೆ ಕಲಿಯುವ ಸಾಮರ್ಥ್ಯ ಮತ್ತು ಅಂಗನವಾಡಿ , ಕಾಲೇಜುಗಳಲ್ಲಿ ಹಾಜರಾತಿಯನ್ನು ಸುಧಾರಿಸುತ್ತದೆ . ವ್ಯಕ್ತಿಯ ಕೆಲಸದ ಸಾಮರ್ಥ್ಯ ಮತ್ತು ಜೀವಾನೋಪಾಯದ ಅವಕಾಶವನ್ನು ಹೆಚ್ಚಿಸಲು ಸಹಾಯ ಮಾಡುವುದರ ಜೊತೆಗೆ ಪರಿಸರದಲ್ಲಿ ಜಂತುಹುಳುಗಳ ಪ್ರಮಾಣವನ್ನು ಕಡಿಮೆಗೊಳಿಸಲು ಸಹಾಯಕವಾಗಿದೆ . ಆತಾ / ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು ರಾಷ್ಟ್ರೀಯ ಜಂತುಹುಳು_ದಿನಗಳಂದು ಅನುಸರಿಸಬೇಕಾದ ಕ್ರಮಗಳು 1 ಆಶಾ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು ( ಚಮಚವನ್ನು ಬಳಸಿ ) ಮಗುವಿಗೆ ಮಾತ್ರೆಯನ್ನು ನೀಡುವುದು . * ಮಕ್ಕಳು ಮಾತ್ರೆಗಳನ್ನು ತಾವೇ ಸೇವಿಸಬೇಕು ( ಬಲವಂತ ಪಡಿಸಬಾರದು ) ಮಾತ್ರೆಯನ್ನು ನುಂಗಬಾರದು , ಹೊರತಾಗಿ ಜಗಿಯಬೇಕು | ಚೀಪುವುದು . ಮಾತ್ರೆಗಳನ್ನು ಆಶಾ / ಆರೋಗ್ಯ ಕಾರ್ಯಕರ್ತೆಯರ ಸಮ್ಮುಖದಲ್ಲಿ ಜಗಿಯಬೇಕು | ಚೀಪುವುದು . ಯಾವುದೇ ಕಾರಣಕ್ಕೂ ಅನಾರೋಗ್ಯದಿಂದ ಬಳಲುತ್ತಿರುವ ಹಾಗೂ ಇತರೆ ಯಾವುದೇ ಔಷಧಿಯನ್ನು ಬಳಸುತ್ತಿರುವ ಮಕ್ಕಳಿಗೆ ಅಲ್ಬಂಡಾಜೋಲ್ ಮಾತ್ರೆಯನ್ನು ನುಂಗಿಸಬಾರದು . ಯಾವುದೇ ವೈದ್ಯಕೀಯ ಸಹಾಯಕ್ಕಾಗಿ 104 ಸಹಾಯವಾಣಿಗೆ ಕರೆ ಮಾಡಲು ಹಾಗೂ ಎಲ್ಲಾ ಹಂತಗಳಲ್ಲಿಯೂ ತುರ್ತು ನಿರ್ವಾಹಣ ತಂಡ ಹಾಗೂ ಘಟಕಗಳ ಮೂಲಕ ಸೂಕ್ತ ಚಿಕಿತ್ಸೆ ನೀಡಲು ತಯಾರಿರುವುದಾಗಿ ತಿಳಿಸಿದರು . . ಪ್ರಮಾಣಿತ ಕಾರ್ಯನಿರ್ವಹಣಾ ಪದ್ಧತಿ ( SOP ) ; ಕೋವಿಡ್ -19 ಕಂಟೈನ್‌ಮೆಂಟ್ ಜೋನ್‌ನಲ್ಲಿರುವ ಮಕ್ಕಳಿಗೆ ಮಾತ್ರೆಗಳನ್ನು ನೀಡಬಾರದು ಹಾಗೂ ಕೋವಿಡ್ -19 SOP ಯನ್ವಯ ಎಲ್ಲ ಆರೋಗ್ಯ ಕಾರ್ಯಕರ್ತರು ಹಾಗೂ ಸಾರ್ವಜನಿಕರು ( ಮಕ್ಕಳು ಸೇರಿದಂತೆ ) ಮಾಸ್ಕಗಳನ್ನು ಧರಿಸುವುದು , ಕೈಗಳನ್ನು ಸಾಬೂನಿನಿಂದ ತೊಳೆದುಕೊಳ್ಳುವುದು , ಸಾಮಾಜಿಕ ಅಂತರ ( ಕನಿಷ್ಠ 6 , ಅಡಿ ) ಕಾಪಾಡಿಕೊಳ್ಳುವುದು. ಪ್ರಕಟಣೆಯಲ್ಲಿ ತಿಳಿಸಲಾಗಿದೆ.


Share