ದಕ್ಷಿಣ ಪದವೀಧರ ಕ್ಷೇತ್ರದ ಮತದಾರರಿಗೆ ಅಧಿಕೃತ ಗುರುತಿನ ಚೀಟಿಯನ್ನ ನೀಡಲು ಆಗ್ರಹ

1140
Share

 

ಮೈಸೂರು:- ದಕ್ಷಿಣ ಪದವೀಧರ ಕ್ಷೇತ್ರದ ಮತದಾರರಿಗೆ ಅಧಿಕೃತ ಗುರುತಿನ ಚೀಟಿಯನ್ನ ನೀಡಿ ಸರ್ಕಾರದ ಸವಲತ್ತು ಪಡೆಯಲು ಮಾನ್ಯತೆ ಸಿಗುವಂತಾಗಲಿ ಎಂದು ವರಲಕ್ಷ್ಮಿ ಅಜಯ್ ಕಾರ್ಯದರ್ಶಿ ಜೀವಧಾರ ಪದವೀಧರ ಘಟಕದ ವತಿಯಿಂದ ಆಗ್ರಹಿಸಿದ್ದಾರೆ

ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ವ್ಯಾಪ್ತಿಗೆ ಒಳಪಡುವ ಪದವೀಧರರು ಮತ ಚಲಾಯಿಸುವ ದಕ್ಷಿಣ ಪದವೀಧರ ಚುನಾವಣೆ 2022ರಲ್ಲಿ ಮೊದಲ ಹಂತದ ಪದವೀಧರ ನೊಂದಣಿ ಪ್ರಕ್ರಿಯೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಪದವೀಧರರು ತಮ್ಮ ಹೆಸರನ್ನು ಸೇರಿಸಿದ್ದು ಮುಂದಿನ ದಿನದಲ್ಲಿ ಮೂರು ಲಕ್ಷ ಪದವೀಧರರು ಗುರಿದಾಟುವ ಸಾಧ್ಯತೆಯಿದ್ದು ಒಳ್ಳೆಯ ಬೆಳವಣಿಗೆ ಆದರೆ ಚುನಾವಣಾ ಆಯೋಗ ಕೇವಲ ಮತ ಚಲಾಯಿಸುವ ಹಕ್ಕಿಗಾಗಿ ಪದವೀಧರರಿಗೆ ಅವಕಾಶ ಕಲ್ಪಿಸುವ ಜೊತೆಯಲ್ಲೆ ಸ್ಥಳೀಯ ಮತಗಟ್ಟೆ ಅಧಿಕಾರಿಗಳನ್ನ ನೇಮಿಸಿ ಪದವೀಧರ ಮತದಾರ ಚೀಟಿಯನ್ನ ನೀಡುವಂತಾಗಬೇಕು ಮತ್ತು ಮತದಾರರ ಚೀಟಿಯನ್ನ ಅಧಿಕೃತ ದಾಖಲೆಯನ್ನಾಗಿ ಅಂದರೆ ಆಧಾರ್ ಕಾರ್ಡ್, ವೋಟರ್ ಐಡಿ, ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪಾಸ್ ಪೋರ್ಟ್, ಬ್ಯಾಂಕ್ ಪಾಸ್ ಬುಕ್ ಸೇರಿದಂತೆ ಇರುವ ದಾಖಲೆಗಳ ಮಾನ್ಯತೆಯಂತೆ ದಕ್ಷಿಣ ಪದವೀಧರ ಮತದಾರ ಗುರುತಿನ ಚೀಟಿಗೂ ಸರ್ಕಾರ ಚುನಾವಣಾ ಆಯೋಗ ನೀಡುವಂತಾಗಲಿ, ಇದರಿಂದ ಮತದಾರರ ಸಂಖ್ಯೆ ಮತಾದನದ ಪ್ರಮಾಣ ಹೆಚ್ಚಳವಾಗುತ್ತದೆ ಇದರ ಕಡೆ ಚುನಾವಣಾಧಿಕಾರಿಗಳು ಮತ್ತು ಸರ್ಕಾರ ಚಿಂತಿಸುವಂತಾಗಲಿ ..

ವರಲಕ್ಷ್ಮಿ ಅಜಯ್
ಕಾರ್ಯದರ್ಶಿ
ಜೀವಧಾರ ಪದವಿಧರ ಘಟಕ


Share