MP ಸ್ನ್ಯಾಕ್ಸ್ : ತ್ರಿವಳಿ ಸಂಗಮ

318
Share

ತ್ರಿವಳಿ ಸಂಗಮ : ಒಗಟು, ಗಾದೆ ಹಾಗೂ ರಸಪ್ರಶ್ನೆ

ಪುರಾತನ ಕಾಲದಿಂದಲೂ ಒಗಟುಗಳು ಹಾಗೂ ಗಾದೆಗಳು ಜನಜನಿತವಾದ ಅನುಭವಗಳಿಂದ ನುಡಿಯಲ್ಪಟ್ಟ ಸತ್ಯವಾಕ್ಯಗಳು. ಹಿರಿಯರು ಹೇಳುವ ಹಾಗೆ ಗಾದೆಗಳು ಎಂದು ಸುಳ್ಳಾಗುವುದಿಲ್ಲ. ತಾತ, ಅಜ್ಜಿ, ತಂದೆ, ತಾಯಿ ಹಾಗೂ ಹಿರಿಯರು ತಮ್ಮ ಮನೆಗಳಲ್ಲಿ ಮಕ್ಕಳು ಮಾಡಿದ ತಪ್ಪನ್ನು ತಿದ್ದಲು ಗಾದೆಗಳನ್ನು ಉದಾಹರಣೆಯಾಗಿ ಕೊಟ್ಟು ಅವರಿಗೆ ಚೆನ್ನಾಗಿ ಮನವರಿಕೆಯಾಗುವಂತೆ ಮಾಡುತ್ತಿದ್ದರು.
ಎಲ್ಲರೂ ಓದಿ ಆನಂದಿಸಿ ಮುಂದೆ ಬರುವ ನಿಮ್ಮ ಮಕ್ಕಳು ಮೊಮ್ಮಕ್ಕಳಿಗೂ ತಿಳಿಸಿ.

* ಒಗಟು :
ತಕ್ಕಡೀಲಿ ಇಟ್ಟು ಮಾರೋ ಹಾಗಿಲ್ಲ
ಅದಿಲ್ಲದೆ ಹಬ್ಬ ಆಗೋ ಹಾಗಿಲ್ಲ
ಇದು ಏನು ?

ಗಾದೆ :
ಎಂಟು ವರ್ಷಕ್ಕೆ ನನ್ಮಗ ದಂಟೂಂದ

ರಸಪ್ರಶ್ನೆ :
ಭಾರತದಲ್ಲಿ ಗೋಡಂಬಿಗಳನ್ನು ಅಧಿಕವಾಗಿ ರಫ್ತು ಮಾಡುವ ರಾಜ್ಯ ಯಾವುದು ?

* ಉತ್ತರ :

ಒಗಟು : ಬಾಳೆ ಎಲೆ
ರಸಪ್ರಶ್ನೆ : ಕೇರಳ ರಾಜ್ಯ

* ಸಂಗ್ರಹ
ಟಿ.ವಿ.ಪದ್ಮ ಶೇಖರ್
ಮೇಲುಕೋಟೆ


Share