ದಸರಾ ಇಂದು 10, ಗಂಟೆ ನಂತರ ಗೋಲ್ಡ್ ಕಾರ್ಡ್ ಲಭ್ಯ

24
Share

ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿ ಮೆರವಣಿಗೆ, ಪಂಜಿನ ಕವಾಯತು ವೀಕ್ಷಣೆಗೆ *ಇಂದು 18/10/2023 ಬುಧವಾರ 10 ಗಂಟೆ ನಂತರ ಟಿಕೆಟ್ ಹಾಗೂ ಗೋಲ್ಡ್ ಕಾರ್ಡ್ ಲಭ್ಯವಿದೆ.* https://mysoredasara.gov.in ಮೂಲಕ ಖರೀದಿ ಮಾಡಬಹುದು.
ಗೋಲ್ಡ್ ಕಾರ್ಡ್ – ₹ 6,000
ಅರಮನೆ A. – ₹ 3,000
ಅರಮನೆ B – ₹ 2,000
ಪಂಜಿನ ಕವಾಯತು – ₹500
*ಸೂಚನೆ : ಆನ್‌ಲೈನ್ ಹೊರತುಪಡಿಸಿ ಬೇರೆ ಕಡೆ ಮಾರಾಟ ಇಲ್ಲ.  ಒಬ್ಬರಿಗೆ ಎರಡು ಗೋಲ್ಡ್ ಕಾರ್ಡ್ ಖರೀದಿಗೆ ಅವಕಾಶ*
*ವಿಶೇಷ ಮನವಿ :* ನನ್ನ ಅನುಭವದ ಪ್ರಕಾರ ಗೋಲ್ಡ್ ಕಾರ್ಡ್ ಅಥವಾ ಟಿಕೆಟ್ ಖರೀದಿ ಮಾಡಿ ಅರಮನೆಯಲ್ಲಿ ಪ್ರತ್ಯಕ್ಷವಾಗಿ ಜಂಬೂಸವಾರಿ ನೋಡುವುದು ಅಷ್ಟು ಸುಲಭವಲ್ಲ. ಅದರಲ್ಲೂ ಮಕ್ಕಳು ಹಿರಿಯರ ಜೊತೆ ದಸರಾ ಜಂಬೂಸವಾರಿ ವೀಕ್ಷಣೆ ಹರಸಾಹಸವೇ ಸರಿ. *ಬಿಸಿಲು ಮಳೆ ಜೊತೆಗೆ ಸರಿ ಸುಮಾರು 7 ಗಂಟೆಗಳ ಕಾಲ ಒಂದೇ ಕಡೆ ಕೂರಬೇಕಾದ ಅನಿವಾರ್ಯತೆ ಇದೆ.* ಅಷ್ಟೇ ಅಲ್ಲ ಜನಜಾತ್ರೆ ಜನ ಜಂಗುಳಿ ನೂಕಾಟ ತಳ್ಳಾಟ ಪ್ರತಿ ಕಡೆಯೂ ಇರುತ್ತದೆ. ಆದ್ದರಿಂದ ಅರಮನೆಯಲ್ಲಿ ಜಂಬೂಸವಾರಿ ನೋಡುವ ಮುನ್ನ 10 ಬಾರಿ ಯೋಚಿಸಿ ನಿರ್ಧರಿಸಿ. *ಅದರ ಬದಲು ಟಿವಿ9 ಮೂಲಕ ನೇರಪ್ರಸಾರದಲ್ಲೇ ಮನೆಯಲ್ಲೇ ಕುಳಿತು ಜಂಬೂಸವಾರಿ ವೀಕ್ಷಣೆ ಮಾಡಬಹುದು.*
*ರಾಮ್ ಮೈಸೂರು*

 


Share