ದಸರಾ-ಯುವ ಸಂಭ್ರಮ,ಗುಡುಗು ಸಿಡಿಲಿಗು ಸೆಡ್ಡು ಹೊಡೆಯುವಂತಹ ಚಪ್ಪಾಳೆ ಶಿಳ್ಳೆಗಳ ಸುರಿಮಳೆ

43
Share

*ಕನ್ನಡ ನಾಡು ನುಡಿಯ ವೈಭವಕ್ಕೆ ಸಾಕ್ಷಿಯಾದ ಯುವ ಸಂಭ್ರಮ*

ಮೈಸೂರು, ಅ.7:- ಪಡುವಣ ದಿಕ್ಕಿನಲ್ಲಿ ಸೂರ್ಯ ಮುಳುಗುತಿದ್ದಂತೆ, ಪಕ್ಷಿಗಳ ಶಬ್ಧದ ಕಲರವ ಕಡಿಮೆಯಾದ ಕ್ಷಣವೇ ಆಕಾಶವೇ ನಾಚುವಂತೆ ಬೆಳಕಿನ‌ ಚಿತ್ತಾರದಲ್ಲಿ ಕನ್ನಡ ನಾಡು ನುಡಿಯ ವೈಭವವನ್ನು ಕಣ್ಣಿಗೆ ಕಟ್ಟುವಂತೆ ನೃತ್ಯದ ಮೂಲಕ ಪ್ರದರ್ಶಿಸಿದ ಕ್ಷಣವೇ ಗುಡುಗು ಸಿಡಿಲಿಗು ಸೆಡ್ಡು ಒಡೆಯುವಂತಹ ಚಪ್ಪಾಳೆ ಶಿಳ್ಳೆಗಳ ಸುರಿಮಳೆ ನಡುವೆ ಯುವ ಸಮೂಹವು ಮಿಂದೆದದ್ದರು.

ಶನಿವಾರ ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ನಡೆದ ಮೈಸೂರು ದಸರಾ ಮಹೋತ್ಸದ ಪ್ರಮುಖ ಆಕರ್ಷಣೆಯಾದ ಯುವ ಸಂಭ್ರಮ ಕಾರ್ಯಕ್ರಮದಲ್ಲಿ ಕಂಡುಬಂದಂತಹ ದೃಶ್ಯ.

ಹೆಚ್.ಡಿ.ಕೋಟೆಯ ಸೆಂಟ್ ಮೆರಿಸ್ ಪಿಯು ಕಾಲೇಜಿನ ವಿದ್ಯಾರ್ಥಿಗಳಿಂದ ಕನ್ನಡ ನಾಡು ನುಡಿಯ ಬಗ್ಗೆ ತಿಳಿಸುವಂತಹ ದರ್ಶನ್ ಅಭಿನಯದ ಕ್ರಾಂತಿ ಚಿತ್ರದ ಧರಣಿ ಮಂಡಲ ಮಧ್ಯದೊಳಗೆ ಚಿತ್ರದ ಗೀತೆಗೆ ಹೆಜ್ಜೆ ಹಾಕುವ ಮೂಲಕ ನೋಡುಗರನ್ನು ರಂಜಿಸಿದರು.

ರಾಮನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ವಿದ್ಯಾರ್ಥಿಗಳಿಂದ ರಾಷ್ಟ್ರೀಯ ಭಾವೈಕ್ಯತೆಯನ್ನು ಸಾರುವಂತಹ ಸಂಗೀತಕ್ಕೆ ನರ್ತಿಸುವ ಮೂಲಕ ಭಾರತವು ವಿವಿಧತೆಯಲ್ಲಿ ಏಕತೆ ಇದೆ ಎಂಬುದನ್ನು ಪ್ರದರ್ಶಿಸಿದರು.

ಮಹಿಳಾ ಸಬಲೀಕರದ ಬಗ್ಗೆ ಸುಂದರವಾಗಿ ತಿಳಿಸುವ ಸಲುವಾಗಿ ರಾಮನಗರದ ಭಾರತೀಯ ಸಂಸ್ಕೃತಿ ವಿದ್ಯಾಪೀಠದ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳ ತಂಡ ಕಿಚ್ಚ ಸುದೀಪ್ ಹಾಗೂ ರಮ್ಯ ಅಭಿನಯದ ಜಸ್ಟ್ ಜಸ್ಟ್ ಮಾತ್ ಮಾತಲಿ ಚಿತ್ರದ ಎಲ್ಲೊ ಜಿನುಗಿರುವ ನೀರು ಎಂಬ ಹಾಡಿಗೆ ಹಾಗೂ ರಘು ದೀಕ್ಷಿತ್ ಹಾಡಿರುವ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಸಭಿಕರ ಗಮನ ಸೆಳೆದರು.

ದೇಶದ ಬೆನ್ನೆಲುಬಾಗರಿವ ರೈತರ ಬಗ್ಗೆ ಹಾಗೂ ಅವರ ಕಷ್ಟಗಳ ಬಗ್ಗೆ ವಿಷ್ಣುವರ್ಧನ್ ಅಭಿನಯದ ನಿನೆಲ್ಲೋ ನಾಅಲ್ಲೆ ಚಿತ್ರದ ಆಕಾಶ ಭೂಮಿ ಮಡಿಲಲ್ಲಿ ಬೆಳೆದ ಹಾಡಿಗೆ ಹೆಜ್ಜೆ ಹಾಕುವ ಮೂಲಕ ನೋಡುಗರಿಗೆ ಮನ ಮುಟ್ಟುವಂತೆ ರೈತರ ಕಷ್ಟಗಳ ಬಗ್ಗೆ
ಪಾಂಡವಪುರದ ಜ್ಞಾನಬಂಧು ವಿದ್ಯಾಲಯದ ಹಾಗೂ ಹುಣಸೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು
ಅರಿವು ಮೂಡಿಸಿದರು.

ದೇಶದ ಗಡಿ ಕಾಯುವ ಸೈನಿಕರ ದೇಶ ಪ್ರೇಮದ ಬಗ್ಗೆ ತಿಳಿಸುವ ಸಲುವಾಗಿ ವಿವಿಧ ಚಿತ್ರದ ದೇಶ ಪ್ರೇಮವನ್ನು ಮೂಡಿಸುವ ಚಿತ್ರಗೀತೆಗಳಿಗೆ ಹೆಜ್ಜೆ ಹಾಕುವ ಮೂಲಕ ನೆರೆದಿದ್ದಂತಹ ಜನರನ್ನು ಮನರಂಜಿಸಿದರು. ಮೈಸೂರಿನ ಕರ್ಣಾಮಯಿ ಫೌಂಡೇಶ್ ನನ ವಿಶೇಷ ಮಕ್ಕಳ ತರಬೇತಿ ಶಾಲೆಯ ವಿಶೇಷ ಮಕ್ಕಳು ಕಾಂತರ ಚಿತ್ರಗೀತೆ ವರಾಹ ರೂಪಂ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಪ್ರೇಕ್ಷಕರ ಗಮನ ಸೆಳೆದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಸೇರಿದಂತೆ ಇತರರು ಹಾಜರಿದ್ದರು.


Share